ಮಂಗಸೂಳಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಪ್ರಯುಕ್ತ ಕುಸ್ತಿ ಪಂದ್ಯಾವಳಿಗಳಿಗೆ ಶ್ರೀಮಂತ ಪಾಟೀಲ ಚಾಲನೆ..!
ಕಾಗವಾಡ 19: ತಾಲೂಕಿನ ಮಂಗಸೂಳಿ ಗ್ರಾಮದಲ್ಲಿ ಹಿಂದೂ ಹೃದಯ ಸಾಮ್ರಾಟ, ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯ ನಿಮಿತ್ಯ ಬುಧವಾರ ದಿ. 18 ರಂದು ಭವ್ಯ ಜಂಗಿ ನಿಕಾಲಿ ಕುಸ್ತಿ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿತ್ತು.
ಕುಸ್ತಿ ಪಂದ್ಯಾವಳಿಯನ್ನು ಮಾಜಿ ಸಚಿವರು ಹಾಗೂ ಅಥಣಿ ಶುಗರ್ಸ್ ಕಾರ್ಖಾನೆಯ ಅಧ್ಯಕ್ಷ ಶ್ರೀಮಂತ ಪಾಟಿಲ ಅವರು ಸ್ಥಳೀಯ ಗಣ್ಯರೊಂದಿಗೆ ಕುಸ್ತಿ ಮೈದಾನಕ್ಕೆ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಗೆ ಪೂಜೆ ಸಲ್ಲಿಸಿ, ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿದರು.
ಶ್ರೀಮಂತ ಪಾಟೀಲ ಅವರು ಈ ಪಂದ್ಯಾವಳಿಗೆ ತಮ್ಮ ಶ್ರೀಮಂತ ಪಾಟೀಲ ಫೌಂಡೇಶನ್ ವತಿಯಿಂದ ಸಹಾಯಧನ ನೀಡಿದ್ದು, ಕುಸ್ತಿ ಕಮಿಟಿಯ ಸದಸ್ಯರು ಅವರನ್ನು ಇದೇ ವೇಳೆ ಸತ್ಕರಿಸಿದರು.
ಈ ಸಮಯದಲ್ಲಿ ಮುಖಂಡರಾದ ದಿಗ್ವಿಜಯ ಪವಾರ-ದೇಸಾಯಿ, ಅಶೋಕರಾವ ಪೋಲಿಸ-ಪಾಟೀಲ, ರವೀಂದ್ರ ಪೂಜಾರಿ, ದಾದಾಗೌಡ ಪಾಟೀಲ, ಸಂಭಾಜಿ ಪಾಟೀಲ, ಬಾಬಾಸಾಬ ಪಾಟಿಲ, ಮೆಹಬೂಬ ಮುಲ್ಲಾ ಸೇರಿದಂತೆ ಹಲವಾರು ಮುಖಂಡರು, ಗ್ರಾಮದ ಗಣ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.