ತಾಳಿಕೋಟಿ

ನಾಟಕ ಸಮಾಜದ ಪ್ರತಿಬಿಂಬ:ರಾಮಲಿಂಗಯ್ಯ ಶ್ರೀ

ನಾಟಕ ಸಮಾಜದ ಪ್ರತಿಬಿಂಬ:ರಾಮಲಿಂಗಯ್ಯ ಶ್ರೀ

ತಾಳಿಕೋಟಿ: ನಾಟಕಗಳು ನಮ್ಮ ಬದುಕಿನ ವಾಸ್ತವಿಕತೆಯನ್ನು ಪ್ರಭಾವಪೂರ್ಣವಾಗಿ ಪ್ರತಿಬಿಂಬುಸುವ ಅತ್ಯುತ್ತಮ ಸಾಧನವಾಗಿವೆ ಇದರಿಂದ ಸಾಮಾಜಿಕ ಬದಲಾವಣೆ ತರಲು ಸಾಧ್ಯವಾಗುತ್ತದೆ ಎಂದು ರಾಷ್ಟ್ರೀಯ ಬೇಡ ಜಂಗಮ ಸಮಾಜದ ಗೌರವ ಅಧ್ಯಕ್ಷರು. ಚಬನೂರು ಹಿರೇಮಠದ ಪರಮಪೂಜ್ಯ ಶ್ರೀರಾಮಲಿಂಗಯ್ಯ ಮಹಾಸ್ವಾಮಿಗಳು ಹೇಳಿದರು.  ತಾಲೂಕಿನ ಜಲಪೂರ ಗ್ರಾಮದಲ್ಲಿ ಇತ್ತೀಚಿಗೆ ಸಿದ್ದನಗೌಡ ಅಭಿಮಾನಿ ಬಳಗದ ವತಿಯಿಂದ ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿ ಹಬ್ಬದ ಅಂಗವಾಗಿ ಹಮ್ಮಿಕೊಂಡ  ರೇಣುಕಾ ಎಲ್ಲಮ್ಮ ನಾಟಕ ಉದ್ಘಾಟನೆ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಅವರು ಆಶೀರ್ವಚನ ನೀಡಿದರು. ಸಿದ್ದನಗೌಡ ಅಭಿಮಾನಿ ಬಳಗದವರು ದೀಪಾವಳಿ ಹಬ್ಬವನ್ನು ಬಹಳ ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಿರುವುದು ಶ್ಲಾಘನೀಯ ವಿಷಯವಾಗಿದೆ ಶ್ರೀ ರೇಣುಕಾ ಎಲ್ಲಮ್ಮನ ಜೀವನ ಚರಿತ್ರೆಯನ್ನು ನಾವೆಲ್ಲರೂ ತಿಳಿದುಕೊಳ್ಳಬೇಕಾಗಿದೆ ಶರಣ- ಶರಣೇಯರ ಬದುಕಿನ ದರ್ಶನದಿಂದಲೇ ನಮ್ಮ ಜೀವನ ಪಾವನವಾಗುತ್ತದೆ. ಉನ್ನತ ಆಧ್ಯಾತ್ಮಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಿ ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ನಾಟಕವೆಂಬ ರಂಗಭೂಮಿಯ ನೈಜಕಲೆ ನಶಿಸುತ್ತಿದೆ ಇದನ್ನು ರಕ್ಷಿಸಿ ಪ್ರೋತ್ಸಾಹಿಸುವ ಅಗತ್ಯ ಇದೆ ಇಂತಹ ಕಾರ್ಯವನ್ನು ಸಿದ್ದನಗೌಡ ಅಭಿಮಾನಿ ಬಳಗದ ತಂಡ ಮಾಡುತ್ತಿರುವುದು ಸಂತೋಷದ ವಿಷಯವಾಗಿದೆ ಎಂದರು.  ಈ ಸಮಯದಲ್ಲಿ ತಾಳಿಕೋಟಿ ಘನಮಟೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಸಜ್ಜನ ಸರ್. ಗ್ರಾಮದ ಗಣ್ಯರು. ಜನಪ್ರತಿನಿಧಿಗಳು. ಸಿದ್ದನಗೌಡ ಅಭಿಮಾನಿ ಬಳಗದ ಪದಾಧಿಕಾರಿಗಳು ಮತ್ತಿತರರು ಇದ್ದರು 

ಸುದ್ದಿ ಓದಿ