ಹೊಸಪೇಟೆ

ವಿಜಯನಗರ ಜಿಲ್ಲೆ ಮುಖಾಂತರ ಸದರಿ ಮನವಿ.

ವಿಜಯನಗರ ಜಿಲ್ಲೆ ಮುಖಾಂತರ ಸದರಿ ಮನವಿ.

ವಿಜಯನಗರ ಜಿಲ್ಲೆ ಮುಖಾಂತರ ಸದರಿ ಮನವಿ.  

ಹೊಸಪೇಟೆ 05; ರಾಜ್ಯದಲ್ಲಿ ರೈತರ ಜಮೀನುಗಳ ಪಹಣಿ ಹಕ್ಕುಗಳ ಕಾಲಂ-9 ಮತ್ತು 11ರಲ್ಲಿ ವಕ್ಫ್‌ ಆಸ್ತಿ ಬಗ್ಗೆ ವಿಚಾರಣೆ ಹಂತದಲ್ಲಿರುವುದೆಂದು ಮತ್ತು ವಕ್ಫ್‌ ಆಸ್ತಿ ಎಂದು ನಮೂದಾಗಿದ್ದು ಅದನ್ನು ರದ್ದುಗೊಳಿಸಿ ರೈತರನ್ನು ರಕ್ಷಿಸುವ ಕುರಿತು.  

ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ರಾಜ್ಯದಲ್ಲಿ ಈಗಾಗಲೇ ಹಲವಾರು ಜಿಲ್ಲೆಗಳಲ್ಲಿ ರೈತರ ಜಮೀನಿನ ಪಹಣಿ ಹಕ್ಕುಗಳ ಕಾಲಂ ನಂ:9 ಮತ್ತು 11ರಲ್ಲಿ ವಕ್ಫ್‌ ಆಸ್ತಿ ಬಗ್ಗೆ ವಿಚಾರಣೆ ಹಂತದಲ್ಲಿರುವುದೆಂದು ಮತ್ತು ವಕ್ಫ್‌ ಆಸ್ತಿ ಎಂದು ನಮೂದಾಗಿದ್ದು ಇದನ್ನು ಜಾರಿಗೊಳಿಸಿದ ರಾಜ್ಯ ಸರ್ಕಾರ ಮತ್ತು ವಕ್ಪ್‌ ಬೋರ್ಡ್‌ ಅಧಿಕಾರಿಗಳ ವಿರುದ್ಧ ನಮ್ಮ ಧಿಕ್ಕಾರವಿರುತ್ತದೆ. ತಲತಲಾಂತರದಿಂದ ರೈತರು ಜಮೀನುಗಳಲ್ಲಿ ಉಳಿಮೆ ಮಾಡಿಕೊಂಡು ಬಂದಿರುತ್ತಾರೆ. ಹಾಗೇಯೇ ಕೆಲ ರೈತರು ಜಮೀನು ಖರೀದಿ ಮಾಡಿ ಉಳಿಮೆ ಮಾಡುತ್ತಿದ್ದಾರೆ.  

ಮತ್ತು ಈಗಾಗಲೇ ವಿಜಯನಗರ ಜಿಲ್ಲೆಯ ಕೊಟ್ಟೂರು ಭಾಗದಲ್ಲಿ ಕೆಲ ರೈತರಿಗೆ ಯಾವುದೇ ಮುನ್ಸೂಚನೆ ನೀಡದೇ ಏಕಾಏಕಿಯಾಗಿ ನೋಟಿಸ್‌ಗಳನ್ನು ಜಾರಿ ಮಾಡಿರುತ್ತಾರೆ. ಹೊಸಪೇಟೆಯ ಕೆಲ ಭಾಗದ ರೈತರಿಗೆ ಕೂಡ ನೋಟಿಸ್‌ಗಳನ್ನು ನೀಡಿ, ಸಂಬಂಧಪಟ್ಟ ಅಧಿಕಾರಿಗಳೆ ದೌರ್ಜನ್ಯದಿಂದ ಇದರ ಬಗ್ಗೆ ಯಾರಿಗೂ ಹೇಳದಂತೆ ದಬ್ಬಾಳಿಕೆಯಿಂದ ರೈತರ ಮೇಲೆ ಒತ್ತಡ ಹಾಕುತ್ತಿದ್ದಾರೆ. ಆದ್ದರಿಂದ ನೋಟಿಸ್‌ಗಳ ಬಗ್ಗೆ ಯಾವುದೇ ರೀತಿಯಾಗಿ ರೈತರು ಮಾತನಾಡುತ್ತಿಲ್ಲ.  

