ಬೈಲಹೊಂಗಲ

ಪಂಚಮಸಾಲಿಗಳ ಸ್ವಾಭಿಮಾನಕ್ಕೆ ಧಕ್ಕೆ ತಂದರೆ ಕ್ರಾಂತಿಗೂ ಸಿದ್ಧ

ಪಂಚಮಸಾಲಿಗಳ ಸ್ವಾಭಿಮಾನಕ್ಕೆ ಧಕ್ಕೆ ತಂದರೆ ಕ್ರಾಂತಿಗೂ ಸಿದ್ಧ

ಪಂಚಮಸಾಲಿ ಅಧ್ಯಕ್ಷ ಶ್ರೀಶೈಲ ಬೋಳಣ್ಣವರ ಗುಡುಗು: ಪುಟ್ಟಸಿದ್ದ ಶೆಟ್ಟಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಮನವಿ

ಬೈಲಹೊಂಗಲ 18: ಪಂಚಮಸಾಲಿಗಳು ಶಾಂತಿ ಪ್ರೀಯರು ಎಲ್ಲರ ಜೋತೆ ಸ್ನೇಹಮಯ ಮತ್ತು ಸಹಕಾರದಿಂದ ಹೋಗುವ ಅನ್ನದಾತರ ಸಮಾಜ ಆದರೆ ಪಂಚಮಸಾಲಿಗಳ ಸ್ವಾಭಿಮಾನಕ್ಕೆ ಧಕ್ಕೆ ತಂದರೆ ಕ್ರಾಂತಿಗೂ ನಾವು ಸಿದ್ದ ಎಂದು ತಾಲೂಕಾ ಪಂಚಮಸಾಲಿ ಅಧ್ಯಕ್ಷ ಶ್ರೀಶೈಲ ಬೋಳಣ್ಣವರ ಗುಡುಗಿದರು.

   ಈಚೆಗೆ ಪಂಚಮಸಾಲಿ ಸಮಾಜದ ಬಗ್ಗೆ ಕೀಳುರೀತಿಯಾಗಿ ಮಾತನಾಡಿದ ಪುಟ್ಟಸಿದ್ದ ಶೆಟ್ಟಿಯ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ  ಉಪವಿಭಾಗಾಧಿಕಾರಿಗಳ ಮೂಲಕ  ರಾಜ್ಯದ ಮುಖ್ಯಮಂತ್ರಿಗಳಿಗೆ  ಮನವಿ ಅರ್ಪಿಸಿ ಮಾತನಾಡಿ, ವೀರ ಪಂಚಮಸಾಲಿಗಳ ಸ್ವಾಭಿಮಾನಕ್ಕೆ ಧಕ್ಕೆ ತಂದರೆ ಅಂತವರ ವಿರುದ್ಧ ಸಮಾಜ ಗಟ್ಟಿತನ ಪ್ರದರ್ಶನ ಮಾಡಲಿದೆ ಎಂದರು.

      ಸಮಾಜದ ಮುಖಂಡರಾದ ಎಫ್.ಎಸ್.ಸಿದ್ದನಗೌಡರ, ಮಹೇಶ್ ಹರಕುಣಿ ಮಾತನಾಡಿ, ಕೃಷಿ ಕಾಯಕ ನಿರತ ಲಿಂಗಾಯತ ಪಂಚಮಸಾಲಿ ಸಮಾಜ ರಾಜ್ಯದಲ್ಲಿ ಅನೇಕ ವರ್ಷಗಳಿಂದ 2ಎ ಮೀಸಲಾತಿಗಾಗಿ ಹೋರಾಟ ನಡೆಸುತ್ತಾ ಬಂದಿದ್ದು ಇದೀಗ ಅಂತಿಮ ಹೋರಾಟದ ಘಟ್ಟಕ್ಕೆ ಬಂದು ತಲುಪಿದೆ.

ಹೋರಾಟದ ನೇತೃತ್ವದಲ್ಲಿರುವ  ಲಿಂಗಾಯತ ಪಂಚಮಸಾಲಿ ಮೀಸಲಾತಿ ಹರಿಕಾರ ಪೂಜ್ಯ ಕೂಡಲಸಂಗಮ ಪಂಚಮಸಾಲಿ ಜಗದ್ಗುರುಗಳು , ಹೋರಾಟ ಮಾಡುತ್ತಿರುವ ಜನಪ್ರತಿನಿಧಿಗಳು ಹಾಗೂ ಹೋರಾಟಗಾರರ ಬಗ್ಗೆ  ಪಾದಯಾತ್ರೆ ಆರಂಭವಾದಗಿನಿಂದ ಅನ್ಯ ಸಮಾಜದ ಪುಟ್ಟಸಿದ್ದ ಶೆಟ್ಟಿಯಂತವರು ಪಂಚಮಸಾಲಿ ಸಮಾಜದ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು, ಸಮಾಜ ಕೇರಳುವಂತ ಹಾಗೂ ಹೋರಾಟದ ಬಗ್ಗೆ  ಕೀಳು ಮಟ್ಟದ ಮಾತುಗಳನ್ನು ಹೇಳುವುದರ ಮೂಲಕ ಪಂಚಮಸಾಲಿ ಸಮಾಜವನ್ನು ಕೆಣಕುವ ಪ್ರಯತ್ನ ಮಾಡುತ್ತಿದ್ದಾರೆ. ಆದ್ರೆ ಇವರು ತಲೆ ಕೆಳಗೆ ಮಾಡಿ ಕಾಲು ಮೇಲು ಮಾಡಿದ್ರು ಸಹ ಪಂಚಮಸಾಲಿ ಸಮಾಜ 2ಂ ಮೀಸಲಾತಿ ಹೋರಾಟವನ್ನು ಸಕರ್ಾರದ ಆದೇಶ ಪತ್ರ ಸಿಗುವವರೆಗೂ ನಮ್ಮ ಹೋರಾಟ ಅಚಲವಾಗಿದೆ ಎಂದರು.

