ರಾಷ್ಟ್ರೀಯ

‘ನಮಸ್ತೆ’ ಮೂಲಕ ಮಾಸ್ಕೋದಲ್ಲಿ ಮನಸ್ಸುಗಳ ಗೆದ್ದ ರಾಜನಾಥ್ ಸಿಂಗ್

‘ನಮಸ್ತೆ’ ಮೂಲಕ  ಮಾಸ್ಕೋದಲ್ಲಿ  ಮನಸ್ಸುಗಳ ಗೆದ್ದ ರಾಜನಾಥ್ ಸಿಂಗ್

ಮಾಸ್ಕೋ,  ಸೆಪ್ಟೆಂಬರ್ 3: ಕೊರೊನಾ  ಸಾಂಕ್ರಾಮಿಕ   ಪರಿಸ್ಥಿತಿಯ   ಈ  ಸಂದರ್ಭದಲ್ಲಿ  ಭಾರತೀಯ  ಸಂಸ್ಕೃತಿಯ ಭಾಗವಾಗಿರುವ  ‘ನಮಸ್ತೆ’  ಎಂಬ ಪದ   ಜಗತ್ತಿನಾದ್ಯಂತ   ಹೆಚ್ಚು ಜನಪ್ರಿಯಗೊಂಡಿದೆ.  

ಕೊರೊನಾ ವೈರಸ್ ನಿಂದ  ಪಾರಾಗಲು   ಮುನ್ನೆಚ್ಚರಿಕೆಯಾಗಿ   ಕೈಕುಲುಕುವ   ಬದಲು   ಎರಡೂ ಕೈಗಳನ್ನು  ಜೋಡಿಸಿ  ನಮಸ್ಕರಿಸುವುದು ಉತ್ತಮ ಎಂದು ಪಾಶ್ಚಿಮಾತ್ಯ ರಾಷ್ಟ್ರಗಳು ಅರಿತುಕೊಂಡಿವೆ. ಭಾರತ  ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರಸ್ತುತ ರಷ್ಯಾ ಪ್ರವಾಸದಲ್ಲಿದ್ದಾರೆ.  ಶಾಂಘೈ ಸಹಕಾರ ಸಂಘಟನೆಯ ಮುಖ್ಯ ಕಾರ್ಯಕ್ರಮದಲ್ಲಿ  ಪಾಲ್ಗೊಳ್ಳಲು ಮಾಸ್ಕೋ ಗೆ  ಆಗಮಿಸಿದ ರಾಜನಾಥ್ ಸಿಂಗ್ ಅವರನ್ನು ಅಲ್ಲಿನ  ಮೇಜರ್ ಜನರಲ್   ಸೆಲ್ಯೂಟ್  ಹೊಡೆದು ಸ್ವಾಗತಿಸಿದರು.  ರಾಜನಾಥ್ ಸಿಂಗ್   ಪ್ರತಿಯಾಗಿ  ನಮಸ್ಕರಿಸಿದರು. ಮತ್ತೊಬ್ಬ ಅಧಿಕಾರಿ  ರಾಜನಾಥ್ ಅವರಿಗೆ   ಹಸ್ತಲಾಘವ ನೀಡಲು  ಪ್ರಯತ್ನಿಸಿದರೂ,  ರಾಜನಾಥ್  ಸಿಂಗ್  ವಿನಮ್ರವಾಗಿ  ಕೈಜೋಡಿಸಿ ನಮಸ್ಕರಿಸಿದ್ದರಿಂದ, ಆ ಅಧಿಕಾರಿಯೂ  ನಮಸ್ಕರಿಸಿದರು. 

ಏತನ್ಮಧ್ಯೆ, ಭಾರತ-ರಷ್ಯಾ ದ್ವಿಪಕ್ಷೀಯ ರಕ್ಷಣಾ ಬಾಂಧವ್ಯಗಳನ್ನು   ಬಲಪಡಿಸಲು  ಈ   ಸಮಾವೇಶ    ಪ್ರಮುಖ ಪಾತ್ರವಹಿಸುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಯೋತ್ಪಾದನೆ ಹಾವಳಿ  ಹತ್ತಿಕ್ಕಲು  ಉಭಯ ದೇಶಗಳ ನಡುವಣ  ಸಹಕಾರ  ಬಲಪಡಿಸಲು  ಈ ಸಮಾವೇಶ   ಉಪಯೋಗವಾಗಲಿದೆ.  ಇದಕ್ಕೂ  ಮೊದಲು ಅಮೆರಿಕಾ ಅಧ್ಯಕ್ಷ  ಡೋನಾಲ್ಡ್  ಟ್ರಂಪ್  ಭಾರತ ಭೇಟಿ  ವೇಳೆ   ಪ್ರಧಾನಿ ನರೇಂದ್ರ ಮೋದಿ  ‘ನಮಸ್ತೆ ಟ್ರಂಪ್ ‘ ಹೆಸರಿನಲ್ಲಿ  ಹಲವಾರು ಕಾರ್ಯಕ್ರಮ  ಆಯೋಜಿಸಿದ್ದರು. ಪ್ರಸ್ತುತ ‘ನಮಸ್ತೆ’  ಪದ  ಸೋಷಿಯಲ್  ಮೀಡಿಯಾದಲ್ಲಿ ವೈರಲ್ ಆಗಿದೆ. ರಷ್ಯಾದಲ್ಲಿ ರಾಜನಾಥ್ ಅವರು ‘ನಮಸ್ತೆ’  ಹೇಳುವ   ಮೂಲಕ ಭಾರತೀಯರ ಮನ  ಸೂರೆಗೊಂಡಿದ್ದಾರೆ.

ಸುದ್ದಿ ಓದಿ