ಈ ಕಾಂಗ್ರೆಸ್ ಸರ್ಕಾರ ಇದ್ದಕ್ಕಿದ್ದಂತೆ ಏಕಾಏಕಿ ಈ ಒಂದು ರೈತರ ಭೂಮಿಗಳನ್ನು ಕಬಳಿಸುವ ಹುನ್ನಾರ ನಡೆಸುತ್ತಿದೆ. ಇದು ಯಾವುದೇ ಕಾರಣಕ್ಕೂ ರೈತರು ತಮ್ಮ ಜಮೀನನ್ನು ಬಿಟ್ಟುಕೊಡಬಾರದು ಮತ್ತು ಬಿಟ್ಟುಕೊಡುವ ಮಾತೇ ಇಲ್ಲ. ಈಗ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಲವಾರು ರೈತರ ಪಹಣಿಗಳಲ್ಲಿ ಹಕ್ಕುಗಳ ಕಾಲಂ ನಂ:9 ಮತ್ತು 11ರಲ್ಲಿ ವಕ್ಫ್‌ ಆಸ್ತಿ ಬಗ್ಗೆ ವಿಚಾರಣೆ ಹಂತದಲ್ಲಿರುವುದೆಂದು ಮತ್ತು ವಕ್ಫ್‌ ಆಸ್ತಿ ಎಂದು ನಮೂದಾಗಿದ್ದು ಅದನ್ನು ಕೂಡಲೇ ರದ್ದುಗೊಳಿಸಿ ಸರಿಪಡಿಸಬೇಕೆಂದು ಹೇಳುತ್ತೇವೆ, ಇಲ್ಲದಿದ್ದಲ್ಲಿ ರೈತರು ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ. ಮತ್ತು ಇದರಿಂದ ರೈತರಿಗೆ ಏನಾದರೂ ತೊಂದರೆ ಉಂಟಾದರೆ ಇದಕ್ಕೆ ಕಾಂಗ್ರೆಸ್ ಸರ್ಕಾರವೇ ನೇರ ಹೊಣೆಯಾಗುತ್ತದೆಂದು ಎಚ್ಚರಿಕೆ ನೀಡುತ್ತಿದ್ದೇವೆ.  

ಈ ಸಂದರ್ಭದಲ್ಲಿ ಸಣ್ಣಕ್ಕಿ ರುದ್ರ​‍್ಪ, ತಾಲೂಕು ಅಧ್ಯಕ್ಷರು ಮಾತನಾಡಿ ರಾಜ್ಯದಲ್ಲಿ ಸುಮಾರು ರೈತರಿಗೆ ಕಾಲಂ-9 ಮತ್ತು 11ರಲ್ಲಿ ವಕ್ಪ್‌ ಆಸ್ತಿ ಎಂದು ನಮೂದಾಗಿರುತ್ತದೆ. ಈ ಕೂಡಲೇ ಇದನ್ನು ವಾಪಸ್ಸು ಪಡೆಯಬೇಕು ಈ ವ್ಯವಸ್ಥೆಯು ಕಾಂಗ್ರೆಸ್ ಸರ್ಕಾರದ ಹಿಟ್ಲರ್ ಆಡಳಿತ ಆಗಿರುತ್ತದೆ. ಸಿದ್ದರಾಮಯ್ಯ ರವರೇ ಈ ತಕ್ಷಣ ಬಿ.ಜೆಡ್‌.ಜಮೀರ್ ಅಹಮ್ಮದ್ ಖಾನ್ ಇವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು. ಇಲ್ಲವಾದಲ್ಲಿ ವಿಜಯನಗರ ಜಿಲ್ಲೆಯಲ್ಲಿ ಬಂದರೆ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆವತಿಯಿಂದ ಕಪ್ಪು ಭಾವುಟ ಪ್ರದರ್ಶನ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗುವುದು ಎಂದು ಮಾತನಾಡಿದರು.  

ಇದೇ ಸಂದರ್ಭದಲ್ಲಿ ಮೆಟ್ರಿ ಜಡೆಪ್ಪ ಕಾರ್ಯಧ್ಯಕ್ಷರು  ಮಾತನಾಡಿ ಈ ಸರ್ಕಾರ ಯಾವುದೇ ಮುನ್ಸೂಚನೆ ನೀಡದೇ ರೈತರಿಗೆ ವಕ್ಪ್‌ ಕಡೆಯಿಂದ ನೇರವಾಗಿ ನೋಟಿಸ್ ನೀಡಿದ್ದು ಅಕ್ಷಮ್ಯ ಅಪರಾದ. ರೈತರ ಪಹಣಿಯಲ್ಲಿ ಯಾವುದಾದರು ಹೆಸರು ತಿದ್ದುಪಡಿ ಇದ್ದರೆ ಸರ್ಕಾರಿ ಕಛೇರಿಗಳಿಗೆ ಸಾವಿರಬಾರಿ ಅಲೆದಾಡಿಸುತ್ತಿರಿ. ಆದರೆ ಅದೇ ಪಹಣಿಯಲ್ಲಿ ವಕ್ಪ್‌ ಬೋರ್ಡ್‌ ಎಂದು ಕಾಲಂ-9 ಮತ್ತು 11 ರಲ್ಲಿ ಯಾವುದೇ ರೈತರಿಗೆ ಮಾಹಿತಿ ಇಲ್ಲದೇ ಕಾನೂನು ಬಾಹಿರವಾಗಿ ತಿಳಿಸದೇ ತಮ್ಮ ಕಂದಾಯ ಕಛೇರಿಯಲ್ಲಿಯೇ ಈ ರೀತಿಯಾಗಿ ಮಾಡಿರುವುದು ಕಾಂಗ್ರೆಸ್ ಸರ್ಕಾವು ಜನತೆಗೆ ಮಾಡಿರುವ ಮೋಸ ಮತ್ತು ವಂಚನೆಯಾಗಿರುತ್ತದೆ ಎಂದು ಮಾತನಾಡಿದರು.  

