ಶಿಗ್ಗಾವ್

ಬಾಲ್ಯದಿಂದಲೇ ಯೋಗ ಮಾಡುವುದರಿಂದ ದೈಹಿಕ, ಮಾನಸಿಕ ಬೆಳವಣಿಗೆಗೆ ಸಹಕಾರಿ

ಬಾಲ್ಯದಿಂದಲೇ ಯೋಗ ಮಾಡುವುದರಿಂದ ದೈಹಿಕ, ಮಾನಸಿಕ ಬೆಳವಣಿಗೆಗೆ ಸಹಕಾರಿ

ಲೋಕದರ್ಶನ ವರದಿ

ಶಿಗ್ಗಾವಿ 22: ಬಾಲ್ಯದಿಂದಲೇ ಯೋಗ ಮಾಡುವುದರಿಂದ ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗುವುದಲ್ಲದೇ ಮಾನಸಿಕ ಒತ್ತಡ ಕಡಿಮೆಯಾಗಿ ರೋಗ ನಿರೋಧಕ ಶಕ್ತಿ ಹೆಚ್ಚಿ ಆರೋಗ್ಯಯುತ ಜೀವನವನ್ನು ನಡೆಸಬಹುದಾಗಿದೆ ಎಂದು ಗುಳೇದಗುಡ್ಡದ ಯೋಗ ಗುರು ಆನಂದ ಕಾಳಗಿ ಹೇಳಿದರು.

     ತಾಲೂಕಿನ ಬಿಸನಳ್ಳಿ ಕಾಶಿ ವೇದ, ಆಗಮ, ಸಂಗೀತ, ಸಂಸ್ಕೃತ, ಯೋಗ ಪಾಠ ಶಾಲೆಯ ಆವರಣದಲ್ಲಿ ನಡೆದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಮನುಷ್ಯ ತನ್ನ ದೇಹವನ್ನು ಪಿಟ್ನೆಸ್ ಹಾಗು ಆರೋಗ್ಯವಾಗಿಟ್ಟುಕೋಳ್ಳಲು ಯೋಗ ಉತ್ತಮ ಸಾಧನವಾಗಿದೆ. ಪ್ರತಿದಿನ ನಿಯಮಿತವಾಗಿ ಯೋಗಮಾಡುವುದರಿಂದ ರೋಗ ರುಜನಿಗಳು ದೂರವಾಗಿ ನಾವು ದಿನನಿತ್ಯ ಮಾಡುವ ಕಾರ್ಯವನ್ನು ಲವಲವಿಕೆಯಿಂದ ಮಾಡಬಹುದಾಘಿದೆ ಎಂದು ಹೇಳಿದರು.

     ಯೋಗ ಪಾಠಶಾಲೆಯ ವಿದ್ಯಾರ್ಥಿಗಳಿಗೆ ವಿವಿಧ ಬಗೆಯ ಯೋಗಗಳ ಭಂಗಿಗಳನ್ನು ಮಾಡಿಸಿ ಅದರಿಂದಾಗುವ ಪ್ರಯೋಜನಗಳಬಗ್ಗೆ ವಿದ್ಯಾಥರ್ಿಗಳಿಗೆ ಮನವರಿಕೆ ಮಾಡಿಕೋಡಲಾಯಿತು.

   ಪಾಠಶಾಲೆಯ ಮುಖ್ಯ ವ್ಯವಸ್ಥಾಪಕ ಗುರುಶಾಂತಪ್ಪ ನರೆಗಲ್ ಪಾಠಶಾಲೆಯ ಮುಖ್ಯೋಪಾಧ್ಯಾಯ ಮಲ್ಲಿಕಾರ್ಜುನ ಯಳಮಲಿಮಠ, ಸಾಗರ ಕುರವತ್ತಿಮಠ, ಅನೀಲ್ ಸಾಲಿಮಠ, ಮುರಗೇಶ ಆಜೂರ, ಗದಿಗೇಪ್ಪ ಮಾ.ಪ.ಶೆಟ್ಟರ, ಗಂಗಾಧರ ಬಡ್ಡಿ, ಕಲ್ಲಪ್ಪ ಆಜೂರ ಸೇರಿದಂತೆ ಪಾಠಶಾಳೆಯ ವಟುಗಳು ಉಪಸ್ಥಿತರಿದ್ದರು 

ಸುದ್ದಿ ಓದಿ