ತಾಲ್ಲೂಕಿನಾದ್ಯಂತ ಸಂತ ಕನಕದಾಸರ ಜಯಂತಿ ಅದ್ದೂರಿಯಾಗಿ ಆಚರಣೆ
ತಾಲ್ಲೂಕಿನಾದ್ಯಂತ ಸಂತ ಕನಕದಾಸರ ಜಯಂತಿ ಅದ್ದೂರಿಯಾಗಿ ಆಚರಣೆ
ಇಂಡಿ 19 : ತಾಲ್ಲೂಕಿನಾದ್ಯಂತ ಸಂತ ಕನಕದಾಸರ ಜಯಂತಿ ಅದ್ದೂರಿಯಾಗಿ ಆಚರಣೆ ಮಾಡಲಾಯಿತು.ಅದರಂತೆ ಇಂಡಿ ನಗರದ ಮಿನಿ ವಿಧಾನಸೌಧ ಆವರಣದಲ್ಲಿ ಶ್ರೀ ಕನಕದಾಸರ ಭಾವಚಿತ್ರಕ್ಕೆ ಇಂಡಿ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಅವರು ಪೂಜ್ಯ ಸಲ್ಲಿಸಿದರು.ನಂತರ ಮಾತನಾಡಿದ ಅವರು ಹರಿಭಕ್ತರಾದ ಕನಕದಾಸರು 1509 ರಂದು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದಲ್ಲಿ ಹಿಂದೂ ಕುರುಬ ಜನಾಂಗಕ್ಕೆ ಸೇರಿದ ಬಚ್ಚಮ್ಮ ಮತ್ತು ಬೀರ್ಪನಾಯಕ ಎಂಬ ದಂಪತಿಗಳ ಮಗನಾಗಿ ಜನಿಸಿದರು. ಕನಕದಾಸರ ಮೂಲ ಹೆಸರು ತಿಮ್ಮಪ್ಪನಾಯಕ. ಸಂತನಾಗುವ ಮೊದಲು ಯೋಧನಾಗಿದ್ದ ಇವರು, ಯುದ್ಧದಲ್ಲಿ ಗಂಭೀರವಾಗಿ ಗಾಯಗೊಂಡರು.ದೇವರ ಲೀಲೆಯಿಂದ ಬದುಕುಳಿದ ನಂತರ ಅವರು ಯೋಧನಾಗಿದ್ದ ಕೆಲಸವನ್ನು ತ್ಯಜಿಸಿ ಹರಿದಾಸರಾದರು ಮತ್ತು ತಮ್ಮನ್ನು ದೇವರ ಸೇವೆಯಲ್ಲಿ ತೊಡಗಿಸಿಕೊಂಡರು.ಕನಕದಾಸರ ಕಾವ್ಯಗಳು ಕರ್ನಾಟಕ ಶೈಲಿಯಲ್ಲಿ ರಚನೆಯಾದ ಕಾವ್ಯಗಳಾಗಿವೆ. ಅವರು ತಮ್ಮ ಎಲ್ಲಾ ಹಾಡುಗಳಿಗೆ ‘ಕಾಗಿನೆಲೆ ಆದಿಕೇಶವ’ ಎಂಬ ಕಾವ್ಯನಾಮವನ್ನು ಬಳಸಿದ್ದಾರೆ. ನಳಚರಿತ್ರೆ, ಹರಿಭಕ್ತಿಸಾರ, ನೃಸಿಂಹಸ್ತವ, ರಾಮಧಾನ್ಯಚರಿತ್ರೆ ಮತ್ತು ಮೋಹನತರಂಗಿಣಿ ಅವರ ಕೆಲವು ಪ್ರಸಿದ್ಧ ಕೃತಿಗಳು ಎಂದು ಹೇಳಿದರು.ಈ ಇಂಡಿ ತಶೀಲದಾರ ಎಸ್ ಬಿ ಕಡಕಬಾವಿ, ಶಿರಸ್ತೇದಾರ್ ಎಚ್ ಎಚ್ ಗುನ್ನಾಪೂರ ಎಸ್ ಆರ್ ಮುಜಗೊಂಡ ಬಳ್ಳೊಳ್ಳಿ ಕಂದಾಯ ನೀರೀಕ್ಷಕರಾದ ಬಸವರಾಜ ಅವಜಿ, ಸಿದ್ದು ಪೂಜಾರಿ ಪ್ರಕಾಶ್ ಚವಡಿಹಾಳ ಎಮ್ ಕೆ ಕೊಡತೆ ತಾಲೂಕು ಪಂಚಾಯಿತಿ ಮ್ಯಾನೇಜರ್ ಮುರುಗೇಶ್ ನಾರಾಯಪೂರ,ಹಾಗೂ ಜೇಟ್ಟೆಪ್ಪ ರವಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು ಅದರಂತೆ ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದಲ್ಲಿ ಕೂಡಾ ಕನಕದಾಸರ ಜಯಂತಿ ಆಚರಣೆ ಮಾಡಲಾಯಿತು.