ವೃತ್ತಿ ಗೌರವಿಸಿ ಕಾನೂನು ಅನುಸರಣೆ ಮಾಡಿ ಅಂಗಡಿ ನಡೆಸಿ: ಸಂಗಣ್ಣ ಶೀಳಿ
ಲೋಕದರ್ಶನ ವರದಿ
ಶಿಗ್ಗಾವಿ : ಔಷಧ ವ್ಯಾಪಾರಸ್ಥರು ಜೀವ ಉಳಿಸೋಕೆ ಇರೋದು ಅದು ಪವಿತ್ರವಾದ ವೃತ್ತಿ ಅದನ್ನು ಗೌರವಿಸಿ ಕಾನೂನು ಅನುಸರಣೆ ಮಾಡಿ ಅಂಗಡಿಗಳನ್ನು ನಡೆಸಿ ಎಂದು ಸಹಾಯಕ ಔಷಧ ನಿಯಂತ್ರಕ ಸಂಗಣ್ಣ.ಎಸ್. ಶೀಳಿ ಕರೆ ನೀಡಿದರು.
ನಗರದ ಎಸ್ ಎಸ್ ಬಿ ಬಿ ಎಂ ಡಿ ಪ ಪೂ ಕಾಲೇಜಿನ ಸಭಾ ಭವನದಲ್ಲಿ ತಾಲೂಕ ಔಷಧ ವ್ಯಾಪಾರಸ್ಥರ ಸಂಘದಿಂದ ಹಾವೇರಿ ಜಿಲ್ಲೆಗೆ ಸಹಾಯಕ ಔಷಧ ನಿಯಂತ್ರಕರಾಗಿ ನೂತನವಾಗಿ ಆಗಮಿಸಿದ ಸಂಗಣ್ಣ ಎಸ್. ಶೀಳಿ ಯವರ ಸ್ವಾಗತ ಕಾರ್ಯಕ್ರಮದೊಂದಿಗೆ ನಿರಂತರ ಕಲಿಕಾ ಕಾರ್ಯಾಗಾರ ಕಾರ್ಯಕ್ರಮವನ್ನು ಸಸಿಗೆ ನೀರುಣಿಸಿ ಉದ್ಘಾಟಿಸಿ ಮಾತನಾಡಿದ ಅವರು ತಾಲೂಕಿನ ಔಷಧ ವ್ಯಾಪಾರಸ್ಥರ ಸಂಘದಿಂದ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಕೈಗೊಂಡು ಬಡವ ಬಲ್ಲಿದ ನಿರ್ಗತಿಕರ ಪಾಲಿಗೆ ಸಂಜೀವಿನಿಯಾಗಿರಿ ಎಂದರು.
ಅಧ್ಯಕ್ಷ ಮಹಾಂತೇಶ ಬಳಿಗಾರ ಪ್ರಾಸ್ತಾವಿಕವಾಗಿ ಮಾತನಾಡಿ ಅಧಿಕಾರಿಗಳ ನಿರಂತರ ಸಹಕಾರ ಮತ್ತು ಮಾರ್ಗದರ್ಶನ ನಮಗೆ ಸಿಕ್ಕರೆ ನಾವು ನಮ್ಮ ಸಂಘದಿಂದ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತೇವೆ ಎಂದರು.
ಈ ಕಾರ್ಯಕ್ರಮದಲ್ಲಿ ಹಿರಿಯ ಔಷಧ ವ್ಯಾಪಾರಸ್ಥ ಹರೀಶ ಮಾಳವದೆ, ನಿಳೋಬಾ ಮಾಳವದೆ, ಜೀವಣ್ಣ ಸಂಕಣ್ಣನವರ ಹಾಗೂ ಸಂಘದ ಪದಾಧಿಕಾರಿಗಳಾದ ಶಿವಕುಮಾರ ಅದವಾನಿಮಠ, ಎಮ. ಎ. ಖಾಜೇಖಾನವರ, ಮಂಜುನಾಥ ಮೇಲಗಿರಿ, ಮಂಜುಳಾ ಹಿರೇಮಠ, ಕುಮಾರ ಹೆಸರೂರ ಹಾಗೂ ಕುಮಾರಗೌಡ ಪಾಟೀಲ, ರಾಜು ಕುಲಕರ್ಣಿ, ಬಸವರಾಜ ಬೂದಿಹಾಳ, ವಿಜಯಕುಮಾರ ಹನುಮಕ್ಕನವರ, ನವೀನ ಪಾಟೀಲ, ಚಿದಾನಂದ, ಬನ್ನಿಕಲ್ಲ ಹಾಗೂ ತಾಲೂಕಿನ ಎಲ್ಲ ಔಷಧ ವ್ಯಾಪಾರಸ್ಥರು ಭಾಗವಹಿಸಿದ್ದರು. ಶಿವಕುಮಾರ ಅದವಾನಿಮಠ ಸ್ವಾಗತಿಸಿದರು. ರಾಘವೇಂದ್ರ ದೇಶಪಾಂಡೆ ನಿರೂಪಿಸಿದರು