ತಂದೆ-ತಾಯಿ ಗುರುಗಳ ಋಣ ತೀರಿಸಲು ಸಾಧ್ಯವಿಲ್ಲ: ಅರುಣ್ ಕುಮಾರ್
ರಾಣೆಬೆನ್ನೂರು11: ಸಮಾಜದಲ್ಲಿ ನಾವು ಎಷ್ಟೇ ದೊಡ್ಡವರಾದರೂ ತಂದೆ ತಾಯಿಗಳಿಗೆ ಮಕ್ಕಳೇ, ಗುರುಗಳಿಗೆ ನಾವು ಇಂದಿಗೂ ಶಿಷ್ಯರೇ,ಇವರಿಬ್ಬರ ಋಣ ಜನ್ಮವೆತ್ತಿದರೂ ತೀರಿಸಲು ಸಾಧ್ಯವಾಗಲಾರದು ಎಂದು ಶಾಸಕ ಅರುಣ್ ಕುಮಾರ್ ಪೂಜಾರ್ ಹೇಳಿದರು.
ಶನಿವಾರ ನಗರಸಭಾ ಕ್ರೀಡಾಂಗಣದ ಆಭರಣದಲ್ಲಿರುವ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂಬರ್7 ರ 2002-2003ನೇ ಸಾಲಿನ ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘವು ಆಯೋಜಿಸಿದ್ದ, ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಕರ್ಾರ ಶಿಕ್ಷಣವನ್ನು ಉತ್ತೇಜಿಸಲು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ ಅವುಗಳ ಪ್ರಯೋಜನ ಪಡೆಯಬೇಕಾದರೆ, ಶಿಕ್ಷಕರು,ಶಾಲಾ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ನಿರಂತರ ಶ್ರಮಿಸಬೇಕಾಗುತ್ತದೆ ಎಂದರು. ಈ ಸರ್ಕಾರಿ ಶಾಲೆ ಕುರುಬಗೆರಿ ವ್ಯಾಪ್ತಿಯಲ್ಲಿದ್ದು, ಇಲ್ಲಿನ ಶಿಕ್ಷಕರು, ಎಸ್ ಡಿ ಎಂ ಸಿ ಸದಸ್ಯರು ಅನೇಕ ರೀತಿಯಲ್ಲಿ ಮಕ್ಕಳ ಶೈಕ್ಷಣಿಕ ಸವರ್ಾಂಗಿಣ ಅಭಿವೃದ್ಧಿಗಾಗಿ, ನಿರಂತರ ಶ್ರಮಿಸಿದ್ದಾರೆ ಎನ್ನುವುದು ಇಂದು ನಡೆದ ಗುರುವಂದನಾ ಕಾರ್ಯಕ್ರಮವೇ ಸಾಕ್ಷಿಯಾಗಿದೆ. ಬೇಡಿಕೆಯಂತೆ ಅಗತ್ಯವಿರುವ 4 ಶಾಲಾ ಕೊಠಡಿಗಳು, ಇತರೆ ಮೂಲಭೂತ ಸೌಲಭ್ಯಗಳು ಹೈಟೆಕ್ ಮಾದರಿಯಲ್ಲಿ ನಿಮರ್ಿಸುವ ಸಂಕಲ್ಪ ನನ್ನದಾಗಿದೆ ಶೀಘ್ರದಲ್ಲಿಯೇ ನಿರ್ಮಿಸುವುದಾಗಿ, ಭರವಸೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಹೆಚ್. ಪಾಟೀಲ್ ಅವರು ಮಾತನಾಡಿ, ಬಡವರು, ದಲಿತರು, ಅಲ್ಪ ಸಂಖ್ಯಾತರು, ಕೂಲಿ ಕಾರ್ಮಿಕರು ವಾಸವಾಗಿರುವ ಈ ಭಾಗದಲ್ಲಿ ಈ ಶಾಲೆ ಶಿಕ್ಷಣ ಪ್ರಗತಿಗಾಗಿ, ಎಲ್ಲ ಶಿಕ್ಷಕರು ಕಾಯಾ,ವಾಚಾ,ಮನಸಾ ಕೆಲಸ ನಿರ್ವಹಿಸಿದ್ದಾರೆ. ಅವರ ಸೇವಾ ಕಾರ್ಯವು ಇಲಾಖೆಗೆ ಹೆಮ್ಮೆ ತಂದಿದೆ ಎಂದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿ ಸಂಘದಿಂದ ತಮಗೆ ಅಕ್ಷರ ಜ್ಞಾನ ಮೂಡಿಸಿ, ಬದುಕಿಗೆ ಭವಿಷ್ಯ ನೀಡಿದ 50ಕ್ಕೂ ಹೆಚ್ಚು ಶಿಕ್ಷಕ ಶಿಕ್ಷಕಿಯರನ್ನು, ಹೃದಯಸ್ಪರ್ಶಿ ಸನ್ಮಾನಿಸಿ ಗುರು ಕಾಣಿಕೆ ಇತ್ತು, ಗೌರವಿಸಿ, ಧನ್ಯತೆ ಪಡೆದರು. ಶಾಲೆಗೆ. ಸ್ಮಾಟರ್್ ಕ್ಲಾಸ್ ಬೂಡ್ಗರ್ಾಗಾಗಿ ಎರಡು ಲಕ್ಷ ರೂಗಳ ಧಾನ ವಾಗ್ದಾನ ಮಾಡಿದ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ್ ನರಸಗೊಂಡರ ಅವರನ್ನು ಎಸ್ ಡಿ ಎಂ ಸಿ ಅಧ್ಯಕ್ಷ ಧಮರ್ೆಂದ್ರ ಜಾಲಗಾರ ಸನ್ಮಾನಿಸಿ ಗೌರವಿಸಿದರು. ವೇದಿಕೆಯಲ್ಲಿ ಬಿ ಆರ್ ಸಿ ಮಂಜ ನಾಯ್ಕ್, ಗಂಗಣ್ಣ ನಾಯಕ್,ಸಿ ಆರ್ ಪಿ, ರಾಜೇಂದ್ರ ಸಿ.ಬಿ., ಅಕ್ಷರ ದಾ. ನಿರ್ದೇಶಕ ಲಿಂಗರಾಜ ಸುತ್ತಕೋಟಿ, ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಕಾಶ್ ಬುರಡಿಕಟ್ಟಿ, ಉಪಾಧ್ಯಕ್ಷ ನೇತ್ರಾವತಿ ಪವಾರ್, ಶಿಕ್ಷಣ ಪ್ರೇಮಿ ಹೇಮಯ್ಯ ಕಾಕೋಳ, ಮಂಜಣ್ಣ ಕಾಟಿ, ನಾಗಣ್ಣ ಮಾಗನೂರು, ವಿದ್ಯಾರ್ಥಿ ಸಂಘದ ಮುಖಂಡರಾದ ಮಂಜುನಾಥ ಚಳಗೇರಿ, ಅಣ್ಣಪ್ಪ ಗಂಟೇರ, ಬೀರಪ್ಪ ಪೂಜಾರ್, ಜಯಪ್ರಕಾಶ್ ಹಲಗೇರಿ, ಕೇಶವ್ ಬೇಲೂರು, ಮಂಜುನಾಥ ಹುಲಿಹಳ್ಳಿ, ಶಿಕ್ಷಕರಾದ, ಆರ್. ಬಸಮ್ಮ, ಎಸ್. ಸುಧೀಂದ್ರ, ಬಿ.ಶೋಭಾ, ವಾಯ್.ಎಚ್. ಮಾಳಗಿಮನಿ, ಸುಮಂಗಲಾ ಕೆಂಚರೆಡ್ಡಿ, ನೇತ್ರಾವತಿ ಬೇಲೂರ್, ರೇಖಾ ಕಾಕೋಳ್, ಮಂಜುಳ ಜ್ಯೋತಿ, ಸೇರಿದಂತೆ ಮತ್ತಿತರ ಶಿಕ್ಷಕರು, ಎಸ್ ಡಿ ಎಂ ಸಿ ಸದಸ್ಯರು, ಈ ಭಾಗದ ಗಣ್ಯ ನಾಗರಿಕರು ಪಾಲ್ಗೊಂಡಿದ್ದರು. ಭವಾನಿ ಪವಾರ್ ಸಂಗಡಿಗರು ಪ್ರಾರ್ಥಿಸಿದರು. ಪ್ರಧಾನ ಗುರುಮಾತೆ ನಿರ್ಮಲಾ ಕೆ.ಮಾನೆ, ಸ್ವಾಗತಿಸಿದರು.
ಶಿಕ್ಷಕ ಎಂ.ಎಲ್.ಯರೇಸಿಮಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಇಂದಿರಾ ಕೊಪ್ಪದ ನಿರೂಪಿಸಿ, ದೈಹಿಕ ಶಿಕ್ಷಕ ಜೆ.ಜಿ.ಗವೇನವರ್, ವಂದಿಸಿದರು. ನಂತರ ಶಾಲೆಯ ವಿದ್ಯಾರ್ಥಿಗಳು ಮತ್ತು ಹಳೆಯ ವಿದ್ಯಾರ್ಥಿ ಗಳು ಪ್ರದರ್ಶಿಸಿದ ಸಾಂಸ್ಕೃತಿಕ ಕಲೆ ಸಾರ್ವಜನಿಕರ, ಪಾಲಕರ ಗಮನ ಸೆಳೆದವ