ಎಸ್ಎಫ್ಐ 8ನೇ ತಾಲೂಕ ಸಮ್ಮೇಳನ
ರಾಣೇಬೆನ್ನೂರ 19: ವಿದ್ಯಾರ್ಥಿ ವಿರೋಧಿ ರಾಜ್ಯ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕು ಇಲ್ಲದೆ ಹೋದರೆ ವಿದ್ಯಾರ್ಥಿಗಳು ಶಿಕ್ಷಣ ವಂಚಿತರಾಗುತ್ತಾರೆ ಎಂದು ಎಸ್ ಎಫ್ ಐ ರಾಜ್ಯ ಅಧ್ಯಕ್ಷ ಅಮರೇಶ್ ಕಡಗದ ಹೇಳಿದರು ಅವರು ಬುಧವಾರ ಇಲ್ಲಿನ ಕೆ. ಇ.ಬಿ. ವಿನಾಯಕ ದೇವಸ್ಥಾನ ಸಭಾಭವನದಲ್ಲಿ ಎಸ್ ಎಫ್ ಐ ಆಯೋಜಿಸಿದ್ದ ಸರ್ಕಾರಿ ಶಾಲಾ-ಕಾಲೇಜು ಬಲವರ್ಧನೆಗಾಗಿ, ಶಿಕ್ಷಣದ ವ್ಯಾಪಾರೀಕರಣ ಹಾಗೂ ಕೋಮುವಾದ ವಿರೋಧಿಸಿ, ವಿದ್ಯಾರ್ಥಿ ಗಳ ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣೆಗಾಗಿ ನಡೆದ 8 ನೇ ತಾಲೂಕ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದರು.
ರಾಜ್ಯಾದಲ್ಲಿ ಇತ್ತೀಚೆಗೆ ಖಾಸಗಿ ಕಾಲೇಜುಗಳು ಮನಬಂದಂತೆ ಹಣ ಪಡೆಯುವುದರ ಮೂಲಕ ಹಣವುಳ್ಳವರಿಗೆ ಮಾತ್ರ ಶಿಕ್ಷಣ ಎಂಬ ರೀತಿಯಲ್ಲಿ ಶಿಕ್ಷಣವನ್ನು ವ್ಯಾಪಾರೀಕರಣ ಮಾಡುತ್ತಿದ್ದಾರೆ. ಸಕರ್ಾರದ ಜನಪ್ರತಿನಿಧಿಗಳು ಮೌನವಹಿಸಿರುವುದು ನೋಡಿದರೆ ಪರೋಕ್ಷವಾಗಿ ಖಾಸಗಿ ಕಾಲೇಜುಗಳಿಗೆ ಬೆಂಬಲ ಕೊಟ್ಟಂತೆ ಭಾಸವಾಗುತ್ತದೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಸರಕಾರಗಳ ಈ ವಿರೋಧಿಯಿಂದಾಗಿ ನೀತಿಗಳಿಂದಾಗಿ ರಾಜ್ಯ, ದೇಶದಲ್ಲಿನ ಬಹುತೇಕ ವಿದ್ಯಾಥರ್ಿಗಳು ಉನ್ನತ ಶಿಕ್ಷಣಕ್ಕಾಗಿ ಸಣ್ಣ, ಸಣ್ಣ ರಾಷ್ಟ್ರಗಳಾದ ಉಕ್ರೇನ್, ಕ್ಯೂಬಾ ಸೇರಿ ಇತರೆ ರಾಷ್ಟ್ರಗಳಿಗೆ ಹೋಗಿ ಕಲಿಯುವಂತಾಗಿದೆ. ರಾಜ್ಯದಲ್ಲಿನ ಉನ್ನತ ಶಿಕ್ಷಣದ ನೀತಿ ಬಗ್ಗೆ ಸರಕಾರ ಯಾವುದೇ ಕ್ರಮಕ್ಕೆ ಮುಂದಾಗದೆ ಇರುವುದು ಖಂಡನೀಯ ಎಂದರು. ಸರಕಾರದ ವಿದ್ಯಾರ್ಥಿ ವಿರೋಧಿ ಶಿಕ್ಷಣ ನೀತಿಗಳ ವಿರುದ್ಧ ಎಲ್ಲರೂ ಒಂದಾಗಿ ಒಗ್ಗಟ್ಟಾಗಿ ಹೋರಾಟ ಮಾಡುವುದು ಇಂದಿನ ಅನಿವಾರ್ಯವಾಗಿದೆ ಎಂದರು.ರಾಜ್ಯದಲ್ಲಿ ಸರಕಾರಿ ಶಾಲಾ ಕಾಲೇಜುಗಳು ಮೂಲಭೂತ ಸೌಲಭ್ಯಗಳಿಲ್ಲದೆ ಸೊರಗುತ್ತವೆ, ನಿರುದ್ಯೋಗಿಗಳ ಸಂಖ್ಯೆ ಜಾಸ್ತಿಯಾಗುತ್ತಲಿದೆ, ಉದ್ಯೋಗ ಸೃಷ್ಟಿ ಇಲ್ಲ,ಭದ್ರತೆ ಇಲ್ಲವೇ ಇಲ್ಲ. ಸರ್ಕಾ ರಿ ಶಾಲೆಗಳನ್ನು ಸರ್ಕಾರ ಕೋಮುವಾದದ ಪ್ರಾಯೋಗಿಕ ಬಳಸಿಕೊಳ್ಳುತ್ತಿರುವುದು ಸರಿಯಲ್ಲ ಯಾವುದೇ ಕಾರಣಕ್ಕೂ ಸರ್ಕಾ ರಿ ಶಾಲಾ ಕಾಲೇಜುಗಳನ್ನು ಕೇಸರಿಕರಣ ಮಾಡಲು ಬಿಡುವುದಿಲ್ಲ ಎಂದರು. ಚಿತ್ರಕಾರ ನಾಮದೇವ ಕಾಗದಗಾರ,ಉಪನ್ಯಾಸಕ ಚಂದು ನಾಯಕ,ಎಸ್ಎಫ್ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಭೋವಿ, ತಾಲ್ಲೂಕು ಕಾರ್ಯದರ್ಶಿ ಗುಡ್ಡಪ್ಪ ಮಡಿವಾಳರ, ಸಹ ಕಾರ್ಯದರ್ಶಿ ವೀಣಾ ಎಸ್, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು .ಶ್ರೀಧರ್ ಛಲವಾದಿ ಅಧ್ಯಕ್ಷತೆ ವಹಿಸಿದ್ದರು. ಶರತ್ ಗೌಡ ಸ್ವಾಗತಿಸಿ,ನಿರೂಪಿಸಿದರು.ಹರ್ಷ ಹೊಂಗಲ್ ವಂದಿಸಿದರು