ಕಂಪ್ಲಿ

ಜಾತ್ರಾ ಮಹೋತ್ಸವ ಪ್ರಯುಕ್ತದ ಶ್ರದ್ಧಾಭಕ್ತಿಯ ಧಾರ್ಮಿಕ ಕಾರ್ಯಕ್ರಮಗಳು

ಜಾತ್ರಾ ಮಹೋತ್ಸವ ಪ್ರಯುಕ್ತದ ಶ್ರದ್ಧಾಭಕ್ತಿಯ ಧಾರ್ಮಿಕ ಕಾರ್ಯಕ್ರಮಗಳು

ಲೋಕದರ್ಶನ ವರದಿ 

ಕಂಪ್ಲಿ  21: ತಾಲೂಕಿನ ದೇವಲಾಪುರ ಗ್ರಾಮದಲ್ಲಿರುವ ಆರಾಧ್ಯ ದೇವತೆ ಶ್ರೀ ಗೌಸಂದ್ರ ಮಾರೆಮ್ಮ ದೇವಸ್ಥಾನದಲ್ಲಿ ದೇವಿಯ ಜಾತ್ರಾ ಮಹೋತ್ಸವ ಪ್ರಯುಕ್ತ ಸೋಮವಾರ ಗಂಗೆಪೂಜೆ, ಪಲ್ಲಕ್ಕಿ ಉತ್ಸವ, ದೇವಿಯ ಭವ್ಯ ಮೆರವಣಿಗೆ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ನೆರವೇರಿದವು.

ಜಾತ್ರ ಮಹೋತ್ಸವ ನಿಮಿತ್ಯ ಇಲ್ಲಿನ ದೇವಿ ಸನ್ನಿದಾನದಲ್ಲಿ ಬೆಳಿಗ್ಗೆ ದೇವಿಯ ಹೂವಿನ ಅಲಂಕಾರ, ನೈವೇದ್ಯ ಅರೆ​‍್ಣ, ಕಾಯಿ, ಕರ​‍್ೂರ ಅರ​‍್ಿಸಿ. ದೇವಿಯ ಜಾತ್ರಾ ಮಹೋತ್ಸವವನ್ನು ಅತ್ಯಂತ ಸಡಗರ ಸಂಭ್ರಮದ ಜೊತೆಗೆ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಪೂಜಾರಿ ಹನುಮಯ್ಯ ಅವರ ಪುರೋಹಿತ್ಯದಲ್ಲಿ ನಾನಾ ಧಾರ್ಮಿಕ ಕಾರ್ಯಕ್ರಮಗಳು ಶಾಸ್ರೋಕ್ತವಾಗಿ ಜರುಗಿದವು ನಂತರ ಭಕ್ತರಿಗೆ ಅನ್ನ ಸಂತಾರ​‍್ಕ ವ್ಯವಸ್ಥೆ ಕಲ್ಪಿಸಲಾಗಿತ್ತು.

ಈ ಸಂದರ್ಭದಲ್ಲಿ ಮುಖಂಡರಾದ ಸಿ.ಡಿ.ಕುಮಾರಸ್ವಾಮಿ, ಚನ್ನದಾಸರ ನಿಂಗಪ್ಪ, ರಂಗಪ್ಪ, ಬಡಗಿ ಮಾರೆಣ್ಣ, ಸಿ.ಡಿ.ಗೋವಿಂದ ಸಿ.ಡಿ.ಯಲ್ಲಪ್ಪ, ಲೇಪಾಕ್ಷಿ, ಸಿ.ಡಿ.ಗೀರೀಶ್, ಸಿ.ಡಿ.ಲೋಕೇಶ, ಸಿ.ಡಿ.ದೇವಣ್ಣ, ಸಣ್ಣ ಈಶಣ್ಣ ಸೇರಿದಂತೆ ಸ್ಥಳೀಯ ಹಿರಿಯ ಮುಖಂಡರು, ಮಹಿಳೆಯರು, ಯುವಕರು, ಮಕ್ಕಳು ಸಕಲ ಸದ್ಭಕ್ತರು ಪಾಲ್ಗೊಂಡಿದ್ದರು. 


ಸುದ್ದಿ ಓದಿ