ಸೈಲೆಂಟ್ ವರ್ಕಸ್ ಕಾರ್ಯಕ್ರಮ: ನಿಂಗಪ್ಪ ಎನ್. ಕುಲಕರ್ಣಿ ಸನ್ಮಾನ
ಲೋಕದರ್ಶನ ವರದಿ
ಶಿಗ್ಗಾವಿ 16: ಪಟ್ಟಣದ ದಿ. ಶಂಕರಗೌಡ್ರ ಪಾಟೀಲ ಅವರ ಮನೆಯಲ್ಲಿ ಜೆ.ಸಿ.ಐ ಘಟಕದ ವತಿಯಿಂದ ಜೈತ್ರಾಜೆಸಿ ಸಪ್ತಾಹದ 6 ನೇ ದಿನದ ಸಮಾಜಮುಖಿ ಸೈಲೆಂಟ್ ವರ್ಕಸ್ ಕಾರ್ಯಕ್ರಮದ ಅಂಗವಾಗಿ ಅಂಚೆ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ನಿಂಗಪ್ಪ.ಎನ್. ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು.
ತಾಲೂಕ ಸ್ತ್ರೀ ಶಕ್ತಿ ಸಹಾಯ ಸಂಘ ಒಕ್ಕೂಟದ ಅಧ್ಯಕ್ಷೆ ಶುಶೀಲಕ್ಕ ಪಾಟೀಲ, ಪುರಸಭೆ ಸದಸ್ಯ ಸಿದ್ದಾರ್ಥಗೌಡ ಪಾಟೀಲ, ಜೆ.ಸಿ.ಐ ಡಾ.ಡಿ.ಎ.ಗೊಬ್ಬರಗುಂಪಿ, ಜಿ.ಎನ್.ಯಲಿಗಾರ, ಮಹಾಂತೇಶ ಬಳಿಗಾರ, ರಾಘವೇಂದ್ರ ದೇಶಪಾಂಡೆ, ಪ್ರಕಾಶ ಔಂದಕರ, ಕೆ.ಬಿ.ಚನ್ನಪ್ಪ, ಬಸವರಾಜ ಬಸರಿಕಟ್ಟಿ, ಬಾಬಾಜಾನ ಹುಲಗೂರ, ಜಗದೀಶ ಬನ್ನಿಕೊಪ್ಪ, ರೂಪಾಯಲಿಗಾರ, ರಂಜನಾ ಕೋಪರ್ಡ್ , ಅನುಪಮಾ ತೋಟಗೇರ ಸೇರಿದಂತೆ ಜೆ.ಸಿ.ಐ ಪದಾಧಿಕಾರಿಗಳು ಉಪಸ್ಥಿತರಿದ್ದರು. ಜೆ.ಸಿ ಡಿ.ಆರ್.ತೋಟಗೇರ ಕಾರ್ಯಕ್ರಮ ನಿರ್ವಹಿಸಿದರು