ಸಿರುಗುಪ್ಪ

ಸಿರುಗುಪ್ಪ ಕಾನೂನು ಗೌರವಿಸಿ ಅದು ರಕ್ಷಿಸುತ್ತದೆ: ಯಾದವಾಡ

ಸಿರುಗುಪ್ಪ ಕಾನೂನು ಗೌರವಿಸಿ ಅದು ರಕ್ಷಿಸುತ್ತದೆ: ಯಾದವಾಡ

ಸಿರುಗುಪ್ಪ03:  ಪ್ರತಿಯೊಬ್ಬರು ಕಾನೂನನ್ನು ಗೌರವಿಸಿದರೆ ಕಾನೂನು ಅವರನ್ನು ರಕ್ಷಿಸುತ್ತದೆ ಎಂದು ಜೆಎಂಎಫ್ ನ್ಯಾಯಾಲಯದ ನ್ಯಾಯಾಧೀಶ ಸೈಯದ್ ಮೊಹಮ್ಮದ್ ಹಾಜಿ ಹುಸೇನ್ ಸಾಬ್ ಯಾದವಾಡ ಅವರು ಹೇಳಿದರು.

 ನಗರದ ಎಂ ಹೆಚ್ ಎಂ ಎಸ್ ಸರ್ಕಾ ರಿ ಪ್ರಥಮ ದರ್ಜೆ  ಕಾಲೇಜಿನಲ್ಲಿ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ ವಕೀಲರ ಸಂಘ ತಾಲೂಕು ಆರೋಗ್ಯ ಇಲಾಖೆ ಸಹ ಭಾಗಿತ್ವದಲ್ಲಿ ಆಯೋಜಿಸಿದ ವಿಶ್ವ ಏಡ್ಸ್ ದಿನಾಚರಣೆ ಮತ್ತು ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿದರು.

ವಿದ್ಯಾರ್ಥಿ  ದಿಸೆಯಲ್ಲಿ ಸಾಮಾನ್ಯ ಕಾನೂನುಗಳನ್ನು ಅರಿತುಕೊಳ್ಳುವುದರಿಂದ  ಅನ್ಯಾಯ ವಿರುದ್ಧ ನೆರವಾಗುತ್ತದೆ ಎಂದು ನುಡಿದರು ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ ಈರಣ್ಣ ಅವರು ಮಾತನಾಡುತ್ತಾ ಯವ್ವನದಲ್ಲಿ ದುಶ್ಚಟಗಳಿಗೆ ಬಲಿಯಾಗಿ ಮುಂದಿನ ಉತ್ತಮ ಜೀವನವನ್ನು ನಾಶ ಮಾಡಿ  ಕೊಂಡಂತೆ ಆಗುತ್ತದೆ ಪದವಿ ಹಂತದಲ್ಲಿ ಅನ್ಯ ಮಾರ್ಗಗಳಿಗೆ ಮನಸ್ಸು ಮಾಡದೆ ಶಿಸ್ತು ಆರೋಗ್ಯ ಶಿಕ್ಷಣ ಕಡೆಗೆ ಹೆಚ್ಚಿನ ಬಲವನ್ನು ನೀಡಬೇಕೆಂದರು ಹೇಳಿದರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಲಿಂಗರೆಡ್ಡಿ,ಕಾಲೇಜು ಪ್ರಾಂಶುಪಾಲ ಜಿ ಕೊಟ್ರಪ್ಪ,ನಿವೃತ್ತ ಆರೋಗ್ಯ ವೈದ್ಯಾಧಿಕಾರಿ ಡಾ ಲಿಂಗಪ್ಪ,ವಕೀಲರ ಸಂಘದ ತಾಲೂಕು ಅಧ್ಯಕ್ಷ ಮಂಜುನಾಥಗೌಡ,ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಬಸವರಾಜಯ್ಯ ಸ್ವಾಮಿ,ಜಿಲ್ಲಾ ಸಾಕ್ಷರತಾ ಸದಸ್ಯ ಅಬ್ದುಲ್ ನಬಿ ,ಉಪನ್ಯಾಸಕರಾದ ಕೆಎಂ ಚಂದ್ರಕಾಂತ, ಕೃಷ್ಣಪ್ಪನಾಯಕ,ಅಂಬುತಾಯಿ,ಲಿಂಗಪ್ಪ,ಹಿರಿಯ ವಕೀಲರಾದ ಎನ್ ಅಬ್ದುಲ್ ಸಾಹೇಬ್ ರಾರಾವಿ, ವೆಂಕಟೇಶ ನಾಯಕ್,ಮಲ್ಲಿಗೌಡ, ವಿದ್ಯಾರ್ಥಿಗಳಿದ್ದರು.      

        ಸಿರುಗುಪ್ಪ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು ಆರೋಗ್ಯ ಇಲಾಖೆ ಹಮ್ಮಿಕೊಂಡ ವಿಶ್ವ ಏಡ್ಸ್ ದಿನಾಚರಣೆಯಲ್ಲಿ ತಹಸಿಲ್ದಾರ್ ಏನ್ ಆರ್  ಮಂಜುನಾಥ ಸ್ವಾಮಿ ಅವರು ಕಾರ್ಯಕ್ರಮ ಉದ್ಘಾಟಿಸಿ ರೋಗಗಳ ಬಗ್ಗೆ ಮುಂಜಾಗ್ರತೆ ವಹಿಸುವುದರಿಂದ ಆರೋಗ್ಯಯುತ ಜೀವನ ನಡೆಸಬಹುದು ಏಡ್ಸ್ ಬಗ್ಗೆ ಎಲ್ಲರಲ್ಲಿ ಜಾಗೃತಿ ಇರಲಿ ಎಂದು ಹೇಳಿದರು.ತಾಲೂಕು ಪಂಚಾಯತ್ ಕಾರ್ಯನಿರ್ವಾ ಹಕ ಅಧಿಕಾರಿ ಮಡಗಿನಬಸಪ್ಪ,ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ ಈರಣ್ಣ,ಪ್ರಚಾರ್ಯ ನಾಗರಾಜ, ಶಿಕ್ಷಣ ಇಲಾಖೆಯ ಬಸವರಾಜಯ್ಯ,ಸಾಕ್ಷರತಾ ಅಬ್ದುಲ್ ನಬಿ,ಉಪನ್ಯಾಸಕರಾದ ಈ.ಚಿದಾನಂದ, ಮಲ್ಲಿಕಾರ್ಜು ನ,ಸೋಮಶೇಖರ ರೆಡ್ಡಿ,ದೇವರಾಜ, ನಾಗರಾಜ,ಮಹಾವೀರ ಮತ್ತಿತ್ತರು ಇದ್ದರು.


ಸುದ್ದಿ ಓದಿ