ಸೌಂದತ್ತಿ

ಕಬ್ಬಿನ ಬೆಳೆಗೆ ಉತ್ತಮ ಪೋಷಕಾಂಶ ಒದಗಿಸಿ ಡೊಣ್ಣೆ ಹುಳದ ನಿಯಂತ್ರಣ ಮಾಡಿ

ಕಬ್ಬಿನ ಬೆಳೆಗೆ ಉತ್ತಮ ಪೋಷಕಾಂಶ ಒದಗಿಸಿ ಡೊಣ್ಣೆ ಹುಳದ ನಿಯಂತ್ರಣ ಮಾಡಿ

ಸವದತ್ತಿ:  ಕಬ್ಬಿನ ಬೆಳೆಗೆ ದೊಣ್ಣೆ ಹುಳದ ಬಾಧೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ರೈತರು ಜಾಗೃತೆವಹಿಸಬೇಕಿದ್ದು, ಸೂಕ್ತ ಮಾಹಿತಿಯನ್ನು ಪಡೆದುಕೊಳ್ಳುವ ಮೂಲಕ ಕಬ್ಬಿನ ಬೆಳೆಗೆ ಉತ್ತಮ ಪೋಷಕಾಂಶವನ್ನು ಒದಗಿಸಿ ಡೊಣ್ಣೆ ಹುಳದ ನಿಯಂತ್ರಣ ಮಾಡಬಹುದಾಗಿದೆ ಎಂದು ಕೋರಮಂಡಲ ಮಾರುಕಟ್ಟೆ ಅಧಿಕಾರಿ ಚಂದ್ರಶೇಖರ ಪತ್ತಾರ ಹೇಳಿದರು.

ತಾಲೂಕಿನ ಯಲ್ಲಮ್ಮನಗುಡ್ಡದ ತಾಂಡಾದಲ್ಲಿ ಕೋರಮಂಡಲ ಕಂಪನಿಯ ವತಿಯಿಂದ ರೈತರಿಗಾಗಿ ಹಮ್ಮಿಕೊಂಡ ತಿಳುವಳಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಡೊಣ್ಣೆಹುಳದ ಬಾಧೆಯಿಂದ ರೈತರು ಸಾಕಷ್ಟು ಹಾನಿಯನ್ನು ಅನುಭವಿಸುತ್ತಿದ್ದು, ಈ ಹುಳದಿಂದ ಬೆಳೆದಂತ ಬೆಳೆಯೆಲ್ಲಾ ಸಂಪೂರ್ಣ ನಾಶವಾಗುತ್ತಿರುವದರಿಂದ ಕಬ್ಬಿನ ಬೆಳೆವಣಿಗೆಯಲ್ಲಿ ಪ್ರತಿಯೊಂದು ಹಂತದಿಂದ ಸಮಯಾನುಸಾರ ಔಷಧೋಪಾಚಾರವನ್ನು ಮಾಡಬೇಕೆಂದರು.

ಮಾರುಕಟ್ಟೆ ಅಧಿಕಾರಿ ಕೆ.ನಿಖಿಲ ಮಾತನಾಡಿ, ಕೃಷಿಯಲ್ಲಿ ಆಗುತ್ತಿರುವ ಬದಲಾವಣೆ ಮತ್ತು ಅದರ ನಿರ್ವಹಣೆ ಕುರಿತು ರೈತರಿಗೆ ಸೂಕ್ತ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಪ್ಯಾರಂಪಾಸ್ ಸಂಭ್ರಮದ ವಿಜೇತ ರೈತ ವಿಠ್ಠಲ ಲಮಾಣಿಯವರಿಗೆ 100 ಗ್ರಾಂ ಬೆಳ್ಳಿಯನ್ನು ನೀಡಿ ಗೌರವಿಸಲಾಯಿತು.

ಟಿಎಪಿಸಿಎಮ್ಎಸ್ ವ್ಯವಸ್ಥಾಪಕ ಪ್ರಕಾಶ ಎನ್.ಯಲಿಗಾರ, ಪರಸನಗೌಡ ಪಾಟೀಲ, ಮಹಬಳೇಶ್ವರ ಬೆಳವಡಿ, ಮಲ್ಲಿಕಾರ್ಜುನ ಉಡಕೇರಿ, ರಮೇಶ ಲಮಾಣಿ, ಶಂಕರ ಲಮಾಣಿ ಉಪಸ್ಥಿತರಿದ್ದರು.


ಸುದ್ದಿ ಓದಿ