ಜಮಖಂಡಿ

ವಿದ್ಯುತ್ ದರ ಹಚ್ಚಳ ಖಂಡಿಸಿ ಪ್ರತಿಭಟನೆ

ವಿದ್ಯುತ್ ದರ ಹಚ್ಚಳ ಖಂಡಿಸಿ ಪ್ರತಿಭಟನೆ

ಲೋಕದರ್ಶನ ವರದಿ,

ಜಮಖಂಡಿ 14: ರಾಜ್ಯ ಸರಕಾರ ವಿದ್ಯುತ್ ದರ ಹಚ್ಚಳ ಮಾಡಿದನ್ನು ಖಂಡಿಸಿ ಜಮಖಂಡಿ ಜನಕಲ್ಯಾಣ ಸಮಿತಿ ಹಾಗೂ ಹಿಂದು ಏಕತಾ ಸಮಿತಿ ಸಂಘಟನೆಯು ಸರಕಾರದ ವಿರುದ್ಧ ಘೋಷಣೆಯನ್ನು ಕೂಗಿ ಪ್ರತಿಭಟನೆ ನಡೆಸಿದರು.

ನಗರದ ಮಿನಿ ವಿಧಾನಸೌಧದ ಆವರಣದಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿ, ಗ್ರೇಡ್,2 ತಹಶೀಲ್ದಾರ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಮಾತನಾಡಿದರು,.

ಚುನಾವಣೆ ಪೂರ್ವದಲ್ಲಿ ಯಾವುದೆ ಷರತುಗಳನ್ನು ನೀಡದೆ. ಎಲ್ಲರಿಗೂ ಉಚಿತ ವಿದ್ಯುತ್ ನೀಡುತ್ತೇಂದು. ಇವಾಗ ಧಿಡೀರನೆ ವಿದ್ಯುತ್ ದರವನ್ನು ಮೂರು ಪಟ್ಟು ಹೆಚ್ಚಳ ಮಾಡಿ. ಬಡಜನರ ಹೊಟ್ಟೆಯ ಮೇಲೆ ಬರೆ ಏಳೇಯುತ್ತಿದ್ದಾರೆ. ಇನ್ನೂ ಉಳಿದ ಗ್ಯಾರಂಟಿಗಳಿಗೆ ಯಾವ ಷರತುಗಳನ್ನು ಹಾಕಿ. ರಾಜ್ಯದ ಜನತೆಗೆ ವಂಚಿಸಿ. ಆಟವಾಡುತ್ತಿದ್ದಾರೆಂದು ಆರೋಪಿಸಿದರು.

ಇನ್ನು ಹಲವಾರು ಉಚಿತ ಗ್ಯಾರಂಟಿಗಳನ್ನು ನೀಡುವ ಭರಸೆಯ ಮೇಲೆ ಷರತು ನೀಡಬಾರದು. ಪ್ರತಿ ತಿಂಗಳ ಕಡಿಮೆ ಬರುತ್ತಿರುವ ವಿದ್ಯುತ್ ದರ ನಾಲ್ಕು ಪಟ್ಟು ಹೆಚ್ಚಳವಾಗಿದೆ. ಇದರಿಂದ ಬಡಜನರು ಹೊಟ್ಟೆಯನ್ನು ತುಂಬಿಸಿಕೊಳ್ಳುವದು ಕಷ್ಟದಲ್ಲಿ ಹೀಗೆ ಹೆಚ್ಚಳ ದರ ನೀಡಿದರೆ ಎಲ್ಲಿಂದ ತುಂಬಬೇಕು ಎಂದು ಸರಕಾರವನ್ನು ಪ್ರಶ್ನೀಸಿದರು. ಕೂಡಲೇ ವಿದ್ಯುತ್ ದರವನ್ನು ಕಡಿಮೆ ಮಾಡಿ. ಸರಕಾರವನ್ನು ವಜಾ ಗೊಳಿಸಬೇಕೆಂದು ಒತ್ತಾಯಿದರು.

ಉಮೇಶ ಆಲಮೇಲಕರ, ರಾಜೇಶ ಲಗಳಿ, ರವಿ ವಿಭೂತಿ, ಶ್ರೀಕಾಂತ ಮುಧೋಳೆ, ಪುಂಡಲಿಕ ಲೋಣಾರ, ನಾಗೇಶ ಗಾಡಿವಡ್ಡರ, ಶಾರದಾ ಇಟ್ಟಿ,ಕೊಮಲ ಭೋಸಲೆ,ಮಾರುತಿ ಲೋನಾರಿ, ಮದನ ನವಣಿ, ರಾಹುಲ ದೊಡಮನಿ, ಶಂಕರ ವಿಭೂತಿ, ಸೋನಾಲಿ ಜಾಧವ, ಪುಷ್ಪಾ ಸಂಕ್ರಾವತ, ಮನಿಷಾ ಜಾಧವ, ಸುಮೀತ ಲಗಳಿ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.



ಸುದ್ದಿ ಓದಿ