ರಾಣೆಬೆನ್ನೂರ

ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಕ್ಷೇತ್ರದ ಯೋಜನೆ ಸಹಕಾರಿ: ಗುರುಬಸವ ಶ್ರೀ

ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಕ್ಷೇತ್ರದ ಯೋಜನೆ ಸಹಕಾರಿ:  ಗುರುಬಸವ ಶ್ರೀ

ರಾಣೆಬೆನ್ನೂರು ಡಿ 6-ಮಹಿಳೆಯರು ಆರ್ಥಿಕ ಸ್ವಾವಲಂಬನೆ ಹೊಂದಿದರೆ ಮಾತ್ರ ಸಮಗ್ರ ಕುಟುಂಬ ಶಾಂತಿ ನೆಮ್ಮದಿ ಮತ್ತು ಪ್ರೀತಿ ವಿಶ್ವಾಸದಿಂದ ಇರಲು ಸಾಧ್ಯವಾಗುತ್ತದೆ ಎಂದು ದೊಡ್ಡಪೇಟೆ ಪುಟ್ಟಯ್ಯನ ವಿರಕ್ತ ಮಠದ ಶ್ರೀ ಗುರುಬಸವ ಮಹಾಸ್ವಾಮಿಗಳು ನುಡಿದರು. ಅವರು ಸೋಮವಾರ ಮೃತ್ಯುಂಜಯ ನಗರದ ಶ್ರೀ ಜಗದ್ಗುರು ವಾಗಿಶ ಪಂಡಿತಾರಾಧ್ಯ  ಭವನದಲ್ಲಿ ನಡೆದ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ   ವಿನಾಯಕ ನಗರ ವಲಯ ಮಟ್ಟದ ಸಾಧನಾ ಸಮಾವೇಶ ಹಾಗೂ ಒಕ್ಕೂಟಗಳ ಪದಗ್ರಹಣ ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು. 

ಡಾ. ವೀರೇಂದ್ರ ಹೆಗಡೆ ಅವರು ಜನಸಾಮಾನ್ಯರ ಬದುಕಿಗೆ ಮತ್ತು ಜೀವನ ನಿರ್ವಹಣೆಗೆ ಆಶಾಕಿರಣವಾದ ಯೋಜನೆಗಳನ್ನು ಜಾರಿಗೆ ತರುವುದರ ಮೂಲಕ ಅತ್ಯುತ್ತಮ ಸೇವಾ ಕಾರ್ಯವನ್ನು ಮಾಡುತ್ತಿದ್ದಾರೆ ಎಂದರು. ಓಂ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರುಕ್ಮಿಣಿ ಸಾಹುಕಾರ್, ಅವರು ಸಮಾಜದಲ್ಲಿ ಸಮಾನತೆ ಸಾಧಿಸಬೇಕಾದರೆ ಇಂದು ಹೆಣ್ಣು ಮತ್ತು ಗಂಡು ಇಬ್ಬರು ಸಮಾನವಾಗಿ ದುಡಿಯಬೇಕಾಗುತ್ತದೆ. ದುಡಿಮೆಯ ಮಾರ್ಗವನ್ನು  ಕ್ಷೇತ್ರ ಧರ್ಮಸ್ಥಳ ಗ್ರಾಮಾಂತರ ಯೋಜನೆ  ನೀಡಿದೆ ಅದರ ಸದುಪಯೋಗವನ್ನು ಪ್ರತಿಯೊಬ್ಬ ಮಹಿಳೆಯರು ಪಡೆದುಕೊಳ್ಳಬೇಕು ಎಂದರು. ವಾಯುವ್ಯ ಕ. ರಾಜ್ಯ ರ.ಸಾರಿಗೆ ಸಂಸ್ಥೆಯ, ಉಪಾಧ್ಯಕ್ಷ ಡಾ : ಬಸವರಾಜ ಕೇಲಗಾರ, ಅವರು ಮಹಿಳೆ ಮನಸ್ಸು ಮಾಡಿದರೆ ಏನಾದರೂ ಸಾಧಿಸಬಹುದು ಎನ್ನುವುದಕ್ಕೆ ಎಸ್ ಡಿ ಆರ್ ಪಿ ಯೋಜನೆ ಸಾಕ್ಷಿಯಾಗಿದೆ ಎಂದರು. ಜಿ. ಪಂ.ಮಾಜಿ ಸದಸ್ಯ ಶ್ರೀಮತಿ ಮಂಗಳ ಗೌರಿ ಪೂಜಾರ್,ಅವರು ಪುರುಷ ಪ್ರಧಾನವಾದ ಸಮಾಜದಲ್ಲಿ ಇಂದು ಮಹಿಳೆ ಅಡುಗೆ ಮನೆಗೆ ಮಾತ್ರ ಸೀಮಿತವಾಗಿಲ್ಲ ಅವಳು ಸಹ ಎಲ್ಲರಂತೆ ಸಮಾನತೆಯಿಂದ ದುಡಿಯುವ ಶಕ್ತಿಯನ್ನು ಪಡೆದುಕೊಂಡಿದ್ದಾಳೆ ಎಂದ ಅವರು, ಈ ಯೋಜನೆ ಬಂದ ನಂತರ ಪುರುಷರ ಹತ್ತಿರ ಕೈ ಚಾಚುವುದು ನಿಂತಿದೆ. ಸರಕಾರಗಳು ಮಾಡುವ ಕೆಲಸ  ಕ್ಷೇತ್ರ ಮಾಡುತ್ತಿರುವುದು ವಿಶ್ವದ ಎಲ್ಲ ರಾಷ್ಟ್ರಗಳಿಗೆ  ಮಾದರಿಯಾಗಿದೆ ಎಂದರು. ನ್ಯಾಯವಾದಿ ವನಿತಾ ಗುತ್ತಲ್, ಎಪಿಎಂಸಿ ಸದಸ್ಯ ರಮೇಶ್ ನಾಯಕ್ ಸೇರಿದಂತೆ ಮತ್ತಿತರ ಗಣ್ಯರು ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಕಾರ್ಯಗಳನ್ನು ಮುಕ್ತ ಕಂಠದಿಂದ ಶ್ಲಾಘೀಸಿ, ಮಾತನಾಡಿದರು.

 ಒಕ್ಕೂಟದ  ಮಹಿಳೆಯರನ್ನು ಮತ್ತು ಸಾಧಕ ಮಹಿಳೆಯರನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ಒಕ್ಕೂಟದ ಮಹಿಳೆಯರು ಪ್ರಾಥರ್ಿಸಿದರು. ಜಿಲ್ಲಾ ಯೋಜನಾಧಿಕಾರಿ ನಾಗರಾಜ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಗದೀಶ್ ಸ್ವಾಗತಿಸಿ, ತಿಮ್ಮಪ್ಪ ನಿರೂಪಿಸಿ ವಂದಿಸಿದರು, 

ವಿನಾಯಕ ನಗರ ವಲಯದ 400ಕ್ಕೂ ಸಂಘದ ಸದಸ್ಯರು ಸಾಧನಾ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ನಂತರ ನಡೆದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಸಾರ್ವಜನಿಕರ ಗಮನ ಸೆಳೆದವು 

ಸುದ್ದಿ ಓದಿ