ರಸ್ತೆ ಅಪಘಾತದಲ್ಲಿ ಸತ್ಯನಾರಾಯಣ ಸಾವು

ರಸ್ತೆ ಅಪಘಾತದಲ್ಲಿ ಸತ್ಯನಾರಾಯಣ ಸಾವು

ಲೋಕದರ್ಶನ ವರದಿ

ಬಳ್ಳಾರಿ09: ಜಿಲ್ಲೆಯ ಗಡಿ ಭಾಗದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಅದೋನಿ ತಪಾಲ ಉಪ ಪರಿವೇಕ್ಷಣಾ ಅಧಿಕಾರಿ ಸತ್ಯನಾರಾಯಣ(38) ಮೃತಪಟ್ಟಿದ್ದಾರೆ. ಗುರುವಾರ ಮಧ್ಯಾಹ್ನ ಬಳ್ಳಾರಿ ಜಿಲ್ಲೆಯ ಗಡಿಭಾಗದಲ್ಲಿ ಈ ಅಪಘಾತ ನಡೆದಿದೆ. ಕೆಲಸದ ನಿರ್ವಹಣೆಯಲ್ಲಿ ಆದೋನಿ ಇಂದ ಕೌತಾಳಂಗೆ ಹೋಗುವ ಮಾರ್ಗಮಧ್ಯದಲ್ಲಿ ಅಪಘಾತ ನಡೆದಿದೆ. 

      ಸತ್ಯನಾರಾಯಣ ಮೇದೇಹಾಳು ಗ್ರಾಮದ ನಿವಾಸಿಯಾಗಿದ್ದು, ಸತ್ಯನಾರಾಯಣ ಅವರಿಗೆ ತಂದೆ,ತಾಯಿ, ಪತ್ನಿ, ಸೇರಿದಂತೆ ಅಪಾರ ಬಂಧುಬಳಗ ಇದ್ದಾರೆ. 

       ಸತ್ಯನಾರಾಯಣ ಮೃತಪಟ್ಟ ವಿಷಯವನ್ನು ತಿಳಿದ ಗ್ರಾಮಸ್ಥರಲ್ಲಿ ವಿಷಾದ ಛಾಯಗಳು ಮೂಡಿದೆ, ಮತ್ತು ಗ್ರಾಮಸ್ಥರು ಸತ್ಯನಾರಾಯಣ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥನೆ ಮಾಡಿದರು. ಗುರುವಾರ ಸಂಜೆಗೆ ಅಂತ್ಯಸಂಸ್ಕಾರ ನಡೆದಿದೆ.

ಸುದ್ದಿ ಓದಿ