ಸಾಧನೆಗೆ ಪರಿಶ್ರಮ ಮುಖ್ಯ: ಜಂಬಗಿ
ಸವದತ್ತಿ: ಸತತ ಪರಿಶ್ರಮವೇ ಸಾಧನೆಯ ಮೆಟ್ಟಿಲು ಎಂಬುದನ್ನು ವಿದ್ಯಾರ್ಥಿಗಳು ಮೊದಲು ಅರಿತುಕೊಂಡಾಗ ಯಶಸ್ಸು ಸಾಧಿಸಲು ಸಾಧ್ಯವೆಂದು ಪ್ರಧಾನಗುರುಗಳಾದ ಎಸ್.ಬಿ.ಜಂಬಗಿ ಹೇಳಿದರು.ಸವದತ್ತಿ ತಾಲ್ಲೂಕಿನ ಮದ್ಲೂರ ಗ್ರಾಮದ ಸರಕಾರಿ ಮಾದರಿ ಕನ್ನಡ ಪ್ರಾಥಮಿಕ ಶಾಲೆಯ ಮಕ್ಕಳನ್ನು ಉದ್ದೇಶಿಸಿ ಅವರು ಮಾತನಾಡಿದರು
ಮಬನೂರ ಶಾಲೆಯಲ್ಲಿ ಏರ್ಪಡಿಸಿದ ತಲ್ಲೂರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ತಾಲ್ಲೂಕ ಮಟ್ಟಕ್ಕೆ ಆಯ್ಕೆಯಾದ ಮದ್ಲೂರ ಶಾಲೆಯ ಮಕ್ಕಳಿಗೆ ಅವರು ಶುಭ ಹಾರೈಸಿದರು.ಪ್ರಥಮ ಸ್ಥಾನ ಪಡೆದುತಾಲ್ಲೂಕ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು:ಐದರಿಂದ ಏಳನೇ ತರಗತಿ ವಿಭಾಗದಲ್ಲಿ ಕಾಸಿಂಸಾಬ.ಸಿ.ಸನದಿ (ಕ್ಲೇಮಾಡಲಿಂಗ್), ಭುವನೇಶ್ವರಿ. ವಿ.ಹೊಟ್ಟಿನವರ (ಧಾರ್ಮಿಕ ಪಠಣ) ಒಂದರಿಂದ ನಾಲ್ಕನೇ ತರಗತಿ ವಿಭಾಗದಲ್ಲಿ ಮೇಘಾ.ಸಿ.ಹೂಲಿ ( ಧಾರ್ಮಿಕ ಪಠಣ)ದ್ವಿತೀಯ ಸ್ಥಾನ ಪಡೆದವರು:ಕಾಸಿಂಸಾಬ.ಸಿ.ಸನದಿ(ಧಾರ್ಮಿಕ ಪಠಣ)ರಾಣಿ.ರು.ಪಚ್ಚಿನ್ನವರ(ಮಿಮಿಕ್ರಿ)ರೇಣುಕಾ.ಚಂದರಗಿ(ಕವನ ವಾಚನ) ಮೇಘಾ.ಸಿ.ಹೂಲಿ (ಚಿತ್ರಕಲೆ) ಮೊಬಿನಾ.ಚಂ.ಕರೋಲಿ(ಧಾರ್ಮಿಕ ಪಠಣ ಅರೇಬಿಕ್)ತೃತೀಯ ಸ್ಥಾನ ಪಡೆದವರು: ಕಾವೇರಿ.ಕೃ.ಪಚ್ಚಿನವರ(ಚಿತ್ರಕಲೆ),ರೇಣುಕಾ.ಉ.ತೇಗೂರ(ಕಥೆ),ಲಕ್ಷ್ಮೀ.ಹ.ಗೌಡರ(ಛದ್ಮ ವೇಷ),ಯಲ್ಲವ್ವ.ಹ.ಮನಿಕಟ್ಟಿ(ಭಕ್ತಿಗೀತೆ), ಸಾಗರ.ಫ.ಇಡಗಲ್(ಕ್ಲೇಮಾಡಲಿಂಗ್) ಎಲ್ಲ ಮಕ್ಕಳಿಗೆ ಗ್ರಾಮದ ಗುರು ಹಿರಿಯರು,ಪಾಲಕರು ಹಾಗೂ ಶಾಲೆಯ ಗುರುವೃಂದದವರು ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಹಿರಿಯ ಶಿಕ್ಷಕ ಬಿ.ಎನ್.ಅಂಗಡಿ ಗುರುಮಾತೆಯರಾದ ಎಮ್.ಎ.ಹುದ್ಲಿ,ಎಸ್.ಆಯ್.ಹಂಚಿನಮನಿ ಅತಿಥಿ ಶಿಕ್ಷಕ ಎಸ್.ಜಿ.ಸುಣಗಾರ,ಎ.ಜಿ.ಕಮತಗಿ,ಕೆ.ಎ.ನಾಗನೂರ ಉಪಸ್ಥಿತರಿದ್ದರು