ಪ್ರತಿಭಾ ಕಾರಂಜಿ- ಕಲೋತ್ಸವ ಉತ್ತಮ ವೇದಿಕೆ
ತಾಳಿಕೋಟಿ: ಮಕ್ಕಳಲ್ಲಿ ಸೂಪ್ತ ವಾಗಿರುವ ಪ್ರತಿಭೆಗಳನ್ನು ಹೊರಹಾಕಿ ಅವರನ್ನು ಕ್ರಿಯಾಶೀಲರನ್ನಾಗಿ ಮಾಡಲು ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಅತ್ಯುತ್ತಮ ವೇದಿಕೆಯಾಗಿವೆ ಎಂದು ತಾಲೂಕು ಪಂಚಾಯತ್ ಮಾಜಿ ಸದಸ್ಯ ಡಾ. ಪ್ರಭುಗೌಡ ಬಿರಾದರ( ಅಸ್ಕಿ) ಹೇಳಿದರು.
ತಾಲೂಕಿನ ಅಸ್ಕಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡ 2023-24ನೇ ಸಾಲಿನ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮದಲ್ಲಿ ವಿಜೇತ ಮಕ್ಕಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಭುಗೌಡ ಬಿರಾದರ ಮಾತನಾಡಿ ಇಂದಿನ ಮಕ್ಕಳು ನಾಳಿನ ದೇಶದ ಭವಿಷ್ಯವಾಗಿದ್ದಾರೆ ಇವರ ಭವಿಷ್ಯ ಶಿಕ್ಷಕರ ಕೈಯಲ್ಲಿದೆ ಮಕ್ಕಳ ಸವರ್ಾಂಗೀಣ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಮಹತ್ವಪೂರ್ಣದ್ದಾಗಿದೆ ಎಂದರು. ಶಿಕ್ಷಣ ಸಂಯೋಜಕ ಬಾಲ್ಕಿ ಅವರು ಮಾತನಾಡಿ ನಮ್ಮ ಮಕ್ಕಳು ಯಾವುದರಲ್ಲಿಯೂ ಕಡಿಮೆ ಇಲ್ಲ ಅವರಲ್ಲಿ ಅಗಾಧವಾದ ಪ್ರತಿಭೆಗಳಿವೆ ಅದನ್ನು ಗುರುತಿಸುವ ಕೆಲಸ ಶಿಕ್ಷಕರಿಂದ ಆಗಬೇಕು ಶಿಕ್ಷಕರು ಪಠ್ಯಪುಸ್ತಕದ ಜ್ಞಾನ ದೊಂದಿಗೆ ಪ್ರತಿಭೆಗಳ ಅನಾವರಣಕ್ಕೂ ಪ್ರಯತ್ನಿಸಬೇಕಾಗಿದೆ ಈ ಉದ್ದೇಶಕ್ಕಾಗಿ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದರು.
ಅಸ್ಕಿ ಕ್ಲಸ್ಟರ್ ನಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಮತ್ತು ಬೇರೆ ಕಡೆ ವರ್ಗಾವಣೆಗೊಂಡು ಹಾಗೂ ನೂತನವಾಗಿ ಆಗಮಿಸಿದ ಶಿಕ್ಷಕ ಶಿಕ್ಷಕಿಯರನ್ನು ಸನ್ಮಾನಿಸಲಾಯಿತು ಹಾಗೂ ವಿವಿಧ ಸ್ಪಧರ್ೆಗಳಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಶಸ್ತಿ ಪತ್ರ ವಿತರಿಸಿ ಪ್ರೋತ್ಸಾಹಿಸಲಾಯಿತು. ಅಕ್ಕಿ ಹಿರೇಮಠದ ಪೂಜ್ಯಶ್ರೀ ವಿರುಪಾಕ್ಷೇಶ್ವರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು.
ಎಸ್ ಡಿ ಎಂ ಸಿ ಅಧ್ಯಕ್ಷ ಬಾಲಕೃಷ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತ ಅಧ್ಯಕ್ಷರಾದ ರಾಜೇಶ್ವರಿ ಅಪ್ಪಣ್ಣ ಮಾದರ ಕಾರ್ಯಕ್ರಮ ಉದ್ಘಾಟಿಸಿದರು. ನಿವೃತ್ತ ಮುಖ್ಯ ಗುರುಗಳಾದ ಬಿ. ಪಿ. ತಳವಾರ. ಎಸ್ ಡಿ ಎಮ್ ಸಿ ಮಾಜಿ ಅಧ್ಯಕ್ಷ ಹೆಚ್. ಎನ್. ಬಿರಾದಾರ. ಗ್ರಾಪಂ ಮಾಜಿ ಅಧ್ಯಕ್ಷ ಬಾಲಪ್ಪ ತಳವಾರ. ಸಿ ಆರ್ ಪಿ ರಾಮಣ್ಣ ನಾಯ್ಕೋಡಿ ಮಾಜಿ ಸೈನಿಕ ಪಿ. ಎನ್. ಬಿರಾದಾರ. ಮುಖ್ಯ ಗುರು ಗಳಾದ ಎಂ. ಎಂ. ಕನ್ನೊಳ್ಳಿ ಮತ್ತಿತರರು ಇದ್ದರು