ಮುಂದಗೋಡ

ನೀರಿನ ಸೆಳೆತವಿರುವ ಜಲಮೂಲಗಳಿಂದ ದೂರವಿರಬೇಕು:ತಹಶೀಲ್ದಾರ ಶಂಕರ ಗೌಡಿ

ನೀರಿನ ಸೆಳೆತವಿರುವ ಜಲಮೂಲಗಳಿಂದ ದೂರವಿರಬೇಕು:ತಹಶೀಲ್ದಾರ ಶಂಕರ ಗೌಡಿ

ಲೋಕದರ್ಶನ ವರದಿ 

ಮುಂಡಗೋಡ:ಅಧಿಕ ಮಳೆ ಆಗಿ ನೀರಿನ ಮೂಲಗಳು ತುಂಬಿ ಹರಿಯುತ್ತಿರುವ ಕಾರಣ ನೀರಿನ ಮೂಲಗಳಾದ ನದಿಗಳು, ಹಳ್ಳ, ಕೊಳ್ಳ, ಕೆರೆ, ಜಲಾಶಯಗಳ ಹತ್ತಿರ ಯಾರೂ ಹೋಗಬಾರದು. ಮಳೆಯ ಕಾರಣ ಜಾರಿ ಬೀಳುವ ಸಂಭವ ಇರುವುದರಿಂದ ಹಳ್ಳ-ಕೊಳ್ಳಗಳ ನೀರಿನ ಸೆಳೆತ ಇರುವುದರಿಂದ ಅಪಾಯದ ಸಂಭವ ಇರುತ್ತದೆ. ಕಾರಣ ನೀರಿನ ಮೂಲಗಳ ಹತ್ತಿರ ಹೋಗಬಾರದು ಎಂದು ತಹಶೀಲ್ದಾರ ಶಂಕರ ಗೌಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಲಪಾತ, ಜಲಾಶಯ ಮೊದಲಾದ ಪ್ರವಾಸಿ ವೀಕ್ಷಣಾ ತಾಣಗಳಿಗೆ ಈ ದಿನಗಳಲ್ಲಿ ಭೇಟಿ ನೀಡಬಾರದು. ನೀರು ಇರುವ ಹಳ್ಳ, ಕೊಳ್ಳಗಳನ್ನು ದಾಟಲು ಹೋಗಬಾರದು. ಕಾಲುಸಂಕ ಅಥವಾ ಕಟ್ಟಿಗೆಯ ಮೂಲಕ ನಿರ್ಮಿಸಿದ ಸೇತುವೆಗಳನ್ನು ದಾಟಲು ಹೋಗಬಾರದು. ಕೃಷಿ ಚಟುವಟಿಕೆಗಳಿಗೆ ಜಮೀನುಗಳಿಗೆ ಹೋಗುವಾಗ ಹಳ್ಳ, ಕೊಳ್ಳಗಳು, ಕೆರೆ, ಜಲಾಶಯಗಳನ್ನು ದಾಟಿ ಹೋಗುವುದು ಅಪಾಯ ತರಬಲ್ಲದು. ಈ ಕುರಿತು ಜಾಗೃತರಾಗಿರಬೇಕು. ನೀರಿನ ಸೆಳೆತ ಇರುವ ಜಲಮೂಲಗಳಿಂದ ದೂರ ಇರಬೇಕು. ನಿಮ್ಮ ಜಾನುವಾರುಗಳು/ಸಾಕುಪ್ರಾಣಿಗಳನ್ನು ಸೆಳೆದುಕೊಂಡು ಹೋಗಬಲ್ಲ ನದಿ ಹಳ್ಳಗಳತ್ತ ಅವುಗಳು ಸುಳಿಯದಂತೆ ನೋಡಿಕೊಳ್ಳಬೇಕು. ಡ್ಯಾಂ/ಜಲಾಶಯಗಳ ನೀರು ಹರಿದು ಹೋಗುವ ಕೋಡಿಗಳು, ಕಾಲುವೆಗಳ ಹತ್ತಿರ ಹೋಗಬಾರದು. ಯಾವುದೇ ನೀರಿನ ಮೂಲಗಳಲ್ಲಿ ಈಜಲು ಹೋಗಬಾರದು(ಕೆರೆ, ನದಿ, ಹಳ್ಳ, ಕಾಲುವೆಗಳಲ್ಲಿ) ಎಂದು ಅವರು ತಿಳಿಸಿದ್ದಾರೆ 

ಸುದ್ದಿ ಓದಿ