ಕೃಷ್ಣಾ ಹಡಪದ ಅವರಿಗೆ ನಿಗಮದ ಅಧ್ಯಕ್ಷರನ್ನಾಗಿ ಮಾಡಲು ಆರ್ ಶೇಕಣ್ಣ ಒತ್ತಾಯ
ಬಳ್ಳಾರಿ 01 : ಉತ್ತರ ಕರ್ನಾಟಕ ಭಾಗದ ಸವಿತಾ ಸಮಾಜದ ಮುಖಂಡರಿಗೆ ಇಲ್ಲಿವರೆಗೂ ಯಾವುದೇ ರೀತಿಯ ರಾಜಕೀಯ ಪಕ್ಷಗಳು ಸ್ಥಾನಮಾನ ನೀಡದೆ ಕಡೆಗಣಿಸುತ್ತಾ ಬಂದಿವೆ ಎಂದು ಬಳ್ಳಾರಿ ಸವಿತಾ ಸಮಾಜದ ಅಧ್ಯಕ್ಷ ಆರ್ ಶೇಕಣ್ಣ ಬೇಸರ ವ್ಶಕ್ತ ಪಡಿಸಿದರು ಈ ಕುರಿತು ಪತ್ರಿಕಾ ಹೆಳಿಕೆ ನೀಡಿರುವ ಅವರು ಗದಗ ಕೃಷ್ಣಾ ಎಚ್ ಹಡಪದ ಅವರು 24 ವರ್ಷಗಳಿಂದ ಸವಿತಾ ಸಮಾಜದ ವತಿಯಿಂದ ಸಮಾಜ ಸೇವೆ ಹೋರಾಟಗಳು ಹಮ್ಮಿಕೊಳ್ಳುತ್ತಾ ರಾಜ್ಯದ ಎಲ್ಲಾ ಭಾಗಗಳಲ್ಲೂ ಪ್ರವಾಸ ಮಾಡಿ ಸಮಾಜದ ಸಭೆ ಸಮಾರಂಭಗಳಲ್ಲಿ ಭಾಗವಹಿಸಿ ಕುಲ ಬಾಂಧವರ ಕಷ್ಟ ಸುಖಗಳಲ್ಲಿ ಭಾಗವಹಿಸಿರುವ ಉತ್ತರ ಕರ್ನಾಟಕ ಭಾಗದ ಸಮರ್ಥ ಸಂಘಟಿಕರು ಪ್ರಸ್ತುತ ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಶಕ್ಷ ಕೃಷ್ಣಾ ಎಚ್ ಹಡಪದ ಅವರು ಸಚಿವ ಎಚ್ ಕೆ ಪಾಟೀಲಜಿ ಅವರ ಆಪ್ತರಲ್ಲಿ ಒಬ್ಬರಾಗಿದ್ದು ಸರ್ವ ಸಮುದಾಯದವರೊಂದಿಗೆ ಒಡನಾಟ ಹೊಂದಿರುವ ಸಮಾಜದ ಏಕೈಕ ಯುವ ಮುಖಂಡ ಗದಗ ಕೃಷ್ಣಾ ಎಚ್ ಹಡಪದ ಇವರಿಗೆ ಈ ಬಾರಿ ಸವಿತಾ ಸಮಾಜ ಅಭಿವೃದ್ಧಿ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ನೀಡಬೇಕೆಂದು ಬಳ್ಳಾರಿ ಸವಿತಾ ಸಮಾಜದ ಅಧ್ಶಕ್ಷ ಆರ್ ಶೆಕಣ್ಣ ಅವರು ಮತ್ತು ಪದಾಧಿಕಾರಿಗಳು ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್ ಕೆ ಪಾಟೀಲಜಿ ಅವರಿಗೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಸಾಹೇಬರಿಗೆ ಉಪ ಮುಖ್ಶಮಂತ್ರಿಗಳಾದ ಡಿ. ಕೆ ಶಿವಕುಮಾರ ಅವರಿಗೆ ಮತ್ತು ಸಚಿವ ಶಿವರಾಜ ತಂಗಡಗಿ ಅವರಿಗೆ ಮನವಿ ಮಾಡಿ ಒತ್ತಾಯಿಸಿದ್ದಾರೆ.