ಬಳ್ಳಾರಿ

ಆಟೋಗಳಿಗೆ ಕನ್ನಡ ಧ್ವಜ ಕಟ್ಟಿ ಕನ್ನಡಾಭಿಮಾನ ಪ್ರದರ್ಶನ

ಆಟೋಗಳಿಗೆ ಕನ್ನಡ ಧ್ವಜ ಕಟ್ಟಿ ಕನ್ನಡಾಭಿಮಾನ ಪ್ರದರ್ಶನ

ಲೋಕದರ್ಶನ ವರದಿ

ಬಳ್ಳಾರಿ 30: ಬಳ್ಳಾರಿ ನಗರದ ಐತಿಹಾಸಿಕ ರೈಲ್ವೆ ನಿಲ್ದಾಣದಲ್ಲಿ ಹಾಗೂ ರಾಯಲ್ ವೃತ್ತ, ಸಂಗಮ್ ವೃತ್ತ, ಹೊಸ ಬಸ್ ನಿಲ್ದಾಣ, ಹೆಚ್.ಆರ್.ಜಿ.ವೃತ್ತ ಸೇರಿದಂತೆ ಮುಂತಾದ ಸ್ಥಳಗಳಲ್ಲಿ ನವಕರ್ನಾಟಕ  ಯುವಶಕ್ತಿ ಸಂಘಟನೆಯಿಂದ ಬೆಳಗಿನ ಜಾವ ಸುಮಾರು 5ಗಂಟೆಗೆ ನೂರಾರು ಆಟೋಗಳಿಗೆ ಕನ್ನಡ ಧ್ವಜವನ್ನು ಕಟ್ಟಿ ಕನ್ನಡಾಭಿಮಾನವನ್ನು ಮೆರೆಯಲಾಯಿತು. 

ಕಳೆದ ಹದಿನೆಂಟು ವರ್ಷಗಳಿಂದ ನವಕರ್ನಾಟಕ ಯುವಶಕ್ತಿ ಸಂಘಟನೆಯು ಬಳ್ಳಾರಿ ನಗರದ ಜನರಲ್ಲಿ ಕನ್ನಡ ಭಾಷೆ, ನೆಲ, ಜಲ, ಸಂಸ್ಕೃತಿ, ಇತಿಹಾಸ, ಜನಪದ ಮುಂತಾದ ವಿಷಯಗಳ ಕುರಿತು ಜಾಗೃತಿ ಮೂಡಿಸುತ್ತಾ ಕನ್ನಡ ಭಾಷೆಯ ಕುರಿತು ಅಭಿಮಾನ ಮೂಡಿಸುವ ಕಾರ್ಯವನ್ನು ಮಾಡುತ್ತಿದೆ ಎಂದು ಸಂಘಟನೆಯ ರಾಜ್ಯ ಉಪಾಧ್ಯಕ್ಷ ಸಿದ್ಮಲ್ ಮಂಜುನಾಥ ಅವರು ತಿಳಿಸಿದರು. 

ಬಳ್ಳಾರಿ ನಗರವು ಆಂಧ್ರದ ಗಡಿ ಪ್ರದೇಶವಾಗಿರುವುದರಿಂದ ಇಲ್ಲಿ ಕನ್ನಡ ಭಾಷೆಯ ಕುರಿತು ಹೆಚ್ಚಿನ ಅಭಿಮಾನ ಮೂಡಿಸಬೇಕಾದ ಕರ್ತವ್ಯ ಪ್ರತಿಯೊಬ್ಬ ಕನ್ನಡಿಗರದ್ದಾಗಿದೆ. ಈ ಹಿನ್ನೆಲೆಯಲ್ಲಿ ಕನ್ನಡ ಭಾಷೆಯನ್ನು ಬೆಳೆಸುವ, ಉಳಿಸುವ ಕಾರ್ಯವನ್ನು ಮಾಡಬೇಕಾಗಿದೆ ಎಂದು ಹೋಟೆಲ್ ಉದ್ಯಮಿ ವಿಜಯಕುಮಾರ್ ಅವರು ನುಡಿದರು. 

ನವಕರ್ನಾಟಕ ಯುವ ಶಕ್ತಿ ಸಂಘಟನೆಯ ಜಿಲ್ಲಾಧ್ಯಕ್ಷರಾದ ಕೆ.ರಮೇಶ್, ನಗರ ಘಟಕದ ಅಧ್ಯಕ್ಷರಾದ ರವಿಕುಮಾರ್, ಬಿ.ಗಿರಿಬಾಬು, ಎಂ.ದೇವೇಶ್, ಯಮುನಪ್ಪ, ಸಿದ್ಮಲ್ ಸಂತೋಷ್ಕುಮಾರ್, ಕೋರಿಚಂದ್ರಶೇಖರ, ಮಹೇಶ್ಕುಮಾರ್, ಎಂ.ಮಂಜುನಾಥ ಮುಂತಾದವರು ಹಾಜರಿದ್ದರು 

ಸುದ್ದಿ ಓದಿ