ಸಿರುವಾರ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಅಯ್ಕೆ,
ಬಳ್ಳಾರಿ 27: ತಾಲೂಕಿನ ಸಿರಿವಾರ ಗ್ರಾಮ ಪಂಚಾಯತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು 16 ಜನ ಸರ್ವ ಸದಸ್ಯರ ನೇತೃತ್ವದಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ, ಪಿಚ್ಚಪ್ಪನವರ ದೊಡ್ಡ ಬಸಮ್ಮ, ಮತ್ತು ಉಪಾಧ್ಯಕ್ಷರಾಗಿ ವಿ, ಸುಧಾಕರ ಇವರನ್ನು ಅವಿರೋಧವಾಗಿ ಚುನಾವಣಾ ಅಧಿಕಾರಿ ದಯಾನಂದ, ಗ್ರಾ.ಪಂ ಪಿಡಿಓ ಎಂ ಆದಿಲಕ್ಷ್ಮಿ ಇವರ ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು.
ಗ್ರಾಮದ ಮುಖಂಡರಾದ ತಳವಾರ ಸುಂಕಯ್ಯ, ಅಕ್ಕಿ ನುಚ್ಚು ತಿಮ್ಮಯ್ಯ, ಪಿ. ಶೇಖ ಲಿಂಗ, ಶರಣಪ್ಪ ಎಮ್ ದೊಡ್ಡ ರುದ್ರಪ್ಪ , ಆದ್ಯಪ್ಪಾ, ರುದ್ರಗೌಡ, ಷಣ್ಮುಖಪ್ಪ, ವೀರಬಸಪ್ಪ, ಗಣೇಶ, ಟಿ ಸಣ್ಣ ಸುಂಕಣ್ಣ, ದುರಗಪ್ಪ, ಚಂದ್ರಪ್ಪ, ಪಂಪಣ್ಣ ಹಾಗೂ ಇನ್ನಿತರರು ಗ್ರಾಮದ ಮುಖಂಡರು ಉಪಸ್ಥಿತರಿದ್ದರು