ಹನುಮಾನ ದೇವರ ಪಲ್ಲಕ್ಕಿ ಮೆರವಣಿಗೆ: ಓಕುಳಿ ಕಾರ್ಯಕ್ರಮ
ಲೋಕದರ್ಶನ ವರದಿ,
ಜಮಖಂಡಿ : 31: ತಾಲೂಕಿನ ಹುನ್ನೂರು ಗ್ರಾಮದ ಗ್ರಾಮದೇವತೆಯ ಉಡಿ ತುಂಬುವದು, ಹನುಮಾನ ದೇವರ ಪಲ್ಲಕ್ಕಿ ಮೆರವಣಿಗೆ ಹಾಗೂ 50 ಅಡಿ ಎತ್ತರವುಳ್ಳ ಓಕುಳಿ ಕಾರ್ಯಕ್ರಮ ಜರುಗಿತು.
ಹುನ್ನೂರ ಗ್ರಾಮದಲ್ಲಿ ಪ್ರತಿ ವರ್ಷದಂತೆ ಆಚರಣೆಯಂತೆ ಐದು ವಾರಗಳ ಕಾಲ ವೃತ ಆಚರಿಸಿ, ನಂತರ ಗ್ರಾಮದೇವತೆಯ ಉಡಿ ತುಂಬಿ, ರಾತ್ರಿ ಮನರಂಜನೆಗಾಗಿ ಯಥಾವತ್ತಾಗಿ ಶ್ರೀ ಕೃಷ್ಣ ಪಾರಿಜಾತ ಬೈಲಾಟ ಕಾರ್ಯಕ್ರಮ ನಡೆದವು. ಗ್ರಾಮದ ಮಧ್ಯದ ಚಾವಡಿ ಆವರಣದಲ್ಲಿ 50 ಅಡಿ ಎತ್ತರವುಳ್ಳ ಓಕುಳಿ ಕಂಬವು ನೋಡುಗರ ಗಮನ ಸೆಳೆಯತ್ತಿತ್ತು. ಓಕಳಿ ದಿನದಂದು ಜಿಗುಟಾದ ಹುಣಸೆ ರಸವನ್ನು ಲೆಪಿಸಿದ ಕಂಬವನ್ನು ಏರುವ ಸ್ಪರ್ಧೆಯಲ್ಲಿ ಗ್ರಾಮದ ಯುವಕರು ಹುಮ್ಮಸಿನಿಂದ ಕಂಬವನ್ನು ಏರುತ್ತಿದ್ದರು. ಸ್ಪರ್ಧೆಯಲ್ಲಿ ಕಂಬವನ್ನು ಏರುವ ಯುವಕರಿಗೆ ಅಲ್ಲಿನ ಜನರು ನೀರನ್ನು ಚಲುತ್ತಿದ್ದರು. ಮಧ್ಯದಲ್ಲಿ ಓಕುಳಿ ಕಂಬ ಏರುವವರು ಜರಿದು ಬೀಳುವಾಗ ಜನರ ಜನರ ಕೂಗಾಟ, ಚಿರಾಟ ಜೊರಾಗಿತ್ತು. ಓಕಳಿ ಸ್ಪರ್ಧೆಯಲ್ಲಿ ಲಕ್ಕಪ್ಪ ಚಿದಾನಂದ ಘಟ್ನಟ್ಟಿ (ಕಲಾಜಗೋಳ) ಪ್ರಥಮ ಸ್ಥಾನ, ಪರಸಪ್ಪ ಲಾಯನ್ನವರ ದ್ವಿತೀಯ ಸ್ಥಾನ ಪಡೆದರು.