ಸೌಂದತ್ತಿ

ಸವದತ್ತಿ ಟಿಎಪಿಸಿಎಮ್ಎಸ್ ಅಧ್ಯಕ್ಷ ಉಪಾಧ್ಯಕ್ಷರ ಅವಿರೋಧ ಆಯ್ಕೆ

ಸವದತ್ತಿ ಟಿಎಪಿಸಿಎಮ್ಎಸ್ ಅಧ್ಯಕ್ಷ ಉಪಾಧ್ಯಕ್ಷರ ಅವಿರೋಧ ಆಯ್ಕೆ

ಲೋಕದರ್ಶನ ವರದಿ

ಸವದತ್ತಿ 02: ಸ್ಥಳೀಯ ದಿ.ಸವದತ್ತಿ ತಾಲೂಕಾ ಒಕ್ಕುಲತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ  ಸವದತ್ತಿಯ ಆಡಳಿತ ಮಂಡಳಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಶನಿವಾರ ನಡೆದ ಚುನಾವಣೆಯಲ್ಲಿ ರವೀಂದ್ರ ಭೂಪಾಲಪ್ಪ ಯಲಿಗಾರ ಅಧ್ಯಕ್ಷರಾಗಿ, ವೀರನಗೌಡ ದೇಮನಗೌಡ ಸಂಗಣ್ಣವರ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಆಡಳಿತ ಮಂಡಳಿ ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 14 ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿದ್ದು, ಇಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳೆರಡು ಸಹ ಅವಿರೋಧವಾಗಿ ಆಯ್ಕೆಯಾಗಿವೆ ಎಂದು ಚುನಾವಣಾಧಿಕಾರಿ ಶಾಹಿನ್ ಅಖ್ತರ ತಿಳಿಸಿದ್ದಾರೆ.

ಮಾಜಿ ಶಾಸಕ ಸುಭಾಸ ಕೌಜಲಗಿ, ಮದನಲಾಲ ಚೋಪ್ರಾ, ನಿರ್ದೇಶಕರುಗಳಾದ ಪ್ರಕಾಶ ಮೂಗಬಸವ, ರಾಮನಗೌಡ ತಿಪರಾಶಿ, ಫಕ್ಕೀರಪ್ಪ ಹದ್ದನ್ನವರ, ಗುರುಲಿಂಗಯ್ಯ ಹೊಸಪೇಟಿಮಠ, ಮಹಾದೇವ ಪ್ರಭುನವರ, ಗಜಾನನ ಕಲಾಲ, ಕಾಶಪ್ಪ ಕಾರಲಕಟ್ಟಿ, ಪ್ರಕಾಶ ಕಾಮನ್ನವರ, ಸುಜಾತಾ ಪ್ರಭುನವರ, ಚಾಂದಬೀಬಿ ಬೋದ್ಲೇಖಾನ, ಹೊನ್ನಪ್ಪ ಖಂಡ್ರಿ, ಯಲ್ಲಪ್ಪ ಬೆರುಗಡ್ (ಭಜಂತ್ರಿ) ಟಿಎಪಿಸಿಎಮ್ಎಸ್ ವ್ಯವಸ್ಥಾಪಕ ಪ್ರಕಾಶ ಯಲಿಗಾರ, ನಿವೃತ್ತ ವ್ಯವಸ್ಥಾಪಕ ಎಮ್.ಎನ್.ಕುಲಕರ್ಣಿ ಉಪಸ್ಥಿತರಿದ್ದರು 

ಸುದ್ದಿ ಓದಿ