ಸೌಂದತ್ತಿ

ಎಸ್.ಜಿ.ಶಿಂತ್ರಿ ಕಾಲೇಜ್ ಕಬಡ್ಡಿ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಎಸ್.ಜಿ.ಶಿಂತ್ರಿ ಕಾಲೇಜ್ ಕಬಡ್ಡಿ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಲೋಕದರ್ಶನ ವರದಿ

ಸವದತ್ತಿ 09: ಸ್ಥಳೀಯ ಎಸ್.ಜಿ.ಶಿಂತ್ರಿ ಪಿಯು ಕಾಲೇಜಿನ ಕಬಡ್ಡಿ ತಂಡವು ಮುರಗೋಡದಲ್ಲಿ ನಡೆದ ತಾಲೂಕು ಮಟ್ಟದ ಪಿಯು ಕಾಲೇಜು ಕ್ರೀಡಾಕೂಟದಲ್ಲಿ ಜಯಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ. ತಂಡದ ನಾಯಕ ಸಾಹಿಲ್ ಅಲ್ಲಿಸಾಬನವರ, ಉಮೇಶ ಕುರಿ, ಈರಣ್ಣ ಬಡ್ಲಿ, ಭರತ ಸಂಗ್ರೇಶಿ, ಅಭಿಷೇಕ ಹೂಲಿ, ಸಂತೋಷ ನೇಗಿನಹಾಳ, ಅಭಿಷೇಕ ಹಟ್ಟಿಹೊಳಿ, ಹನಮಂತಗೌಡ ಪಾಟೀಲ, ಉಮೇಶ ಕರೀಕಟ್ಟಿ, ಹನಮಂತ ತಳವಾರ, ನಿಂಗಪ್ಪ ದಿನ್ನಿಮನಿ, ಸುಮೀತ ದಳವಾಯಿ ಜಯಗಳಿಸಿದ ತಂಡದ ಆಟಗಾರರಾಗಿದ್ದಾರೆ.

ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ತಂಡದ ಆಟಗಾರರಿಗೆ ಸಂಸ್ಥೆಯ ಕಾರ್ಯದಶರ್ಿಯವರಾದ ರತ್ನಾ ಮಾಮನಿ, ವ್ಯವಸ್ಥಾಪಕ ನಿರ್ದೇಶಕ ಎ.ಐ.ಶಿರಸಂಗಿ, ಪ್ರಾಚಾರ್ಯ ಸುರೇಶ ವಾರೆಪ್ಪನವರ, ಯು.ಎನ್.ಮನಗೂಳಿ, ದೈಹಿಕ ಶಿಕ್ಷಕ ಎಮ್.ಎನ್.ಗುಡಗಾರ ಸೇರಿದಂತೆ ಕಾಲೇಜು ಸಿಬ್ಬಂದಿಯವರು ಅಭಿನಂದಿಸಿದ್ದಾರೆ 

ಸುದ್ದಿ ಓದಿ