ಏಕೀಕರಣಕ್ಕೆ ಶ್ರಮಿಸಿದ ಎಲ್ಲಾ ಮಹನೀಯರ ಸ್ಮರಣೆ ಅಗತ್ಯ: ಸಚಿವ ಬಿ.ಶ್ರೀರಾಮುಲು
ಬಳ್ಳಾರಿ01:ಕರ್ನಾಟಕ ಏಕೀಕರಣದ ಸಮಯದಲ್ಲಿ ಹೋರಾಡಿದ ಎಲ್ಲಾ ನಾಯಕರನ್ನು ಸ್ಮರಿಸುವುದು ನಮ್ಮೆಲ್ಲರ ಕತ್ರ್ಯವ್ಯವಾಗಿದೆ ಎಂದು ಸಾರಿಗೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಹೇಳಿದರು.
ಅವರು ಮಂಗಳವಾರ ಜಿಲ್ಲಾಡಳಿತದಿಂದ ಡಾ.ರಾಜ್ಕುಮಾರ್ ರಸ್ತೆಯ ಸಕರ್ಾರಿ (ಮಾಜಿ ಪುರಸಭೆ) ಪದವಿ ಪೂರ್ವ ಕಾಲೇಜು ಮೈದಾನದ ಆವರಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ 67ನೇ :ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿದರು.
ರಾಜ್ಯದ ಎಲ್ಲಾ ಕಡೆ ನಡೆದ ಲಕ್ಷಾಂತರ ಕನ್ನಡಿಗರ ಹೋರಾಟದ ಕಿಚ್ಚು, ಸ್ವಾಭಿಮಾನ, ಅಭಿಮಾನಗಳ ಫಲವೇ ಈ ಏಕೀರಣದ ದಿನವನ್ನು ಕನ್ನಡ ರಾಜ್ಯೋತ್ಸವ ದಿನವನ್ನಾಗಿ ಆಚರಿಸಲಾಗುತ್ತದೆ ಎಂದು ತಿಳಿಸಿದರು.
1956 ರ ನವೆಂಬರ್ 1 ರಂದು ಮೈಸೂರು ರಾಜ್ಯ ಉದಯವಾದಾಗ ಹಂಪಿಯ ತಾಯಿ ಭುವನೇಶ್ವರಿ ಸನ್ನಿಧಿಯಲ್ಲಿ ಮೊದಲ ರಾಜ್ಯೋತ್ಸವ ನಡೆದ ನೆಲವಾಗಿದ್ದು, 1973 ನವೆಂಬರ್ 1 ರಂದು ಮೈಸೂರು :ಕರ್ನಾಟಕವಾದಾಗ ಅಂದಿನ ಮಹಾರಾಜರು ಜಯಚಾಮರಾಜೇಂದ್ರ ಒಡೆಯರ್ ಅವರು ಮೊದಲ ಬಾರಿಗೆ :ಕರ್ನಾಟಕ ನಕ್ಷೆಗೆ ಪೂಜೆ ಮಾಡಿ :ಕರ್ನಾಟಕ ಜ್ಯೋತಿ' ಬೆಳಗಿಸಿ, ':ಕರ್ನಾಟಕ'ವೆಂಬ ನಾಮಕರಣವನ್ನು ಸಾಂಕೇತಿಕವಾಗಿ ಆಚರಿಸಿದ್ದು ಹಂಪಿಯಲ್ಲೇಯೇ ಎಂದು ತಿಳಿಸಿದರು.
ಹೋರಾಟಗಾರರ ಸ್ಮರಣೆ: ಹೋರಾಟ ಎಂದರೆ ಆರ್.ಎಚ್.ದೇಶಪಾಂಡೆ ಹೋರಾಟದಂತಿರಬೇಕು, ಕಿಚ್ಚೆಂದರೆ ಆಲೂರು ವೆಂಕಟರಾಯರ ಕಿಚ್ಚಂತಿರಬೇಕು. ಪ್ರೀತಿ-ಅಭಿಮಾನ ಎಂದರೆ ವೀರ ರಂಜಾನ್ಸಾಬ್ ಅವರ ತರ :ಕರ್ನಾಟಕದ ಮೇಲೆ ಪ್ರೀತಿ-ಅಭಿಮಾನದಂತಿರಬೇಕು ಎಂದು ಹೇಳಿದರು.
