ಬಳ್ಳಾರಿ

ಸಂಶೋಧನಾ ಉಳಿಸಿ ದಿನ ಅಂದೋಲನ

ಸಂಶೋಧನಾ ಉಳಿಸಿ ದಿನ ಅಂದೋಲನ

ಬಳ್ಳಾರಿ 12: ಡೆಮಾಕ್ರಟಿಕ್ ರಿರ್ಸಚ್ ಸ್ಕಾರ್ಲರ್ಸ್  ಆರ್ಗನೈಜೇಷನ್ (ಆಖಖಔ) ಆಖಿಲ ಭಾರತದ ಸಮಿತಿಯು  ಮೇ 12 ರಂದು ದೇಶದ್ಯಾಂತ ಸಂಶೋಧನಾ ಉಳಿಸಿ ದಿನ ಅಭಿಯಾನವನ್ನು ಹಮ್ಮಿಕೊಂಡಿದೆ. 

   ಇದರ ಅಂಗವಾಗಿ ಆಖಖಔ ಕರ್ನಾಟಕ ರಾಜ್ಯ ಕೌನ್ಸಿಲ್ ಮೇ. 12 ಶುಕ್ರವಾರ ರಂದು ಸಂಶೋಧನಾ ಉಳಿಸಿ ದಿನದ ಭಾಗವಾಗಿ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಾದ ಕುವೆಂಪು ವಿವಿ, ಅಕ್ಕಮಹಾದೇವಿ ಮಹಿಳಾ ವಿವಿ, ಮೈಸೂರು ವಿವಿ, ಬಳ್ಳಾರಿ ಶ್ರೀಕೃಷ್ಣದೇವರಾಯ ವಿವಿ ಮತ್ತು ಕನ್ನಡ ವಿಶ್ವವಿದ್ಯಾಲಯ ಹಂಪಿ ಮುಂತಾದ ಕಡೆಗಳಲ್ಲಿ ಪಿಎಚ್.ಡಿ ಸಂಶೋಧನಾರ್ಥಿಗಳು ಈ ಒಂದು ಅಭಿಯಾನದಲ್ಲಿ ಸಕ್ರಿಯಾವಾಗಿ ಭಾಗವಹಿಸಿದ್ದರು. 

     ಮುಖ್ಯವಾಗಿ ಸಂಶೋಧನಾ ವಿದ್ಯಾರ್ಥಿಗಳ ಬೇಡಿಕೆಗಳಾದ ಮೊದಲನೇಯದು ಕೇಂದ್ರ ಸಕರ್ಾರದ ಬಜೆಟ್ನಲ್ಲಿ ಸಂಶೋಧನೆಗೆ ಶೇ. 3 ರಷ್ಟು ಹಣವನ್ನು ಮೀಸಲಿಡಬೇಕು ಹಾಗೂ ಶಿಕ್ಷಣಕ್ಕೆ ಶೇ. 10 ರಷ್ಟು ಹಣವನ್ನು ಬಜೆಟ್ನಲ್ಲಿ ಮೀಸಲಿಡಬೇಕು. ಎರಡನೇದು ಕೇಂದ್ರ ಮತ್ತು ರಾಜ್ಯ ಸಕರ್ಾರದ ವಿಶ್ವವಿದ್ಯಾಲಯಗಳು ನೀಡುತ್ತಿರುವ ಫೇಲೋಶಿಫ್ನ್ನು ಹೆಚ್ಚಿಸಬೇಕು. ತ್ವರಿತವಾಗಿ ಮಾಸಿಕವಾಗಿ ಫೇಲೋಶಿಫ್ನ್ನು ಬಿಡುಗಡೆಗೊಳಿಸಬೇಕು. ಮೂರನೇಯದು ವೈಜ್ಞಾನಿಕ ಸಂಶೋಧನೆಗಳಿಗೆ ಹೆಚ್ಚಿನ ಮಹತ್ವ ನೀಡಬೇಕು, ಭಾರತದ ಜ್ಞಾನ, ಸಂಸ್ಕೃತಿಯ ಹೆಸರಲ್ಲಿ ಹುಸಿ ಸುಳ್ಳು, ಇತಿಹಾಸವನ್ನು ತಿರುಚುವ ಕೆಲಸಗಳನ್ನು ಕೈ ಬಿಡಬೇಕು. ಸಂಶೋಧನಾ ಕಾರ್ಯಚಟುವಟಿಕೆಗಳಿಗೆ  ಹೆಚ್ಚಿನ ಪ್ರೋತ್ಸಾಹವನ್ನು ನೀಡಬೇಕೆಂಬ ಬೇಡಿಕೆಗಳನ್ನು ಕೇಂದ್ರ ಸರ್ಕಾರ ತ್ವರಿತವಾಗಿ ಕ್ರಮವಹಿಸುವಂತೆ ಸಂಶೋಧನಾ ವಿದ್ಯಾರ್ಥಿ ಗಳು ಆಗ್ರಹಿಸಿದರು. ಕನರ್ಾಟಕದಲ್ಲಿನ ಸಂಶೋಧನಾ ವಿದ್ಯಾರ್ಥಿ ಗಳ ಉತ್ತಮ ಬೆಂಬಲದೊಂದಿಗೆ ಮೇ. 12 ರಂದು ಸಂಶೋಧನಾ ಉಳಿಸಿ ದಿನದ ಆಂದೋಲನಕ್ಕೆ ಪ್ರತಿಕ್ರಿಯೆ ದೊರೆಯಿತು 

ಸುದ್ದಿ ಓದಿ