ಯಶಸ್ವಿ ನಾರಿ ಬದುಕಿಗೆ ದಾರಿ ತರಬೇತಿ ಕಾರ್ಯಾಗಾರ
ಲೋಕದರ್ಶನ ವರದಿ
ಶಿಗ್ಗಾವಿ : ಶಂಕರಗೌಡ್ರು ಗೂ. ಪಾಟೀಲ ಇವರ ಪುಣ್ಯಾರಾಧನೆ ಪ್ರಯುಕ್ತ ಜೆಸಿಐ, ರಂಭಾಪುರಿ ಜಗದ್ಗುರು ಪದವಿ ಕಾಲೇಜು, ಅಷ್ಟಾಂಗ ಯೋಗ ಸಂಸ್ಥೆ, ಚಂದನ ಯೋಗ ಹಾಗೂ ನೈತಿಕ ಶಿಕ್ಷಣ ಸಂಸ್ಥೆ, ವಿವೇಕ ಜಾಗ್ರತ ಬಳಗ ಹಾಗೂ ಶರಣ ಸಾಹಿತ್ಯ ಪರಿಷತ್ತು, ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಜಿಲ್ಲಾ ಆಸ್ಪತ್ರೆ ಹಾವೇರಿ ಹಾಗೂ ತಾಲೂಕಾ ಆಸ್ಪತ್ರೆ ಶಿಗ್ಗಾವಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ರಕ್ತದಾನ ಶಿಬಿರ ಹಾಗೂ ತಾಲೂಕಿನ ಆಶಾ ಕಾರ್ಯಕರ್ತೆಯರಿಗೆ "ಯಶಸ್ವಿ ನಾರಿ ಬದುಕಿಗೆ ದಾರಿ" ತರಬೇತಿ ಕಾರ್ಯಾಗಾರ ಈ ಎರಡು ಕಾರ್ಯಕ್ರಮಗಳು ನಗರದ ಹನುಮಂತಗೌಡ್ರು ಪಾಟೀಲ ಕಲ್ಯಾಣ ಭವನ ದಲ್ಲಿ ಜರುಗಿತು.
ಶಿಕ್ಷಣ ಪ್ರೇಮಿ ದಿ. ಶಂಕರಗೌಡ್ರು ಗೂ. ಪಾಟೀಲ ಇವರ ಭಾವಚಿತ್ರಕ್ಕೆ ಫುಷ್ಪಾರ್ಪಣೆ ಮಾಡುವದರೊಂದಿಗೆ ಕಾರ್ಯಕ್ರಮ ಪ್ರಾರಂಭ ಮಾಡಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿ ಅನಿತಾ ಡಿ. ಗೊಬ್ಬರಗುಂಪಿ ವಹಿಸಿದ್ದರು. ಉದ್ಘಾಟಕರಾಗಿ ಸುಶೀಲಕ್ಕ ಶಂ ಪಾಟೀಲ ಮುಖ್ಯ ಅತಿಥಿಗಳಾಗಿ ತಾಲೂಕಾ ಆರೋಗ್ಯ ಆಧಿಕಾರಿ ಸತೀಶ ಎ ಆರ್, ಜಿಲ್ಲಾ ಅಸ್ಪತ್ರೆ ಹಾವೇರಿ ರಕ್ತ ನಿಧಿ ವೈದ್ಯಾಧಿಕಾರಿ ಡಾ. ಬಸವರಾಜ ತಳವಾರ, ಹಿರಿಯ ಪ್ರಯೋಗ ಶಾಲಾ ತಂತ್ರಜ್ಞ ಅಧಿಕಾರಿ ಬಸವರಾಜ ಕಮತದ, ಸೌಭಾಗ್ಯ ದೊಡ್ಡಮನಿ ಸೇರಿದಂತೆ ಜಿಲ್ಲಾ ಆಸ್ಪತ್ರೆ ಹಾವೇರಿ ಹಾಗೂ ತಾಲೂಕಾ ಆಸ್ಪತ್ರೆ ಸಿಬ್ಬಂದಿಗಳು ಹಾಗೂ ಜೆಸಿಐ ಪೂರ್ವಾಧ್ಯಕ್ಷ ಜೆಸಿ ಜಿ ಎನ್ ಯಲಿಗಾರ, ಜೆಸಿ ಡಿ ಎ ಗೊಬ್ಬರಗುಂಪಿ, ಜೆಸಿ ಡಾ. ಚಂದ್ರಿಕಾ ಪಾಟೀಲ, ಜೆಸಿ ಸಿದ್ದಾರ್ಥ ಪಾಟೀಲ ಹಾಗೂ ತರಬೇತುದಾರರಾಗಿ ಹೊಸಪೇಟೆಯ ಜೆ ಸಿ ಐ ಸವಿತಾ ರಮೇಶ, ಧಾರವಾಡದ ಜೆಸಿ ಪ್ರವೀಣ ದೇಶಪಾಂಡೆ, ಶಿಗ್ಗಾವಿಯ ಜೆಸಿ ಡಿ ಆರ್. ತೊಟಿಗೇರ ತರಬೇತಿ ನೀಡಿದರು