ಕನ್ನಡ ಕ್ರಾಂತಿಯ ಮೊದಲ ಹೆಜ್ಜೆ ಇಟ್ಟವರು ದೇಶಪಾಂಡೆ, ಏಕೀಕರಣದ ಮೊದಲ ಸಸಿ ನೆಟ್ಟವರು ಸಹ ಇವರೇ ಎಂದು ತಿಳಿಸಿದ ಜಿಲ್ಲಾ ಉಸ್ತುವಾರಿ ಸಚಿವರು, 22 ವರ್ಷ ಸೇವಾವಧಿಯಲ್ಲಿ 20 ಬಾರಿ ವರ್ಗಾವಣೆ ಆಗುತ್ತದೆ. ಆದರೆ ಕನ್ನಡ ಸೇವೆ ಮಾತ್ರ ನಿಲ್ಲಲಿಲ್ಲ, 1890 ರಲ್ಲಿ ಅವರು ಸ್ಥಾಪಿಸಿದ ":ಕರ್ನಾಟಕ ವಿದ್ಯಾವರ್ಧಕ ಸಂಘ", 1917ರಲ್ಲಿ "ಕನ್ನಡ ಊರು, ತಾಲೂಕು, ಜಿಲ್ಲೆಗಳನ್ನು ಒಟ್ಟುಗೂಡಿಸಿ, ಅದಕ್ಕೆ ಕನರ್ಾಟಕ ಪ್ರಾಂತವೆಂದು ಹೆಸರಿಡಬೇಕು" ಎಂಬ ನಿರ್ಣಯ ಅಂಗೀಕರಿಸಲಾಗಿತ್ತು ಎಂದು ಅವರು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು, :ಕರ್ನಾಟಕರಾಜಕೀಯ ಪರಿಷತ್ತು, ಕನ್ನಡ ಏಕೀಕರಣ ಪರಿಷತ್ತು ಸೇರಿದಂತೆ ಹಲವು ಸಂಘ-ಸಂಸ್ಥೆಗಳ ಸ್ಥಾಪನೆಗೆ ಸ್ಫೂರ್ತಿಯಾಗಿ ನಂತರ ಹೆಮ್ಮರವಾಗಿ ಬೆಳೆದು ಅಂತಿಮವಾಗಿ ವಿಶಾಲ :ಕರ್ನಾಟಕ ಸ್ಥಾಪನೆಗೆ ಕಾರಣವಾಯಿತು. ಅವರ ಸಿರಿಗನ್ನಡಂ ಗೆಲ್ಗೆ ಎನ್ನುವ ಕರೆ ಇಂದಿಗೂ, ಎಂದೆಂದಿಗೂ ಕನ್ನಡ ಮತ್ತು ಕನ್ನಡಿಗರ ಶಕ್ತಿಯಾಗಿದೆ ಎಂದು ಅವರು ತಿಳಿಸಿದರು.
*ರಂಜಾನ್ ಸಾಬ್: ಕರುನಾಡ ಏಕೀಕರಣಕ್ಕೆ ಬಲಿದಾನಗೈದ ಮಹಾವೀರ, ಪಿಂಜಾರ್ ಪೈಲ್ವಾನ್ಸಾಬ್ ಅವರು, ಅಂದಿಗೆ ರಾಜ್ಯಾದ್ಯಂತ ನಡೆಯುತ್ತಿದ್ದ ಕನರ್ಾಟಕ ಏಕೀಕರಣಕ್ಕೆ ಮೊದಲ ಜಯ ಸಿಕ್ಕಿದ್ದು ಬಳ್ಳಾರಿಯಲ್ಲೇ. ಕನ್ನಡಿಗರ ಸತತ ಹೋರಾಟದ ಫಲವಾಗಿ ಬಳ್ಳಾರಿಯನ್ನ 1953 ರ ಅಕ್ಟೋಬರ್ 1 ರಂದು, ಅಂದಿನ ಮೈಸೂರು ರಾಜ್ಯದಲ್ಲಿ ವಿಲೀನಗೊಳಿಸುವ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಇದರೊಂದಿಗೆ ಏಕೀಕರಣದ ಪ್ರಕ್ರಿಯೆ ಬಳ್ಳಾರಿಯಿಂದಲೇ ಆರಂಭ ಆಗಿತ್ತು ಎಂದು ತಿಳಿಸಿದರು.
