ಬಳ್ಳಾರಿ

ಬಳ್ಳಾರಿ ಜಿಲ್ಲೆಯಲ್ಲಿ ಪಲ್ಸ್‌ ಪೋಲಿಯೊ ಅಭಿಯಾನ: 97.3 ಸಾಧನೆ

ಬಳ್ಳಾರಿ ಜಿಲ್ಲೆಯಲ್ಲಿ ಪಲ್ಸ್‌ ಪೋಲಿಯೊ ಅಭಿಯಾನ: 97.3 ಸಾಧನೆ

ಬಳ್ಳಾರಿ 29: ಜಿಲ್ಲೆಯಲ್ಲಿ ಜೂನ್ 28ರಂದು ನಡೆದ ರಾಷ್ಟ್ರೀಯ ಪಲ್ಸ್‌ ಪೋಲಿಯೊ ಅಭಿಯಾನದಲ್ಲಿ ಒಟ್ಟು 1,99,934 ಮಕ್ಕಳಿಗೆ ಲಸಿಕೆ ನೀಡುವ ಗುರಿ ಇಡಲಾಗಿತ್ತು. ಇದರಲ್ಲಿ 1,94,579 ಮಕ್ಕಳಿಗೆ ಲಸಿಕೆ ನೀಡಲಾಗಿದ್ದು, 97.3ಅ ಸಾಧನೆ ದಾಖಲಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.  

ತಾಲೂಕುವಾರು ಸಾಧನೆಯಲ್ಲಿ ಕಂಪ್ಲಿ ತಾಲೂಕು 102ಅ ಸಾಧನೆಯೊಂದಿಗೆ ಮುಂಚೂಣಿಯಲ್ಲಿದೆ. ಬಳಿಕ ಕುರಗೋಡು (99), ಸಂಡೂರು (98.8), ಸಿರುಗುಪ್ಪ (97.9) ಹಾಗೂ ಬಳ್ಳಾರಿ (95.9) ತಾಲೂಕುಗಳು ಸಾಧನೆ ದಾಖಲಿಸಿವೆ.  

ಅಭಿಯಾನ ಯಶಸ್ವಿಯಾಗಿ ನಡೆಯಲು 236 ವಿಶೇಷ ತಂಡಗಳು, 977 ಬೂತ್ಗಳು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ, ಸ್ವಯಂಸೇವಕರು ಮತ್ತು ಇತರ ಸಿಬ್ಬಂದಿ ಭಾಗವಹಿಸಿದ್ದರು. ಅಧಿಕಾರಿಗಳು ಅಭಿಯಾನದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. 


ಸುದ್ದಿ ಓದಿ