ಸಿರುಗುಪ್ಪ

ವಿದ್ಯಾರ್ಥಿಗಳು ತಮ್ಮ ಗುರಿಯತ್ತ ಮುಂದೆ ಸಾಗಲು ಶ್ರಮಿಸಲಿ: ಸತ್ಯನಾರಾಯಣರಾವ್

ವಿದ್ಯಾರ್ಥಿಗಳು ತಮ್ಮ ಗುರಿಯತ್ತ ಮುಂದೆ ಸಾಗಲು ಶ್ರಮಿಸಲಿ: ಸತ್ಯನಾರಾಯಣರಾವ್

ಸಿರುಗುಪ್ಪ 19: ಶಾಲಾ ಕಾಲೇಜು ಹಂತದಲ್ಲಿ ಯುವ ಸಮೂಹ ತಪ್ಪು ಹೆಜ್ಜೆ ಹಾಕುವುದು ಸಹಜ. ಯುವಜನತೆ ಸಾಮಾಜಿಕ ಕಳಕಳಿ ಬೆಳೆಸಿಕೊಂಡು ಪೋಷಕರ ಕಾಲೇಜಿನ ಘನತೆ ಹೆಚ್ಚಿಸುವ ಮಹತ್ವದ ಕಾರ್ಯಗಳನ್ನು ಮಾಡಬೇಕು ಎಂದು ಡಿ ವೈ ಎಸ್ ಪಿ ಸತ್ಯನಾರಾಯಣರಾವ್ ಹೇಳಿದರು.

 ನಗರದ ಎಸ್ಈಎಸ್ ನ ಬಿ ಇ ಹನುಮಂತಮ್ಮ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಪೊಲೀಸ್ ಇಲಾಖೆಯು ಆಯೋಜಿಸಿದ 2022ನೇ ಸಾಲಿನ ಅಪರಾಧ ತಡೆ ಮಾಸಾ ಆಚರಣೆ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಇಂದಿನ ಸ್ಪಧರ್ಾತ್ಮಕ ದಿನ ಮಾನಗಳಲ್ಲಿ ವಿದ್ಯಾಥರ್ಿಗಳು ತಮ್ಮ ಗುರಿಯತ್ತ ಮುಂದೆ ಸಾಗಲು ಶ್ರಮಿಸಬೇಕೆಂದರು.

 ಪೊಲೀಸ್ ಸಬ್ ಇನ್ಸ್ಪೆಕ್ಟರ್ ಕೆ ರಂಗಯ್ಯ, ಕಾಲೇಜಿನ ಪ್ರಾಂಶುಪಾಲ ಆರ್ ಭೀಮಸೇನ್ ಜೋಶಿ, ಎನ್ ಎಸ್ ಎಸ್ ಅಧಿಕಾರಿ ರುದ್ರಪ್ಪ, ಉಪನ್ಯಾಸಕರಾದ ಪವನ್ ಕುಮಾರ್, ಅಜರುದ್ದೀನ್, ರಾಘವೇಂದ್ರ, ಚಂದ್ರಶೇಖರ್, ನಾಗರಾಜ್, ಜಿಲ್ಲಾ ಸಾಕ್ಷರತಾ ಸದಸ್ಯ ಜನ ಅಭಿಪ್ರಾಯ ಮುಖಂಡ ಅಬ್ದುಲ್ ನಬಿ, ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ನೌಶಾದ್ ಅಲಿ ಕಾಲೇಜು ವಿದ್ಯಾಥರ್ಿಗಳು ಇದ್ದರು 

ಸುದ್ದಿ ಓದಿ