ತಾಳಿಕೋಟಿ

ಕರ ವಸೂಲಾತಿ ಮಾಡದ ಅಧಿಕಾರಿಗಳ ವಿರುದ್ಧ ಕ್ರಮ ಕೈಕೊಳ್ಳುವಂತೆ ಆಗ್ರಹಿಸಿ ಡಿಸಿಗೆ ಮನವಿ

ಕರ ವಸೂಲಾತಿ ಮಾಡದ ಅಧಿಕಾರಿಗಳ ವಿರುದ್ಧ ಕ್ರಮ  ಕೈಕೊಳ್ಳುವಂತೆ ಆಗ್ರಹಿಸಿ ಡಿಸಿಗೆ ಮನವಿ
ತಾಳಿಕೋಟೆ ಪುರಸಭೆ ಕರ ವಸಲಾತಿ ಮಾಡದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿ ಪುರಸಭೆ ಸದಸ್ಯರು ಜಿಲ್ಲಾಧಿಕ

ತಾಳಿಕೋಟೆ27: ಪುರಸಭೆಯ ವಾಣಿಜ್ಯ ಮಳಿಗೆಗಳ ಬಾಡಿಗೆಯನ್ನು ಎಪ್ರಿಲ್ 2017 ರಿಂದ ಇಲ್ಲಿಯ ವರೆಗೆ ನಿಯಮಾನುಸಾರವಾಗಿ ವಸೂಲಿ ಮಾಡದಿರುವದರಿಂದ ಪುರಸಭೆಗೆ ಆದಾಯಕ್ಕೆ ಧಕ್ಕೆಯಾಗಿದ್ದು, ಕರ ವಸೂಲಾತಿ ಮಾಡಲು ನಿರ್ಲಕ್ಷ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಕೊಳ್ಳುವಂತೆ ಆಗ್ರಹಿಸಿ ಪುರಸಭೆ ಸದಸ್ಯರು ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು.

ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರಿಗೆ ಮನವಿಯನ್ನು ಸಲ್ಲಿಸಿದ ಪುರಸಭೆ 14 ಸದಸ್ಯರು, 

