ಹೊಸಪೇಟೆ

ಸರ್ಕಾರದ ಭೂಮಿಯನ್ನು ಗುತ್ತಿಗೆ ಆಧಾರದಲ್ಲಿ ನೀಡಬಾರದೆಂದು ಮನವಿ

ಸರ್ಕಾರದ ಭೂಮಿಯನ್ನು ಗುತ್ತಿಗೆ ಆಧಾರದಲ್ಲಿ ನೀಡಬಾರದೆಂದು ಮನವಿ


 ಸರ್ಕಾರದ ಭೂಮಿಯನ್ನು ಗುತ್ತಿಗೆ ಆಧಾರದಲ್ಲಿ ನೀಡಬಾರದೆಂದು ಮನವಿ 

ಹೊಸಪೇಟೆ 28: ಕೈಗಾರಿಕೆ ಉದ್ದೇಶಕ್ಕೆ ಪಡೆಯುತ್ತಿರುವ ಫಲವತ್ತತೆ ಭೂಮಿಯನ್ನು ಕೈಗಾರಿಕೆಗೆ ಬಳಸದೆ ಬೇರೆ ಬೇರೆ ಇನ್ನಿತರ ವಾಣಿಜ್ಯ ಚಟುವಟಿಕೆಗಳಿಗೆ ಬಳಸುತ್ತಿರುವುದನ್ನು ನೋಡಿರುತ್ತೇವೆ. ಆದರೆ ಅದೇ ರೀತಿ ಮುಂದುವರೆದು ಹೊಸಪೇಟೆ ಕಾರಿಗನೂರು ಭಾಗದ ಆರ್‌.ಬಿ.ಎಸ್‌.ಎನ್‌. ಗಣಿಗುತ್ತಿಗೆದಾರರ ಸಂಸ್ಥೆಯು ಕೋಟ್ಯಾಂತರ ರೂಪಾಯಿ ಲಾಭದಲ್ಲಿದ್ದು ಇದು ತನ್ನ ಉಪಯೋಗಕ್ಕೆ ಸರ್ಕಾರದ ಧರದಲ್ಲಿ ಗುತ್ತಿಗೆಯನ್ನು ಪಡೆಯದೆ ಖರೀದಿ ಹಣವನ್ನು ನೀಡಿ ಪಡೆಯಬಹುದಾಗಿದೆ.  

ಇದನ್ನು ವಸತಿ ರಹಿತ ಸಾರ್ವಜನಿಕರಿಗೆ ನೀಡಿದಲ್ಲಿ 25 ರಿಂದ 70 ಎಕರೆ ಭೂಮಿಯನ್ನು ಪಡೆದಿರುತ್ತಾರೆ. ಈ 70 ಎಕರೆ ಭೂಮಿಯಲ್ಲಿ ಇಡಿ ವಿಜಯನಗರ ಕ್ಷೇತ್ರದ ಎಲ್ಲಾ ವಸತಿ ರಹಿತರಿಗೆ ಶಾಶ್ವತವಾಗಿ ನಿವೇಶನ ನೀಡಬಹುದಾಗಿದೆ. ರೈತ ಸಂಘದ ಈ ವಿರೋಧದ ನಡೆವೆಯೂ ಕೂಡ ತಹಶೀಲ್ದಾರ್ ಆಗಲಿ ಸರ್ಕಾರವಾಗಲಿ ಈ ಭೂಮಿಯನ್ನು ನೀಡಿದಲ್ಲಿ ಕಂದಾಯ ಇಲಾಖೆ ಕಾರಣವಾಗುತ್ತದೆಂದು ಈ ಮೂಲಕ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆವತಿಯಿಂದ ಮನವಿ ಪತ್ರವನ್ನು ಸಲ್ಲಿಸಲ್ಲಾಗಿದೆ.  


ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷರಾದ ಸಣ್ಣಕ್ಕಿ ರುದ್ರ​‍್ಪರವರು ಹೊಸಪೇಟೆ ತಹಶೀಲ್ದಾರರಿಗೆ ವಿಷಯವನ್ನು ತಿಳಿಸಿ ಎಲ್ಲಾ ರೈತರ ಪರವಾಗಿ ಮನವಿ ಪತ್ರವನ್ನು ಸಲ್ಲಿಸಿದರು ಹಾಗೂ ಜಿಲ್ಲಾಧ್ಯಕ್ಷ ಟಿ.ನಾಗರಾಜ್, ಜಿಲ್ಲಾ ಕಾಯಾಧ್ಯಕ್ಷರು ಎಂ.ಜಡಿಯಪ್ಪ, ಜಿಲ್ಲಾ ಉಪಾಧ್ಯಕ್ಷ ಆರ್‌.ತಾಯಪ್ಪ, ತಾಲೂಕು ಉಪಾಧ್ಯಕ್ಷ ವಿ.ಗಾಳೇಪ್ಪ, ತಾಲೂಕು ಸಂಘಟಕ ಕಾರ್ಯದರ್ಶಿ ಅಯ್ಯಪ್ಪ, ಅಂಕ್ಲೇಷ್, ಮುರಳಿ, ಬಸವರಾಜ, ಸತೀಶ ಹಾಗೂ ರೈತ ಮಿತ್ರರು ಈ ಸಂದರ್ಭದಲ್ಲಿ ಭಾಗಿಯಾಗಿದ್ದರು. 


ಸುದ್ದಿ ಓದಿ