ಬಳ್ಳಾರಿ

ಎಲ್.ಎಲ್.ಸಿ ದುರಸ್ಥಿ ಕಾರ್ಯ ನಿಲ್ಲಿಸಿ, ಕಾಲುವೆಗೆ ನೀರು ಹರಿಸಿ: ಪುರುಷೋತ್ತಮಗೌಡ ಮನವಿ

ಎಲ್.ಎಲ್.ಸಿ ದುರಸ್ಥಿ ಕಾರ್ಯ ನಿಲ್ಲಿಸಿ, ಕಾಲುವೆಗೆ ನೀರು ಹರಿಸಿ: ಪುರುಷೋತ್ತಮಗೌಡ ಮನವಿ

ಬಳ್ಳಾರಿ:ಜು(24)ರಂದು  ಕಳೆದ ವರ್ಷ ಜೂನ್ ಮೂರನೇ ವಾರದಷ್ಟೊತ್ತಿಗೆ ಎಲ್.ಎಲ್.ಸಿ ಮತ್ತು ಎಚ್.ಎಲ್.ಸಿ ಕಾಲುವೆಗೆ ನೀರು ಬಿಟ್ಟಿದ್ದರು, ಈ ವರ್ಷ ಇಲ್ಲಿಯವರೆಗೂ ಕಾಲುವೆಗಳಿಗೆ ನೀರು ಹರಿಸಿಲ್ಲ, ಮಳೆ ಅಭಾವದಿಂದ ತುಂಗಭದ್ರ ಜಲಾಶಯಕ್ಕೆ ನೀರಿನ ಹರಿವು ಕಡಿಮೆಯಾಗಿದೆ, ಅದೃಷ್ಟವಶ್ ಎರಡು ಮೂರು ದಿನಗಳಿಂದ ನೀರು ಬರುತ್ತಿದ್ದು ಕಾಲುವೆ ದುರಸ್ಥಿ ಕಾರ್ಯಗಳನ್ನು ನಿಲ್ಲಿಸಿ ಕಾಲುವೆಗೆ ನೀರು ಹರಿಸಿ ರೈತರ ಹಿತ ಕಾಪಾಡಬೇಕೆಂದು ತುಂಗಭದ್ರ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮ ಗೌಡ ಒತ್ತಾಯಿಸಿದರು.  

ಅವರು ಇಂದು ನಗರದ ಸ್ನೇಹ ಸಂಪುಟದ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿ, ಜಲಾಶಯದಲ್ಲಿ ಕಳೆದ ವರ್ಷಕ್ಕೆ ಹೊಲಿಸಿದಲ್ಲಿ ಈ ವರ್ಷ ಕಡಿಮೆ, ಅಂದರೆ ಕೇವಲ 26. ಟಿ.ಎಂ.ಸಿಗಳಷ್ಟು ನೀರು ಸಂಗ್ರಹವಾಗಿದೆ ಇನ್ನೂ ಸುಮಾರು 46 ಸಾವಿರ ಕ್ಯೂಸೆಕ್ಸ್ ನಷ್ಟು ನೀರು ಜಲಾಶಯಕ್ಕೆ ನೀರು ಹರಿದು ಬರುತ್ತಿದೆ, ಮತ್ತು ಭದ್ರಾ ಜಲಾಶಯದಿಂದಲೂ ಸಹ 60 ಸಾವಿರ ಕ್ಯೂಸೆಕ್ಸ್ ನೀರು ಬಿಡಲಾಗುತ್ತಿದೆ ಇದು ರೈತರಿಗೆ ಸಂತಸದ ವಿಷಯ, ಕಾರಣ ನೀರಾವರಿ ಸಲಹಾ ಸಮಿತಿ ಸಭೆ ಕರೆದು ಚರ್ಚಿಸಿ ರಾಯ ಬಸವ ಸೇರಿದಂತೆ ಎಲ್ಲಾ ಕಾಲುವೆಗಳಿಗೆ ನೀರು ಹರಿಸಲು ಕ್ರಮಕೈಗೊಂಡು ರೈತರ ಆತಂಕವನ್ನು ದೂರ ಮಾಡಬೇಕು, ಈಗಾಗಲೇ ಮೆಣಸಿನ ಸಸಿ ಹಾಕಿ ನಾಟಿಗಾಗಿ ಕಾಯುತ್ತಿದ್ದಾರೆ, ಕಾಲುವೇ ರಿಪೇರಿ ಕೆಲಸದಿಂದ ನೀರು ಬಿಡುವುದನ್ನು ಮುಂದೂಡಬಾರದು, ಅಕ್ವಡೆಕ್ಟ್ ಕಾಮಗಾರಿ ಹೊರತುಪಡಿಸಿ ಎಲ್ಲಾ ರೀತಿಯ ದುರಸ್ಥಿ ಕಾರ್ಯಗಳನ್ನು ನಿಲ್ಲಿಸಿ ರೈತರ ಹಿತ ಕಾಪಾಡಬೇಕೆಂದು ಯವಜನ ಸೇವೆ, ಕ್ರೀಡಾ ಮತ್ತು ಪರಿಶಿಷ್ಟ ವರ್ಗಗಳ ಇಲಾಖೆ ಸಚಿವ ಮತ್ತು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ ನಾಗೇಂದ್ರರವರನ್ನು ಮನವಿ ಮಾಡಿದರು.   

ಪತ್ರಿಕಾಗೋಷ್ಠಿಯಲ್ಲಿ ಬಾಲೆಸಾಬ್, ಗೋವಿಂದಪ್ಪ, ಭೀಮಣ್ಣ, ಮಲ್ಲಪ್ಪ, ವೀರನಗೌಡ, ವೀರಭದ್ರನಾಯಕ, ಮಲ್ಲಾರೆಡ್ಡಿ, ರಾಜಾಸಾಬ್, ಖಾಜಾವಳಲಿ, ಬಸರವಾಜ್ ಸೇರಿದಂತೆ ಇತರರಿದ್ದರು 

ಸುದ್ದಿ ಓದಿ