ಮಹಲಿಂಗಪುರ

ನಾಗದೇವತೆಗೆ ವಿಶೇಷ ಪೂಜೆ; ನೂರಾರು ಮಹಿಳೆಯರಿಂದ ಹಾಲೆರೆಯುವ ಮೂಲಕ ಪ್ರಾರ್ಥನೆ

ನಾಗದೇವತೆಗೆ ವಿಶೇಷ ಪೂಜೆ; ನೂರಾರು ಮಹಿಳೆಯರಿಂದ ಹಾಲೆರೆಯುವ ಮೂಲಕ ಪ್ರಾರ್ಥನೆ

ಲೋಕದರ್ಶನ ವರದಿ 

ಮಹಾಲಿಂಗಪುರ 17 : ಹಬ್ಬಗಳು ಕೇವಲ ಸಂಭ್ರಮಕ್ಕೆ ಸೀಮಿತವಾಗದೆ, ನಮ್ಮ ಸಂಸ್ಕೃತಿ, ಪರಂಪರೆ ಹಾಗೂ ಮಾನವೀಯತೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ಸಂದರ್ಭಗಳಾಗಬೇಕು ಎಂಬ ಸಂದೇಶವನ್ನು ನಗರದ ವಡಗೇರಿ ಪ್ಲಾಟ್ನ ನಾಗರ ಪಂಚಮಿ ಆಚರಣೆ ಸಾರಿತು. ವಡಗೇರಿ ಪ್ಲಾಟ್ನಲ್ಲಿ ನಾಗರ ಪಂಚಮಿ ಅಂಗವಾಗಿ ನಾಗದೇವತೆಗೆ ವಿಶೇಷ ಪೂಜಾ ಕಾರ್ಯಕ್ರಮವನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಬೆಳಗ್ಗಿನಿಂದಲೇ ನಾಗದೇವತೆಯ ಸನ್ನಿಧಿಯಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ನೂರಾರು ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ಸಾರ್ವಜನಿಕರು ಪೂಜೆಯಲ್ಲಿ ಪಾಲ್ಗೊಂಡು ನಾಗದೇವತೆಗೆ ಹಾಲೆರೆಯುವ ಮೂಲಕ ಭಕ್ತಿಯಿಂದ ಪ್ರಾರ್ಥಿಸಿದರು. ಕುಟುಂಬದಲ್ಲಿ ಸುಖ, ಶಾಂತಿ, ಆರೋಗ್ಯ ಹಾಗೂ ಸಮೃದ್ಧಿ ನೆಲೆಸಲಿ, ನಾಡಿನಲ್ಲಿ ಉತ್ತಮ ಮಳೆ-ಬೆಳೆಯಾಗಲಿ ಎಂದು ಭಕ್ತರು ಪ್ರಾರ್ಥಿಸಿದರು. ಮಹಿಳೆಯರು ಶ್ರದ್ಧೆಯಿಂದ ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಹಬ್ಬದ ಧಾರ್ಮಿಕ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿತು.  


ಸುದ್ದಿ ಓದಿ