ವಿದ್ಯಾರ್ಥಿಗಳು ಪಠ್ಯ, ಪಠ್ಯೇತರ ಚಟುವಟಿಕೆ ಎರಡು ಮುಖ್ಯ: ಶಿಂತ್ರಿ
ಲೋಕದರ್ಶನ ವರದಿ
ಸವದತ್ತಿ 18: ವಿದ್ಯಾರ್ಥಿಗಳು ತಮ್ಮ ಮುಂದಿನ ಭವಿಷ್ಯವನ್ನು ಉತ್ತಮವಾಗಿ ನಿರ್ಮಿಸಿಕೊಳ್ಳಲು ಅಧ್ಯಯನದ ಕಡೆಗೆ ವಿಶೇಷವಾಗಿ ಗಮನಹರಿಸಬೇಕಿದ್ದು, ಅದರಂತೆ ಪಠೇತರ ಚಟುವಟಿಕೆಗಳಲ್ಲಿಯು ಪಾಲ್ಗೊಳ್ಳುವದರಿಂದ ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಲು ಸಾಧ್ಯ ಎಂದು ಪಿಎಲ್ಡಿ ಬ್ಯಾಂಕ ಅಧ್ಯಕ್ಷರು ಹಾಗೂ ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷ ಜಗದೀಶ ಶಿಂತ್ರಿ ಹೇಳಿದರು.
ಸ್ಥಳೀಯ ಕೆ.ಎಲ್.ಇ ಸಂಸ್ಥೆಯ ಅಂಗ ಸಂಸ್ಥೆಯಾದ ಎಸ್.ಕೆ.ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರದಂದು ನಡೆದ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶಿಸ್ತು ಹಾಗೂ ಶ್ರಮದ ಮೂಲಕ ವಿದ್ಯಾರ್ಥಿ ಜೀವನದಲ್ಲಿ ಪ್ರಗತಿಯನ್ನು ಸಾಧಿಸಲು ಸಾಧ್ಯ ಎಂದರು.
ಪ್ರಾಚಾರ್ ಬಿ.ಕೆ.ಕಠಾರೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಿವಾನಂದ ಜವಳಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಎದುರಾಗುವ ಸಮಸ್ಯೆಗಳು ಮತ್ತು ಮಹತ್ವದ ಘಟ್ಟಗಳ ಬಗ್ಗೆ ವಿವಿರಣೆ ನೀಡುತ್ತ ಸತತ ಪರಿಶ್ರಮದಿಂದ ಪ್ರಗತಿ ಸಾಧ್ಯ ಎಂಬುದನ್ನು ತಿಳಿಸಿದರು.
ಹಿರಿಯ ಉಪನ್ಯಾಸಕರಾದ ಎಂ.ಬಿ. ವಾಲಿ ಇವರು ವಿದ್ಯಾರ್ಥಿಗಳ ಪರೀಕ್ಷೆಯ ಸಾಧನೆಯನ್ನು ಕುರಿತು ಮತ್ತು ಒಕ್ಕೂಟದ ಅಧ್ಯಕ್ಷ ಎಮ್.ಆರ್. ಶಿವನಾಯ್ಕರ ಇವರು ವಿವಿಧ ಚಟುವಟಿಗಳ ಪದಾಧಿಕಾರಿಗಳನ್ನು ಸೂಚಿದರು.
ಸರಕಾರಿ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕಾಲೇಜಿನ ಹಳೆಯ ವಿದ್ಯಾರ್ಥಿಗಳನ್ನು ಈ ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯರಾದ ಎಸ್.ಬಿ. ಗುಡೆನ್ನವರ, ಎಮ್.ಟಿ. ಶಿಗ್ಲಿ, ಎ.ಬಿ. ಮೇಟಿ, ಎಮ್.ಜಿ.ಪಾಟೀಲ ಉಪಸ್ಥಿತರಿದ್ದರು.
ನಾಗರಾಜ ಸಕ್ರೆಪ್ಪನವರ ನಿರೂಪಿಸಿದರು. ಪಿ.ಎಸ್. ಹಾದಿಮನಿ ವಂದಿಸಿದರು