ತಾಲೂಕು ಕಚೇರಿಗಳನ್ನು ಕೂಡಲೇ ಆರಂಭಿಸಿ: ಅಸ್ಕಿ
ತಾಳಿಕೋಟೆ25: ತಾಳಿಕೋಟೆ ನೂತನ ತಾಲೂಕು ಕೇಂದ್ರವಾಗಿ 5 ವರ್ಷ ಗತಿಸಿದರೂ ಸಹಿತ ಯಾವುದೇ ಕಚೇರಿಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದ ನಿತ್ಯ ಸಾರ್ವಜನಿಕರು ಅಲೆದಾಟ ನಡೆಸಬೇಕಾಗಿದ್ದು ಕೂಡಲೇ ಎಲ್ಲ ತಾಲೂಕು ಕಚೇರಿಗಳು ಆರಂಭಿಸಬೇಕು ಎಂದು ಕೊಣ್ಣೂರಿನ ಅಸ್ಕಿ ಪೌಂಡೇಶನ್ ಅಧ್ಯಕ್ಷ, ಸಮಾಜ ಸೇವಕ ಸಿ.ಬಿ.ಅಸ್ಕಿ ಹೇಳಿದರು.
ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಾಳಿಕೋಟೆಯಲ್ಲಿ ಉಪ ನೊಂದಣಿ ಕಚೇರಿ, ಶಿಕ್ಷಣ ಇಲಾಖೆ, ತೋಟಗಾರಿಗೆ ಸೇರಿದಂತೆ ಯಾವ ಕಚೇರಿಗಳು ಇಲ್ಲ. ಕೇವಲ ತಹಶೀಲ್ದಾರ ಹಾಗೂ ತಾಲೂಕು ಪಂಚಾಯತಿಗಳು ಮಾತ್ರ ಕಾರ್ಯನಿರ್ವಹಿಸುತ್ತವೆ. ತಹಶೀಲ್ದಾರ ಕಚೇರಿ ಇದ್ದರೂ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಸರ್ವೇ ಸೇರಿದಂತೆ ಬಹುತೇಕ ತಹಶೀಲ್ದಾರ ಕಚೇರಿ ಕಾರ್ಯಗಳು ಇನ್ನು ಮುದ್ದೇಬಿಹಾಳದಲ್ಲಿವೆ. ಇದರಿಂದ ಯಾವುದೇ ದಾಖಲೆಗಳು ರೈತರಿಗೆ ಬೇಕಾದರು ಸಹಿತ ಮುದ್ದೇಬಿಹಾಳ ತಾಳಿಕೋಟೆಗಳ ಮಧ್ಯೆ ಅಲೆದಾಟ ನಡೆಸಬೇಕಾಗುತ್ತದೆ. ಪಟ್ಟಣದಲ್ಲಿ ಮಿನಿ ವಿಧಾನ ಸೌಧ ಕಟ್ಟಡ ಕಾಮಗಾರಿಯೂ ಆರಂಭವಾಗಿಲ್ಲ. ಅದೇ ಬಬಲೇಶ್ವರದಲ್ಲಿ ಕಾಂಗ್ರೇಸ್ ಶಾಸಕರು ಇದ್ದರೂ ಸಹಿತ ಬಬಲೇಶ್ವರ ಹಾಗು ತಿಕೋಟಾದಲ್ಲಿ ತಲಾ 9 ಕೋಟಿ ವೆಚ್ಚದಲ್ಲಿ ಮಿನಿ ವಿಧಾನ ಸೌಧ ಕಟ್ಟಡ ಕಾಮಗಾರಿ ಮುಕ್ತಾಯ ಹಂತದಲ್ಲಿದೆ. ಆಡಳಿತದಲ್ಲಿ ಬಿಜೆಪಿ ಸರಕಾರ ಹಾಗೂ ಶಾಸಕರು ಇದ್ದರು ಕಾಮಗಾರಿ ಆರಂಭವಾಗಿಲ್ಲ. ಈ ಹಿಂದೆ ಉಪಮುಖ್ಯಮಂತ್ರಿಯಾಗಿದ್ದ ಲಕ್ಷ್ಮಣ ಸವದಿ ಅವರನ್ನು ಕರೆಯಿಸಿ ಆರ್ಟಿಓ ಉಪ ಕಚೇರಿ ಆರಂಭಿಸುವದಾಗಿ, ಆರೋಗ್ಯ ಸಚಿವ ಸುಧಾಕರ ಅವರಿಂದ ತಾಲೂಕು ಆಸ್ಪತ್ರೆಯಾಗಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದಜರ್ೆಗೆ ಏರಿಸುವ ಹೇಳಿಕೆಗಳನ್ನು ನೀಡಿಸಿದ್ದಿರಿ. ಆದರೆ ಎರಡು ಕಾರ್ಯಗಳು ಇನ್ನು ಆಗಿಲ್ಲ. ಕೇವಲ ಸುಳ್ಳು ಆಶ್ವಾಸನೆಗಳನ್ನು ನೀಡುವ ಮೂಲಕ ಅಭಿವೃದ್ಧಿ ಮಾಡಿದ್ದಿನಿ ಅಂತಿರಿ ಯಾವ ಅಭಿವೃದ್ಧಿ ಅಂತಾ ಗೊತ್ತಾಗುತ್ತಿಲ್ಲ ಅಂತಾ ವಾಗ್ದಾಳಿ ಮಾಡಿದ ಅವರು ಇನ್ನು ಕಾಲ ಮಿಂಚಿಲ್ಲ. ಅಧಿವೇಶನದಲ್ಲಿ ಮಾತನಾಡಿ ಆರ್ಟಿಓ ಉಪ ಕಚೇರಿ, ಮಿನಿ ವಿಧಾನ ಸೌಧ ಕಟ್ಟಡ ಸೇರಿದಂತೆ ಇವಿಧ ಇಲಾಖೆ ತಾಲೂಕು ಕಚೇರಿಗಳನ್ನು ತಾಳಿಕೋಟೆ ಪಟ್ಟಣದಲ್ಲಿ ಆರಂಭಿಸಲು ಶಾಸಕರು ಮುಂದಾಗಬೇಕು ಎಂದರು.
ಪುರಸಭೆ ಸದಸ್ಯ ಮಲ್ಲಿಕಾರ್ಜು ನ ಪಟ್ಟಣಶೇಟ್ಟಿ, ಸಾಮಾಜಿಕ ಹೋರಾಟಗಾರ ಶಿವರಾಜ ಗುಂಡಕನಾಳ, ಮಾಜಿ ಪುರಸಭೆ ಸದಸ್ಯ ಇಬ್ರಾಹಿಂ ಮನ್ಸೂರ,ನದಿಂ ಕಡು, ಬಸಣ್ಣ ನಾಯ್ಕೋಡಿ, ಬಿ.ಬಿ.ಹಡಲಗೇರಿ, ಬಿ.ಎಮ್.ಕೋಳ್ಯಾಳ ಸೇರಿದಂತೆ ಇತರರು ಇದ್ದರು.