ಯುವಕರು "ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು" ಸಾಲುಗಳನ್ನು ಕೊಟ್ಟ ರಾಮರಾಯರು, ಡೆಪ್ಯುಟಿ ಚೆನ್ನಬಸಪ್ಪ ಅವರಿಂದ ಹಿಡಿದು ಕಾನರ್ಾಡ್ ಸದಾಶಿವರಾವ್ರವರೆಗೆ. ಕುವೆಂಪುರಿಂದ ಬೇಂದ್ರೆ, ಕಾರಂತರವರೆಗೆ. ಟೆಕೂರು ಕೃಷ್ಣಮೂರ್ತಿ , ಜಂತಕಲ್ ಗಾದಿಲಿಂಗಪ್ಪ, ಅಳವಂಡಿ ಶಿವಮೂತರ್ಿ ಸ್ವಾಮಿಗಳು, ಟೆಕೂರು ಸುಬ್ರಹ್ಮಣ್ಯ ಹೀಗೆ ಏಕೀಕರಣಕ್ಕೆ ಹೋರಾಡಿದ ಪ್ರತಿಯೊಬ್ಬರನ್ನು ನಾವು ಸ್ಮರಿಸಿಕೊಳ್ಳಬೇಕು ಎಂದು ಹೇಳಿದರು.
ಕನ್ನಡ ಎಂದರೆ ಪ್ರೀತಿ, ಕನ್ನಡ ಎಂದರೆ ಕೀರ್ತಿ , ಕನ್ನಡ ಎಂದರೆ ಶಕ್ತಿ, ಕನ್ನಡ ಎಂದರೆ ಗೌರವ, ಕನ್ನಡ ಎಂದರೆ ಹೆಮ್ಮೆ, ಕನ್ನಡ ಎಂದರೆ ಹಿರಿಮೆ, ಕನ್ನಡ ಎಂದರೆ ಉಸಿರು, ಇದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.
ಸಚಿವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಲಾ ತಂಡಗಳೊಂದಿಗೆ ವಿವಿಧ ಇಲಾಖೆಯ ಸ್ತಬ್ಧ ಚಿತ್ರಗಳ ಮೆರವಣಿಗೆಗೆ ಚಾಲನೆ ನೀಡಿದರು.
ಡಾ.ರಾಜ್ಕುಮಾರ್ ರಸ್ತೆಯ ನಾರಾಯಣ್ರಾವ್(ಕಾಗೆ ಪಾರ್ಕಿ) ಪಾಕರ್್ನಲ್ಲಿರುವ ಭುವನೇಶ್ವರಿ ತಾಯಿಯ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ ಯಲ್ಲಿ ವಿಜೇತರಾದ ವಿದ್ಯಾರ್ಥಿ ಗಳಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು.
ಸಂಸದರಾದ ವೈ.ದೇವೇಂದ್ರಪ್ಪ, ಜಿ.ಸೋಮಶೇಖರರೆಡ್ಡಿ, ಮಹಾನಗರ ಪಾಲಿಕೆಯ ಮಹಾಪೌರರಾದ ಎಂ.ರಾಜೇಶ್ವರಿ, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಾರುತಿ ಪ್ರಸಾದ್, ಜಿಲ್ಲಾಧಿಕಾರಿ ಪವನ್ಕುಮಾರ್ ಮಾಲಪಾಟಿ, ಜಿಪಂ ಸಿಇಒ ಲಿಂಗಮೂರ್ತಿ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ಕುಮಾರ್ ಬಂಡಾರು, ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ್, ಎಡಿಸಿ ಮಂಜುನಾಥ, ಸಹಾಯಕ ಆಯುಕ್ತರಾದ ಡಾ.ನಯನ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಟರಾಜ್ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಶಾಲಾ ಮಕ್ಕಳು, ವಿವಿಧ ಕನ್ನಡ ಪರ ಸಂಘಟನೆಗಳು ಹಾಗೂ ಇನ್ನಿತರರು ಇದ್ದರು.