...ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಬೀಳ್ಕೋಡುಗೆ ಸಮಾರಂಭ ..,,.,..,...,,,,
ಲೋಕದರ್ಶನ ವರದಿ
ಶಿಗ್ಗಾವಿ : ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಕಾಣ ಬೇಕಾದರೆ ಒಂದು ಗುರಿ ಹಾಗೂ ಒಂದು ಗುರು ಇರಬೇಕು ಅಂದಾಗ ಮಾತ್ರ ಯಶಸ್ಸು ಕಾಣಬಹುದು ಎಂದು ಚನ್ನಪ್ಪ ಕುನ್ನೂರ ಸಮೂಹ ಸಂಸ್ಥೆಯ ಅಧ್ಯಕ್ಷೆ ಸ್ನೇಹಲತಾ ಕುನ್ನೂರ ಹೇಳಿದರು.
ಪಟ್ಟಣದ ಚನ್ನಪ್ಪ ಕುನ್ನೂರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಸರಸ್ವತಿ ಪೂಜೆ ಮತ್ತು ಬೀಳ್ಕೋಡುಗೆ ಸಮಾರಂಭ ಉದ್ದೇಶಿಸಿ ಮಾತನಾಡಿ ಪ್ರಸ್ತುತ ದಿನಮಾನಗಳಲ್ಲಿ ಜ್ಞಾನಾರ್ಜನೆಗೆ ಇರುವ ಬೆಲೆ ಬೇರೆ ಯಾವ ಪರಿಕಲ್ಪನೆಗೆಯಿಲ್ಲ ಕಾರಣ ಹೆಚ್ಚು ಅಂಕ ಪಡೆದು ಉನ್ನತ ಹುದ್ದೆಯನ್ನು ಅಲಂಕರಿಸಿ ಎಂದರು.
ಚನ್ನಪ್ಪ ಕುನ್ನೂರ ಸಮೂಹ ಸಂಸ್ಥೆಯ ಕಾರ್ಯದರ್ಶಿ ರಾಜು ಕುನ್ನೂರ ಮಾತನಾಡಿ ನಿಮ್ಮ ಭವ್ಯವಾದ ಭವಿಷ್ಯವನ್ನು ರೂಪಿಸಿಕೊಳ್ಳಲು ಇದು ಒಳ್ಳೆಯ ಸುವರ್ಣ ಅವಕಾಶ ಇದರ ಸದುಪಯೋಗ ಪಡೆದುಕೊಂಡು ನಿಮ್ಮ ಉಜ್ವಲ ಭವಿಷ್ಯ ರೂಪಿಸಿಕೊಳ್ಳಿರಿ ಎಂದರು.
ಪ್ರಾಚಾರ್ಯ ಎಸ್ ಹೆಚ್. ಹಾವೇರಿ, ನಿರ್ದೇಶಕ ಈರಣ್ಣಾ ಬಡ್ಡಿ, ಶೇಖರ ಪರಸಾಪೂರ, ಮಾರುತಿ ಲಮಾಣಿ, ಮಂಜುಳಾ ಪಾಟೀಲ, ಗಾಯತ್ರಿ ದೈವಜ್ಞ, ರೇಣುಕಾ ಅಂಗಡಿ, ಮಂಜುಳಾ.ಪಿ.ಬಿ, ವಿಧ್ಯಾ ಹೆಸರೂರ, ಕೆ.ಎಸ್.ಅಶ್ವಿನಿ, ಶೃತಿ ನವರತ್ನ, ಗೀತಾ ಪಟ್ಟಣಶೆಟ್ಟಿ, ಲಾವಣ್ಯ ಸೋಮಸಾಗರ, ಸರೋಜಾ ಮಡ್ಲಿ, ಭಾರತೀ ಶಿವಲೋಚನಮಠ, ಸುನೀಲ ಮ್ಯಾಗೇರಿ ಸೇರಿದಂತೆ ಎಸ್.ಎಸ್.ಎಲ್.ಸಿ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.