ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಸಂತ ಶ್ರೇಷ್ಠ ಭಕ್ತ ಕನಕದಾಸರ ಜಯಂತಿ : ಪ್ರದೀಪಕುಮಾರ ಹಿರೇಮಠ
ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಸಂತ ಶ್ರೇಷ್ಠ ಭಕ್ತ ಕನಕದಾಸರ ಜಯಂತಿ : ಪ್ರದೀಪಕುಮಾರ ಹಿರೇಮಠ
ಸಿಂದಗಿ 19 ; ಆಡಂಬರ ಆಚರಣೆಗೆ ಮಹತ್ವ ಕೊಡದೇ ಕನ್ನಡ ಭಾಷೆಯ ಕೀರ್ತನೆಕಾರರು ಮತ್ತು ಪುರಂದರ ದಾಸರೊಂದಿಗೆ ಕರ್ನಾಟಕ ಸಂಗೀತಕ್ಕೆ ಅಪಾರ ಕೊಡುಗೆಯನ್ನು ನೀಡಿದ ಕನಕದಾಸರ ತತ್ವಾದರ್ಶಗಳನ್ನು ಮೂಗೂಡಿಸಿಕೊಳ್ಳುವ ಅತ್ಯವಶ್ಯಕವಾಗಿದೆ ಎಂಬ ಐತಿಹ್ಯವಿದೆ ಎಂದು ಎಚ್.ಜಿ.ಪಪೂ ಕಾಲೇಜಿನ ಪ್ರಾಚಾರ್ಯ ಎ.ಆರ್.ಹೆಗ್ಗಣದೊಡ್ಡಿ ಹೇಳಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ತಾಲ್ಲೂಕು ಆಡಳಿತವತಿಯಿಂದ ಹಮ್ಮಿಕೊಂಡ ಶ್ರೀ ಸಂತ ಶ್ರೇಷ್ಠ ಭಕ್ತ ಕನಕದಾಸರ ಜಯಂತಿ ಸಮಾರಂಭದಲ್ಲಿ ಉಪನ್ಯಾಸ ನೀಡಿ, ಕನಕದಾಸರ ತಮ್ಮ 90 ವರ್ಷದ ಅವದಿಯಲ್ಲಿ 78 ಹಳ್ಳಿಗಳ ದಂಡನಾಯಕನಾಗಿ ಕುಲಷಿತ ಸಮಾಜದಲ್ಲಿ ಅವರ ವಿಚಾರದಾರೆಗಳು ಪ್ರಸ್ತುತವಾಗಬೇಕು. ಅವರನ್ನು ಒಂದು ಜಾತಿಗೆ ಸಿಮಿತಗೊಳಿಸಿದರೆ ಮುರ್ಖತನವಾಗಿದೆ. ಮನಕುಲದ ಕಳೆಯನ್ನು ಸ್ವಚ್ಚಗೊಳಿಸಲು ಅವರ ಚಿಂತನೆಗಳ ಮೂಲಕ ತೊಳೆದಿದ್ದಾರೆ. ಸಹಜ ಬದುಕು ಬಾಳಿದ ಕನಕದಾಸರು, ಕೀರ್ತನರಾರರಾಗಿ, ತತ್ತ್ವಜ್ಞಾನಿಯಾಗಿ, ಸಂತರಾಗಿ, ದಾರ್ಶನಿಕರಾಗಿ ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆಗೆ ಅನನ್ಯ ಕೊಡುಗೆಯನ್ನು ನೀಡಿದ್ದಾರೆ. ಕನಕದಾಸರು ದಂಡನಾಯಕರಾಗಿದ್ದು, ಯುದ್ಧದಲ್ಲಿ ಸೋತ ನಂತರ ಅವರಿಗೆ ವೈರಾಗ್ಯ ಉಂಟಾಗಿ ಹರಿಭಕ್ತ ದಾಸರಾದರು ಜಾತಿ, ಮತ, ಕುಲಗಳ ಭೇದ ಭಾವವನ್ನು ಮೀರಿಸುವಂತೆ ಸಮಾಜದ ಪಿಡುಗುಗಳ ಬಗ್ಗೆ ಜನ ಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ತಿಳಿಸಿ ಸಾಮಾಜಿಕ ಕ್ರಾಂತಿಯನ್ನೇ ಮಾಡಿದ ಸಂತಶ್ರೇಷ್ಠ ಕನಕದಾಸರು ಕುಲಕುಲವೆಂದು ಬಡಿದಾಡದಿರಿ ನಿಮ್ಮ ಕುಲದ ನೆಲವ ಬಲ್ಲಿರಾ ಬಲ್ಲಿರಾ ಎಂದು ಜನಸಾಮಾನ್ಯರ ಮಾತಿನಲ್ಲೇ ತಮ್ಮ ತತ್ವಗಳನ್ನು ಬೋದಿಸುವ ಮೂಲಕ ಸಮಾಜವನ್ನು ತಿದ್ದುವಲ್ಲಿ ಪ್ರಮುಖ ಪಾತ್ರ ವಹಿಸಿದಂತವರು ಅಂತವರ ತತ್ವಾದರ್ಶಗಳನ್ನು ತಾವೆಲ್ಲರೂ ಮೈಗೂಸಿಕೊಂಡು ಜೀವನ ನಡೆಸುವುದು ಅತ್ಯವಶ್ಯಕವಾಗಿದೆ ಎಂದು ತಿಳಿಸಿದರು.