ಹೋರಾಟಗಾರ ಶಂಕರ ಮಾಡಲಗಿ, ವೀರೆಶ್ ಹಲಕಿ ಮಾತನಾಡಿ, ಇಂತಹ ಕುಹಕಿಗಳ ಮಾತನ್ನು ಕೇಳಿಯು ಸಹ ಇದುವರೆಗೂ ಸಮಾಜದವರು ಶಾಂತಿಯಿಂದ ತಾಳ್ಮೆಯಿಂದ ಇದ್ದಾರೆ.

 ಶತಮಾನದಿಂದ ಪಂಚಮಸಾಲಿಗಳಿಗಾದ ಮೀಸಲಾತಿ ಅನ್ಯಾಯವನ್ನು ಪ್ರಜಾಪ್ರಭುತ್ವದಡಿಯಲ್ಲಿ ಸಮಾಜಕ್ಕೆ 2ಎ ನೀಡುವಂತೆ  ನಮ್ಮ ಹೋರಾಟ ನಡೆದಿದೆ. ಯಾವ ಸಮಾಜದ ಬಗ್ಗೆ ನಮಗೆ ಕಿಳರಿಮೆ ಇಲ್ಲ ಯಾವ ಸಮಾಜದ ವಿರುದ್ದವು ನಮ್ಮ ಹೋರಟವಿಲ್ಲ. ಆದರೆ ಪಂಚಮಸಾಲಿಗಳ ವಿಷಯದಲ್ಲಿ ವಿನಾಕಾರಣ ಕೈ ಹಾಕುತ್ತಿರುವ ಸಮಾಜ ಘಾತುಕ ಶಕ್ತಿಗಳನ್ನು ಸಕರ್ಾರ ಮಟ್ಟಾ ಹಾಕಬೇಕು. ಇಲ್ಲದಿದ್ದರೆ ಕೊಮು ಸಂಘರ್ಷಕ್ಕೆ ಇಂತಹ ನಾಲಾಯಕರ ಹೇಳಿಕೆಗಳು ದಾರಿ ಮಡುತ್ತವೆ. ಪುಟ್ಟಸಿದ್ದ ಶೆಟ್ಟಿಯ ವಿರುದ್ದ ಸಕರ್ಾರ ತಕ್ಷಣ ಕ್ರಮ ಕೈಗೊಳ್ಳಬೇಕು. ಸಕರ್ಾರ ಎಚ್ಚೆತ್ತುಕೊಳ್ಳದೆ ಹೊದರೆ ಸಮಾಜದ ಲಕ್ಷಾಂತರ ಜನ ಬೀದಿಗಿಳಿದು ಹೋರಾಟ ಮಾಡಬೇಕಾದಿತು ಎಂದು ಎಚ್ಚರಿಸಿದರು. 

    ಮುರಘೇಶ ಗುಂಡ್ಲೂರ, ಮಹಾಂತೇಶ ಮತ್ತಿಕೊಪ್ಪ, ಸುನೀಲ್ ಪಾಟೀಲ, ರುದ್ರಪ್ಪ ಹೊಸಮನಿ, ಮಹಾಂತೇಶ ಅಕ್ಕಿ, ಶ್ರೀಶೈಲ ಶರಣಪ್ಪನವರ, ಮಹೇಶ ಕೋಟಗಿ, ಉಮೇಶ್ ಬೋಳೆತ್ತೆನ, ಬಸವರಾಜ ನೇಸರಗಿ,  ಜಗದೀಶ ಬೂದಿಹಾಳ,ಗಂಗಪ್ಪ ಗುಗ್ಗರಿ, ವಿಠಲ ಕಡಕೋಳ, ಮಂಜುನಾಥ ಹರಕುಣಿ, ವಿಠಲ ಅಂದಾನಿ, ಸೋಮಶೇಖರ್ ಪಟ್ಟೆದ ಮುಂತಾದವರು ಇದ್ದರು 

ಸುದ್ದಿ ಓದಿ