ತಾಳಿಕೋಟಿ ಪುರಸಭೆಯ ಮಾಲ್ಕಿ ವಾಣಿಜ್ಯ ಮಳಿಗೆಗಳ ಬಾಡಿಗೆ ಅವಧಿ ಒಪ್ಪಂದದ ಕರಾರು ಪತ್ರದ ಪ್ರಕಾರ ಅಂಗಡಿಕಾರರ ಅವಧಿ ಮಾ.31,2017 ಕೈ ಮುಗಿದಿತ್ತು.  ನಿಯಮಾನುಸಾರ ನ.22,2019 ರಂದು ಪುರಸಭೆಯ ಮಾಲ್ಕಿ ವಾಣಿಜ್ಯ ಮಳಿಗೆಗಳನ್ನು ಬಹಿರಂಗ ಹರಾಜು ಮಾಡಲಾಗಿದೆ. ಹರಾಜು ಪ್ರಕಾರ ಸಾರ್ವಜನಿಕ ಪ್ರಕಟಣೆ ಪ್ರಕಾರ ಅಂಗಡಿಕಾರರು ಠೇವಣಿ ಹಣ ಇಟ್ಟು ಹರಾಜಿನಲ್ಲಿ ಭಾಗವಹಿಸಿ ಇಪ್ಪಿಕೊಂಡಂತೆ ಬಾಡಿಗೆ ಕಟ್ಟದೆ ಬಾಡಿಗೆ ಹೆಚ್ಚಾಗಿದೆ ಅಂತಾ ಉಚ್ಛ ನ್ಯಾಯಾಲಯಕ್ಕೆ ದಾವೆಯನ್ನು ಸಲ್ಲಿಸಿದ್ದರು. ಆದರೆ ಉಚ್ಛ ನ್ಯಾಯಾಲಯವು ಸಕರ್ಾರಿ ಸುತ್ತೋಲೆ ಪ್ರಕಾರ ಬಾಡಿಗೆ ವಸೂಲಿ ಮಾಡಲು  ಆದೇಶಿಸಿತ್ತು. ಜಿಲ್ಲಾಧಿಕಾರಿಯವರೂ ವಿಳಂಬ ಮಾಡದೇ ಬಾಡಿಗೆ ವಸೂಲಿ ಮಾಡಲಿಕ್ಕೆ ಆದೇಶಿಸಿದ್ದರೂ ಸಹಿತ ಅಧಿಕಾರಿಗಳು ಬಾಡಿಗೆ ವಸೂಲಿ ಮಾಡಿಲ್ಲ. ಇದರಿಂದ ಪುರಸಭೆಗೆ ಸುಮಾರು 3 ಕೋಟಿಗೂ ಅಧಿಕ ನಷ್ಟವಾಗಿದೆ. ಇದರಿಂದ ಪುರಸಭೆಗೆ ಬೀದಿ ದೀಪ ನಿರ್ವಹಣೆ, ಒಳಚರಂಡಿ ನಿರ್ವಹಣೆ, ಸಿಬ್ಬಂಧಿಗಳ ವೇತನ ನೀಡುವುದು ಕಷ್ಟವಾಗುತ್ತದೆ. ಮುಖ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳ ನಿರ್ಲಕ್ಷತನದಿಂದ ಪುರಸಭೆಯ ಆದಾಯಕ್ಕೆ ನಷ್ಟವಾಗಿದೆ. ಪುರಸಭೆ ಡಿಎಲ್ಬಿ ರೋಡ್ದಲ್ಲಿರುವ ಪುರಸಭೆ ವಾಣಿಜ್ಯ ಮಳಿಗೆಗಳ ದುರಸ್ತಿ ಕೈಕೊಳ್ಳಲು ಪುರಸಭೆಗೆ ಹಸ್ತಾಂತರಿಸಿಕೊಂಡು 4 ವರ್ಷವಾದರೂ ಸಹಿತ ಮರಳಿ ಬಾಡಿಗೆದಾರರಿಗೆ ನೀಡಿಲ್ಲ. ಇದರಿಂದ ಸಹ ಸರಕಾರದ ಬೊಕ್ಕಸಕ್ಕೆ ಉಂಟಾದ ನಷ್ಟ ಉಂಟಾಗಿದೆ. ಸಾರ್ವಜನಿಕರು ಪುರಸಭೆಗೆ ಯಾವುದೇ ಕಾರ್ಯಕ್ಕೆ ಅರ್ಜಿ  ನೀಡಿದರೆ ನಾಲ್ಕೈದು ತಿಂಗಳು ವಿನಾಕಾರಣ ಅಲೆದಾಡಿಸುತ್ತಿದ್ದಾರೆ. ಬಾಡಿಗೆ, ಕರವಸೂಲಾತಿ ಮಾಡದೇ ಪುರಸಭೆಗೆ ನಷ್ಟವನ್ನುಂಟು ಮಾಡಿರುವ ಕುರಿತು ಚಚರ್ಿಸುವಂತೆ 15 ಜನ ಸದಸ್ಯರು ಪುರಸಭೆ ಅಧ್ಯಕ್ಷ ಹಾಗೂ ಮುಖ್ಯಾಧಿಕಾರಿಗೆ 15 ದಿನಗಳ ಹಿಂದೆಯೇ ಅರ್ಜಿ ಸಲ್ಲಿಸಿದ್ದರೂ ಯಾವುದೇ ಕ್ರಮ ಜರುಗಿಸದ್ದರಿಂದ ಅಧ್ಯಕ್ಷರೇ ಇದಕ್ಕೆ ಹೊಣೆಗಾರರಾಗುತ್ತಾರೆ. ಪುರಸಭೆಯ ಕಾಯ್ದೆಯಂತೆ ಪ್ರತಿ ತಿಂಗಳೂ ಸಾಮಾನ್ಯ ಸಭೆ ನಡೆಯಬೇಕು. ಆದರೆ ಎರಡು ವರ್ಷ ಎರಡು ತಿಂಗಳ ಅವಧಿಯಲ್ಲಿ ಕೇವಲ ಆರು ಸಾಮಾನ್ಯ ಸಭೆ ಎರಡು ವಿಶೇಷ ಸಭೆಯನ್ನು ಕರೆಯಲಾಗಿದೆ. ಅಧ್ಯಕ್ಷರು ಸಭೆ ಕರೆದಿದ್ದರೆ ಈ ಬಗ್ಗೆ ವಿವರವಾಗಿ ಚಚರ್ಿಸಬಹುದಿತ್ತು ಸಭೆ ನಡೆಸಲು ಅವರು ಹಿಂಜರಿಯುತ್ತಿದ್ದಾರೆ. ಆದ್ದರಿಂದ ಕರ ವಸೂಲಾತಿ ಮಾಡದ ಅಧಿಕಾರಿಗಳ ವಿರುದ್ದ ಕ್ರಮ ಜರುಗಿಸಬೇಕು. 7 ದಿನಗಳಲ್ಲಿ ತುರ್ತ  ಕ್ರಮ ಜರುಗಿಸದೇ ಇದ್ದರೆ ಸದಸ್ಯರು ಸೇರಿಕೊಂಡು ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪುರಸಭೆ ಸದಸ್ಯರುಗಳಾದ ಪರಶುರಾಮ ತಂಗಡಗಿ, ಅಕ್ಕಮಾಹಾದೇವಿ ಕಟ್ಟಿಮನಿ, ಮಲ್ಲಿಕಾರ್ಜುನ ಪಟ್ಟಣಶೇಟ್ಟಿ, ಹುಸೇನ ಜಮಾದಾರ, ಕಾಶಿನಾಥ ಕುಂಬಾರ, ಖಾಜಾಹುಸೇನ ಖಾಜಾಬಸರಿ ಸೇರಿದಂತೆ ಇತರರು ಇದ್ದರು.


ಸುದ್ದಿ ಓದಿ