ರವಿ ಕೃಷ್ಣಾರೆಡ್ಡಿ ಮತಯಾಚನೆ
ರವಿ ಕೃಷ್ಣಾರೆಡ್ಡಿ ಮತಯಾಚನೆ
ಶಿಗ್ಗಾವಿ 29 : ಕೆ.ಆರ್.ಎಸ್. ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಶಿಗ್ಗಾವಿ ವಿಧಾನಸಭಾ ಅಭ್ಯರ್ಥಿ ರವಿ ಕೃಷ್ಣಾರೆಡ್ಡಿಯವರು ಮುತ್ತಳ್ಳಿ ಗ್ರಾಮ ಮತ್ತು ತಡಸ ಗ್ರಾಮದಲ್ಲಿ ಪ್ರಚಾರ ನಡೆಸಿದರು.
ಪ್ರಭಾತ್ ಫೇರಿ ಪ್ರಚಾರದಲ್ಲಿ ದೇಶಭಕ್ತಿ ಗೀತೆಗಳನ್ನು, ನಾಡಪ್ರೇಮಿ ಗೀತೆಗಳನ್ನು ಹಾಡುತ್ತಾ ತಾಳ, ತಮಟೆಯೊಂದಿಗೆ ಮನೆ ಮನೆಗೆ ತೆರಳಿ ಜನರಲ್ಲಿ ಮತ ಯಾಚನೆ ಮಾಡುವಂತಹ ಪ್ರಚಾರ ಕಾರ್ಯಕ್ರಮ. ನಿನ್ನೆ ರಾತ್ರಿ ಮುತ್ತಳ್ಳಿ ಗ್ರಾಮದಲ್ಲಿ ಸೋಮಶೇಖರ್ ಎಂಬ ಗ್ರಾಮಸ್ಥರ ಮನೆಯಲ್ಲಿ ಗ್ರಾಮ ವಾಸ್ತವ್ಯವನ್ನು ರವಿ ಕೃಷ್ಣಾರೆಡ್ಡಿ ಮಾಡಿದರು.