ಕೃಷಿಕಾಯ್ದೆಯನ್ನು ರಾಜ್ಯದಲ್ಲಿ ತಂದಾಗ ವಿರೋದ ಪಕ್ಷದ ನಾಯಕರಾದ ಇದೇ ಸಿದ್ದರಾಮಯ್ಯ ರವರು ನಮ್ಮ ಸರ್ಕಾರ ಬಂದು 24 ತಾಸಿನೊಳಗೆ ನಾನು ಕೃಷಿಕಾಯ್ದೆಯನ್ನು ಹಿಂಪಡೆಯುತ್ತೇನೆ ಎಂದು ಮಾತುಕೊಟ್ಟು, ಭವಸೆ ನೀಡಿರುತ್ತಾರೆ. ಆದರೆ ಕಾಂಗ್ರೆಸ್ ಸರ್ಕಾರ ಬಂದು 1.5ವರ್ಷ ಆದರೂ ಸಹ ಇಲ್ಲಿಯವರೆಗೂ ಕೃಷಿ ಕಾಯ್ದೆಯನ್ನು ವಾಪಸ್ಸು ಪಡೆದಿರುವುದಿಲ್ಲ. ಮೇಲಾಗಿ ರೈತರಿಗೆ ಮೋಸ ಮಾಡುವ ದೃಷ್ಟಿಯಿಂದ ಪಹಣಿ ಕಾಲಂ-9 ಮತ್ತು 11ರಲ್ಲಿ ವಕ್ಪ್‌  ಆಸ್ತಿ ಎಂದು ನಮೂದು ಮಾಡಿ ರೈತರಿಗೆ ಬರೆ ಮೇಲೆ ಬರೆ ಎಳೆದಿರುತ್ತಾರೆ ಎಂದು ಮಾತನಾಡಿದರು.  

ಈ ಸಂದರ್ಭದಲ್ಲಿ ಸಣ್ಣಕ್ಕಿ ರುದ್ರ​‍್ಪ ತಾಲೂಕು ಅಧ್ಯಕ್ಷರು, ಟಿ.ನಾಗರಾಜ್ ಜಿಲ್ಲಾಧ್ಯಕ್ಷರು, ಮೆಟ್ರಿ ಜಡೆಪ್ಪ ಕಾರ್ಯಧ್ಯಕ್ಷರು, ಜಿಲ್ಲಾ ಉಪಾಧ್ಯಕ್ಷರಾದ ಆರ್‌.ಆರ್‌.ತಾಯಪ್ಪ,  ವಿ.ಗಾಳೆಪ್ಪ, ರಾಮಾಂಜಿನಿ, ಸತೀಶ, ನಾಗೇಶ, ಜೆ.ಜಿ.ವಿರುಪಾಕ್ಷಿ, ಎಲ್‌.ನಾಗೇಶ್, ಕೆ.ಸುರೇಶ, ಮನಸಾಲಿ ರಾಘವೇಂದ್ರ, ಸಾಗರ್, ಮೂರ್ತಿ, ಬಾಬು, ಇನ್ನಿತರ ರೈತರು ಉಪಸ್ಥಿತರಿದ್ದರು.   ಈ ವರದಿಯನ್ನು ತಮ್ಮ ಪತ್ರಿಕೆ ಮತ್ತು ಮಾಧ್ಯಮದಲ್ಲಿ ಜರೂರಾಗಿ ಪ್ರಕಟಗೊಳಿಸಿ ಈ ಕಾಂಗ್ರೆಸ್ ಸರ್ಕಾರ ಮತ್ತು ವಕ್ಪ್‌ ಬೋರ್ಡ್‌ ಮಾಡುತ್ತಿರುವ ಅನ್ಯಾಯ, ಮೋಸ, ವಂಚನೆ ಇವುಗಳನ್ನು ಜನರಿಗೆ ತೋರಿಸಿ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ತಡೆಗಟ್ಟಲು ಕೈಜೋಡಿಸಬೇಕೆಂದು ಈ ಮೂಲಕ ಪತ್ರಿಕಾ ಮತ್ತು ಮಾಧ್ಯಮದವರಲ್ಲಿ ಕಳಕಳಿಯಿಂದ ಕೇಳಿಕೊಳ್ಳುತ್ತಿದ್ದೇವೆ. 


ಸುದ್ದಿ ಓದಿ