ಜಮಖಂಡಿ

ರಾಜ್ಯ ವಿಧಾನಸಭೆಯ ಚುನಾವಣೆ: ಪೊಲೀಸ್ ಇಲಾಖೆಯಿಂದ ಪಥ ಸಂಚಲನ

ರಾಜ್ಯ ವಿಧಾನಸಭೆಯ ಚುನಾವಣೆ: ಪೊಲೀಸ್ ಇಲಾಖೆಯಿಂದ ಪಥ ಸಂಚಲನ
ಜಮಖಂಡಿ ನಗರದಲ್ಲಿ ಪ್ಯಾರಾ ಮಿಲಿಟರಿ ಪಡೆ ಹಾಗೂ ಪೊಲೀಸ್ ಇಲಾಖೆಯಿಂದ ಪಥ ಸಂಚಲನ ನಡೆಸಲಾಯಿತು

ಲೋಕದರ್ಶನ ವರದಿ,

ಜಮಖಂಡಿ : ನಗರದಲ್ಲಿ  ಪ್ಯಾರಾ ಮಿಲಿಟರಿ ಪಡೆ ಹಾಗೂ ಪೊಲೀಸ್ ಇಲಾಖೆಯಿಂದ ಪಥ ಸಂಚಲನ ನಡೆಸಲಾಯಿತು.

ಬರುವ ರಾಜ್ಯ ವಿಧಾನಸಭೆಯ ಚುನಾವಣೆಯ ಮುಂಜಾಗ್ರತ ಕ್ರಮವಾಗಿ ಸಾರ್ವಜನಿಕರಲ್ಲಿ ಜಾಗ್ರತೆ ಮತ್ತು ಭದ್ರತೆಯನ್ನು ಮೂಡಿಸುವ ನಿಟ್ಟಿನಲ್ಲಿ ನಗರದ ಪ್ರಮುಖ ರಸ್ತೆಗಳ ಮೂಲಕ ಸಂಚರಿಸಿ ಜನರಲ್ಲಿ ಜಾಗ್ರತೆಯನ್ನು ಮೂಡಿಸಿದರು.

ಡಿಎಸ್ಪಿ ಶಾಂತವೀರ ಅವರ ನೇತೃತ್ವದಲ್ಲಿ ಪ್ಯಾರಾ ಮಿಲಿಟರಿ ಪಡೆಯ ಕಮಾಂಡರಗಳು ಮತ್ತು ಶಹರ ಠಾಣೆಯ ಪಿಎಸ್ಐ ಬಸವರಾಜ ಕೊಣ್ಣೂರೆ, ಗ್ರಾಮೀಣ ಠಾಣೆ ಪಿಎಸ್ಐ ಗಂಗಾ ಬಿರಾದರ, ಹೆಚ್ಚುವರಿ ಪಿಎಸ್ಐ ಎಲ್,ಮಧು ಸೇರಿದಂತೆ ಪೋಲಿಸರು ಪಥ ಸಂಚಲನದಲ್ಲಿ ಭಾಗಿಯಾಗಿದರು.


ಸುದ್ದಿ ಓದಿ