ಜಮಖಂಡಿ

ರಾಷ್ಟ್ರೀಯ ಲೋಕ ಅದಾಲತ್ ಪೂರ್ವಭಾವಿ ಸಭೆ

ರಾಷ್ಟ್ರೀಯ ಲೋಕ ಅದಾಲತ್ ಪೂರ್ವಭಾವಿ ಸಭೆ

ಲೋಕದರ್ಶನ ವರದಿ,

ಜಮಖಂಡಿ15: ರಾಷ್ಟ್ರೀಯ ಲೋಕ ಅದಾಲತ್ ಪೂರ್ವಭಾವಿಗೆ ಸಭೆಗೆ ಪೊಲೀಸ್ ಇಲಾಖೆ ಠಾಣಾಧಿಕಾರಿ ಮತ್ತು ವೃತ್ತ ನಿರೀಕ್ಷಕರು ಆಗಮಿಸದೇ ಕೆಳದಜರ್ೆ ಅಧಿಕಾರಿಗಳನ್ನು ಕಳುಹಿಸಿಕೊಟ್ಟಿದ್ದು ಸರಿಯಲ್ಲ. ಹೀಗೆ ಮಾಡಿದರೇ ಹೇಗೆ, ನಮಗೇನು ಕೆಲಸವಿಲ್ಲಾ, ಈ ರೀತಿ ವರ್ತಿಸಿದರೇ ಕ್ರಮ ತೆಗೆದುಕೊಳ್ಳಲಾಗುವದು ಎಂದು 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಅಜರ್ುನ ಮಲ್ಲೂರ ಎಚ್ಚರಿಕೆ ನೀಡಿದರು. 

ನಗರದ ನ್ಯಾಯಾಲಯದ ಆವರಣದಲ್ಲಿರುವ ಕಾನೂನು ಸೇವಾ ಸಮಿತಿ ಸಭಾಭವನದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್ ನಿಮಿತ್ತ ನ್ಯಾಯಾಂಗ ಇಲಾಖೆ, ಪೊಲೀಸ್ ಇಲಾಖೆ ಮತ್ತು ನ್ಯಾಯವಾದಿಗಳ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜುಲೈ 8ರಂದು ನಡೆಯಲಿರುವ ರಾಷ್ಟೀಯ ಲೋಕ ಅದಾಲತದಲ್ಲಿ ಪೊಲೀಸ್ ಇಲಾಖೆ ಪಾತ್ರ ಕೂಡ ಮುಖ್ಯವಾಗಿದೆ. ಬಾಕಿ ಉಳಿದಿರುವ ಎಲ್ಲ ಪ್ರಕರಣಗಳ ಇರ್ತಥ್ಯಕ್ಕೆ ಹೆಚ್ಚಿನ ಆಸಕ್ತಿ ತೋರಬೇಕು. ಮುಂದಿನ ಸಭೆಗೆ ತಮ್ಮ ಮೇಲಾಧಿಕಾರಿಗಳು ಆಗಮಿಸುವಂತೆ ನಿದರ್ೇಶನ ನೀಡುವ ಮೂಲಕ ತರಾಟೆಗೆ ತಗೆದುಕೊಂಡರು.

ನ್ಯಾಯವಾದಿಗಳು ಮತ್ತು ಪೊಲೀಸ್ ಇಲಾಖೆಯವರು ರಾಷ್ಟ್ರೀಯ ಲೋಕ ಅದಾಲತದಲ್ಲಿ ರಾಜಿ ಸಂಧಾನ ಮೂಲಕ ಪ್ರಕರಣಗಳ ಇರ್ತಥ್ಯಕ್ಕೆ ಹೆಚ್ಚಿನ ಶ್ರಮ ಅಗತ್ಯವಾಗಿದೆ. ರಾಷ್ಟೀಯ ಲೋಕ ಅದಾಲತ. ಕಾಟಾಚಾರಕ್ಕೆ ಆಗಬಾರದು. ಪ್ರಕರಣಗಳ ಮಾಹಿತಿ ಸಂಗ್ರಹಿಸಿದ್ದು ಪ್ರಕರಣದ ಎರಡು ಪಕ್ಷದವರು ನಿಗದಿತ ದಿನದಂದು ರಾಷ್ಟ್ರೀಯ ಅದಾಲತದಲ್ಲಿ ಭಾಗವಹಿಸಲು ಮನವರಿಕೆ ಮಾಡಬೇಕು ಎಂದರು.

ವೇದಿಕೆಯಲ್ಲಿ ತಾಲೂಕ ಕಾನೂನು ಸೇವಾ ಸಮಿತಿ ಅಧ್ಯಕ್ಷ, ನ್ಯಾಯಾಧೀಶರಾದ ಕವಿತಾ ಉಂಡೋಡಿ, ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧೀಶ ರಾಜಶೇಖರ ಹರಸೂರ, ತಾಲೂಕ ಕಾನೂನು ಸೇವಾ ಸಮಿತಿ ಕಾರ್ಯದಶರ್ಿ, ನ್ಯಾಯಾಧೀಶ ರೆಹಮಾನ ಮುಲ್ಲಾ, ಹೆಚ್ಚುವರಿ ದಿವಾಣಿ ನ್ಯಾಯಾಧೀಶ ಅರಶದ ಅನಸಾರಿ, ವಕೀಲರ ಸಂಘದ ಅಧ್ಯಕ್ಷ ಎಸ್.ಆರ್.ಕಾಡಗಿ, ವಕೀಲರಾದ ಸಂಗಮೇಶ ಕೌಜಲಗಿ, ಎಸ್.ಕೆ.ಹಾಲಳ್ಳಿ, ಎಸ್.ಪಿ.ಪಾರಶೆಟ್ಟಿ, ಎಸ್.ಬಿ. ಕಾಳೆ, ಎಸ್.ಎ..ಅಂಬಿ, ಎಸ್.ಎಂ.ಝೆಂಡೆ, ವಿ.ಎಂ.ವಿಶ್ವಬ್ರಾಹ್ಮಣ ಆರ್.ಆರ್.ಕರೋಶಿ, ಎಸ್.ಎಸ್.ಮಾಳಿ, ಪೊಲೀಸ್ ಇಲಾಖೆ ಎ.ಎಸ್.ಐ.ಗಳಾದ ಸುರೇಶ ನಾಯಿಕ, ಕಟ್ಟಿಮನಿ ಇದ್ದರು. 


ಸುದ್ದಿ ಓದಿ