ಸೌಂದತ್ತಿ

ವಕೀಲರ ಹಿತರಕ್ಷಣಾ ಕಾಯ್ದೆ ಜಾರಿಗೆ ಆಗ್ರಹಿಸಿ ಮನವಿ

ವಕೀಲರ ಹಿತರಕ್ಷಣಾ ಕಾಯ್ದೆ ಜಾರಿಗೆ ಆಗ್ರಹಿಸಿ ಮನವಿ

ಸವದತ್ತಿ 16: ಸಮಾಜದ ಜನರಿಗೆ ನ್ಯಾಯ ಕೊಡಿಸುವಂತ ನ್ಯಾಯವಾದಿಗಳಿಗೆ ರಾಜ್ಯದಲ್ಲಿ ಸರಕಾರ ಸೂಕ್ತ ರಕ್ಷಣೆ ನೀಡುತ್ತಿಲ್ಲ ಎಂದು ಆಗ್ರಹಿಸಿ ಸ್ಥಳೀಯ ನ್ಯಾಯವಾದಿಗಳ ಸಂಘದವರು ನ್ಯಾಯಾಲಯದ ಕಾರ್ಯಕಲಾಪಗಳನ್ನು ಬಹಿಷ್ಕರಿಸಿ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ.

ನ್ಯಾಯವಾದಿಗಳ ಸಂಘದ ಅಧ್ಯಕ್ಷ ಸಿ.ವಿ.ಸಂಬಯ್ಯನಮಠ ಮಾತನಾಡಿ, ವಕೀಲರ ಹಿತರಕ್ಷಣಾ ಕಾಯ್ದೆಯನ್ನು ಜಾರಿಗೆ ತರುವದಾಗಿ ಹೇಳಿದ ಮುಖ್ಯ ಮಂತ್ರಿಗಳ ಮಾತಿಗೆ ಕಾನೂನು ಸಚಿವರಾದ ಮಾಧುಸ್ವಾಮಿಯವರು ಅಪಸ್ವರ ಎತ್ತಿದ ಕಾರಣ ಇಂದು ನ್ಯಾಯವಾದಿಗಳು ಹೋರಾಟ ಅನಿವಾರ್ಯವಾಗಿದೆ ಎಂದರು.

ಕರ್ನಾಟಕ ವಕೀಲರ ಪರಿಷತ್ತು ಹಾಗೂ ವಕೀಲರ ಸಂಘದ ತಿರ್ಮಾನದಂತೆ ಮುಂಬರುವ ಚಳಿಗಾಲದ ಅಧಿವೇಶನದ ಒಳಗಾಗಿ ವಕೀಲರ ಹಿತರಕ್ಷಣಾಕಾಯ್ದೆಯನ್ನು ಜಾರಿಗೊಳಿಸಬೇಕು ಇಲ್ಲವಾದರೆ ಉಗ್ರವಾದ ಹೊರಾಟ ಅನಿವಾರ್ಯ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು 

ನ್ಯಾಯವಾದಿಗಳಾದ ಎಸ್.ಆರ್.ಪಾಟೀಲ, ಸಾವಿತ್ರಿ ಶಿಬಾರಗಟ್ಟಿ, ಎಮ್.ಎಮ್.ಎಲಿಗಾರ, ಯಶವಂತ ಪಾಸ್ತೆ, ಸಂಜಯ ಮುತ್ತಿನ, ಸಿ.ಜಿ.ತುರಮರಿ, ಬಿ.ಎಮ್.ಎಲಿಗಾರ, ಜಗದೀಶ ಪಟ್ಟಣಶೆಟ್ಟಿ, ಜಾವೀದ ತಾಂಬೂಳೆ, ಮಂಜುನಾಥಗೌಡ ಪಾಟೀಲ, ಎಸ್.ಎಸ್.ಮಾನೆ,  ಎಮ್.ಎಮ್.ಮಡಿವಾಳರ, ಎನ್.ಎಸ್.ವಂಟಮುರಿ, ಪಿ.ಎಲ್.ಕುಂಕುಮಗಾರ, ಎಫ್.ಎಮ್.ಕಾಳೆ, ಎಚ್.ಪಿ.ಅಕ್ಕನಗೌಡರ, ಎ.ಬಿ.ಬಾಂಡೆಕರ ಸೇರಿದಂತೆ ನ್ಯಾಯವಾದಿಗಳ ಸಂಘದ   ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು 

ಸುದ್ದಿ ಓದಿ