ಭೂ ಸಂತ್ರಸ್ಥರ ನ್ಯಾಯಕ್ಕಾಗಿ ಜೂನ್ 9 ರಂದು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ
ಬಳ್ಳಾರಿ:ಜೂ 06: 1995 ಹಾಗೂ 1998ರಲ್ಲಿ ಬಿಎಸ್ಎಲ್ ಸ್ಟೀಲ್ ಕೈಗಾರಿಕೆಗೆಂದು ಜಮೀನು ನೀಡಿ ವಂಚನೆಗೀಡಾದ ಭೂ ಸಂತ್ರಸ್ಥರಿಗೆ ನ್ಯಾಯ ದೊರಕಿಸಿಕೊಡಲು ಇದೇ ಜೂನ್ 9 ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಯು.ಬಸವರಾಜ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಳ್ಳಾರಿ ತಾಲೂಕಿನ ಬೇವಿನಹಳ್ಳಿ, ಕಕ್ಕ ಬೇವಿನಹಳ್ಳಿ, ಅಮರಾಪುರ, ತೆಗ್ಗಿನ ಬೂದಿಹಾಳ್ ಮತ್ತು ಚಾಗನೂರು ಗ್ರಾಮಗಳಿಗೆ ಸೇರಿದ 1,169 ಎಕರೆ ಜಮೀನು ಕೈಗಾರಿಕೆ ಸ್ಥಾಪನೆಗೆಂದು ಪಡೆದುಕೊಳ್ಳಲಾಗಿತ್ತು.
ಈ ಪೈಕಿ 746.35 ಎಕರೆ ಜಮೀನನ್ನು ಕೇವಲ 43 ಸಾವಿರ ರೂ. ಹಾಗೂ 2ನೇ ಹಂತದಲ್ಲಿ 423.33 ಎಕರೆ ಜಮೀನುಗಳನ್ನು ಕೇವಲ 72 ಸಾವಿರ ರೂ.ಗಳಿಗೆ 56 ಸಾವಿರ ರೂ. ಹಾಗೂ 85 ಸಾವಿರ ರೂ ತಲಾ ಎಕರೆಗೆ ನಿಗದಿಗೊಳಿಸಿ ಖರೀದಿಸಿ ರೈತರನ್ನು ವಂಚಿಸಲಾಗಿತ್ತು. 28 ವರ್ಷ ಕಳೆದರೂ ಕೈಗಾ ರಿಕೆ ನಿರ್ಮಾಣ ಮಾಡಲಿಲ್ಲ. ರೈತರಿಗೆ ಉದ್ಯೋಗ ಸಿಗಲಿಲ್ಲ.
ಗ್ರಾಮಗಳ ಅಭಿವೃದ್ಧಿಯೂ ಆಗಲಿಲ್ಲ. ಹೀಗಾಗಿ ಕೆಐಎಡಿಬಿ, ಬಿಎಸ್ಎಎಲ್ ಹಾಗೂ ಶೇಷ ಗೋವಾ ಮತ್ತು ಐಎಫ್ಐ ಸಂಸ್ಥೆಗಳಿಂದ ಹಾಗೂ ರಾಜ್ಯ ಸಕರ್ಾರದ ಶಾಮೀಲಿನಿಂದ ದೌರ್ಜನ್ಯಕ್ಕೊಳಗಾದ ಭೂ ಸಂತ್ರಸ್ಥರಿಗೆ ಜಮೀನುಗಳನ್ನು ವಾಪಸ್ಸು ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಅವರು ಹೇಳಿದರು.
ಯಾವುದೇ ಕಂಪನಿಯು ಜಮೀನುಗಳನ್ನು ಸ್ವಾಧೀನಪಡಿಸಿಕೊಂಡು ಒಪ್ಪಂದದಂತೆ ಕೈಗಾರಿಕೆ ನಿರ್ಮಾಣ ಮಾಡದೇ ಉಲ್ಲಂಘಿಸಿರುವುದರಿಂದ ತಕ್ಷಣವೇ ಸದರಿ ಜಮೀನುಗಳನ್ನು ಮೂಲ ರೈತರಿಗೆ ವಾಪಸ್ಸು ನೀಡಬೇಕು. ಸರ್ಕಾರ ಅಥವಾ ಕೆಐಎಡಿಬಿ ರೈತರ ಜಮೀನುಗಳನ್ನು ತಮ್ಮಲ್ಲೇ ಇಟ್ಟುಕೊಂಡು ಅಲ್ಲಿ ಯಾವುದೇ ಕಂಪನಿ ಕೈಗರಿ ನಿರ್ಮಾಣ ಮಾಡುವ ವರ್ಷದಲ್ಲಿ ಹೊಸ ಭೂ ಬೆಲೆ ನಿಗದಿಗೊಳಿಸಬೇಕು. ಈ 28 ವರ್ಷಗಳಲ್ಲಿ ಅದ ಉದ್ಯೋಗ ಮತ್ತಿತರೆ ನಷ್ಟಕ್ಕೆ ಪರಿಹಾರವಾಗಿ ತಲಾ ಕುಟುಂಬಕ್ಕೆ ಕನಿಷ್ಟ 50 ಲಕ್ಷ ರೂ.ಪರಿಹಾರ ನೀಡಬೇಕು. ಬಿಎಸ್ಎಎಲ್ ಮತ್ತು ಗೋವಾ ಕಂಪನಿಗಳ ಅಥವಾ ಶೇಷಾ ಗೋವಾ ಅದರ ಮಾಲೀಕರ ಆಸ್ತಿಗಳನ್ನು ಜಪ್ತಿ ಮಾಡಿಕೊಂಡು ರೈತರಿಗೆ ಕೂಡಲೇ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ಮೂಲಕ ಸರ್ಕಾರದ ಗಮನ ಸೆಳೆಯುವುದಾಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಭೂ ಸಂತ್ರಸ್ಥರ ಹೋರಾಟ ಹಾಗೂ ಸೆಂಟ ಅಫ್ ಇಂಡಿಯನ್ ಟ್ರೇಡ್ ಯೂನಿಯನ್ ನ ಪದಾಧಿಕಾರಿಗಳಾದ, ವಿಎಸ್ ಶಿವಶಂಕರ್, ಜೆ.ಸತ್ಯಬಾಬು, ಜೇ ಎಂ ಚನ್ನಬಸಯ್ಯ, ಜೆ.ಚಂದ್ರಕುಮಾರಿ, ಬಸವರಾಜ, ಬಿಎಂ ಬಸವರಾಜ, ಬಿ.ಸೋಮಶೇಖರ, ಅಯ್ಯನಗೌಡ ಮತ್ತು ದೇವೇಂದ್ರಪ್ಪ, ಇನ್ನಿತರರು ಇದ್ದರು