ಕುರುಬ ಸಮಾಜ ಅಧ್ಯಕ್ಷ ನಿಂಗಣ್ಣ ಬಿರಾದಾರ ಮಾತನಾಡಿ, ಸಂತ ಶ್ರೇಷ್ಠ ಕನಕದಾಸರು 5 ನೂರು ವರ್ಷಗಳ ಹಿಂದೆ ಕುಲ ಕುಲವೆಂದು ಬಡಿದಾಡದಿರಿ ನಿಮ್ಮ ಕುಲದ ನೆಲವೆನು ಬಲ್ಲಿರಾ ಬಲ್ಲಿರಾ ಎಂದು ಕೀರ್ತನೆ ಮೂಲಕ ಹಾಡಿ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ ಆದರೆ ಇಂದು ರಾಜಕಾರಣಿಗಳು ಮತಬ್ಯಾಂಕ ಸಲುವಾಗಿ ಪ್ರತಿ ಜಾತಿಗೊಂದು ಶರಣ ಜಯಂತಿಗಳನ್ನು ಮಾಡುವ ಮೂಲಕ ಜಾತಿ ಜಾತಿಗಳಲ್ಲಿ ಒಡೆದಾಳುವ ನೀತಿ ಸೃಷ್ಠಿಸುತ್ತಿದ್ದಾರೆ ಅದರಿಂದ ಹೊರ ಬಂದು ಎಲ್ಲ ಶರಣರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದ ಅವರು ಕನಕ ಭವನಕ್ಕೆ ರೂ 3 ಕೋಟಿ ಹಾಗೂ ಕನಕದಾಸರ ಕಂಚಿನ ಪುತ್ಥಳಿಗೆ ರೂ 5 ಲಕ್ಷ ನೀಡುವ ಭರವಸೆ ನೀಡಿದ ಶಾಸಕ ಅಶೋಕ ಮನಗೂಳಿ ಅವರಿಗೆ ಸಮಾಜದವತಿಯಿಂದ ಅಭಿನಂದಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಪುರಸಭೆ ಉಪಾಧ್ಯಕ್ಷ ರಾಜಣ್ಣಿ ನಾರಾಯಣಕರ ಮಾತನಾಡಿ, ಅಧ್ಯಕ್ಷತೆ ವಹಿಸಿದ ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ, ಸರಕಾರಿ ನೌಕರರ ಸಂಘ ಅಧ್ಯಕ್ಷ ಅಶೋಕ ತೆಲ್ಲೂರ ಮಾತನಾಡಿದರು.
ಗ್ರೇಡ್ 2 ತಹಶೀಲ್ದಾರ ಇಂದ್ರಾಬಾಯಿ ಬಳಗಾನೂರ, ಪುರಸಭೆ ಮುಖ್ಯಾಧಿಕಾರಿ ಎಸ್.ರಾಜಶೇಖರ ವೇದಿಕೆ ಮೇಲಿದ್ದರು.
ಈ ಸಂದರ್ಭದಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಎಚ್.ವಾಯ್ ಸಿಂಗೆಗೋಳ ಸಿ.ಡಿ.ಪಿ.ಓ ಶಂಭುಲಿಂಗ ಹಿರೇಮಠ, ಮುಖಂಡರಾದ ವೈ.ಸಿ.ಮಯೂರ, ಎಸ್.ಕೆ.ಪೂಜಾರಿ ವಕೀಲರು, ಪ್ರಕಾಶ ಹಿರೇಕುರುಬರ, ಶಂಕರ ಸಾತಿಹಾಳ, ಮಹಿಳಾ ಮುಖಂಡರಾದ ಜಯಶ್ರೀ ಹದನೂರ, ಸುನಂದಾ ಯಂಪೂರೆ, ಪ್ರತಿಭಾ ಚಳ್ಳಗಿ ಸೇರಿದಂತೆ ಹಾಗೂ ಎಲ್ಲಾ ಸಮಾಜ ಬಾಂಧವರು ಮತ್ತು ತಹಶೀಲ್ದಾರ ಕಾರ್ಯಾಲಯದ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ತಾಪಂ ನೋಡಲ್ ಅಧಿಕಾರಿ ನಿತ್ಯಾನಂದ ಯಲಗೋಡ ಸ್ವಾಗತಿಸಿದರು. ಪ್ರಲ್ಹಾದ ಕೆಳಗಿನಮನಿ ಪ್ರಾರ್ಥನಾ ಗೀತೆ ಹಾಡಿದರು. ಬಿಇಓ ಮಹಾಂತೇಶ ಯಡ್ರಾಮಿ ವಂದಿಸಿದರು.