ಅಥಣಿ

ಪಿಕೆಪಿಎಸ್. ಸಂಘದಿಂದ ಸದಸ್ಯರಿಗೆ ಶೇ.20 ಲಾಭಾಂಶ ವಿತರಣೆ

ಪಿಕೆಪಿಎಸ್. ಸಂಘದಿಂದ ಸದಸ್ಯರಿಗೆ ಶೇ.20 ಲಾಭಾಂಶ ವಿತರಣೆ

ಸಂಬರಗಿ10: ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಇವರ ಪ್ರಯತ್ನದಿಂದ ಗಡಿ ಭಾಗದ ಸಹಕಾರಿ ಸಂಘಗಳು ಪ್ರಗತಿಯಲ್ಲಿ ಇದ್ದು, ರೈತರಿಗೆ ಹೆಚ್ಚು ಬೆಳೆಸಾಲ ನೀಡಿ ಅನುಕೂಲಮಾಡಿದ್ದಾರೆ ಎಂದು ಪಿಕೆಪಿಎಸ್.ಸಂಘದ ಅಧ್ಯಕ್ಷ ಅಣ್ಣಪ್ಪ ನಿಂಬಾಳ ಹೇಳಿದರು.

ಖಿಳೇಗಾಂವ ಗ್ರಾಮದ ಪಿ.ಕೆ.ಪಿ.ಎಸ್. ಸಂಘದ ಸಭಾಭವನದಲ್ಲಿ ಸದಸ್ಯರಿಗೆ ಶೇ.20 ಲಾಭಾಂಶ ವಿತರಿಸಿ ಮಾತನಾಡಿದರು. ಗಡಿಭಾಗದ ಗ್ರಾಮದ ರೈತರ ಜಮೀನುಗಳು ಭರಡು ಭೂಮಿ ಇದ್ದು, ಸಂಘದಿಂದ ಸಾಲ ಪಡೆದು ರೈತರ ಅಭಿವೃದ್ಧಿ ಮಾಡಲು ಸಹಕಾರ ಮಾಡಿದ್ದಾರೆ. ಬರಗಾಲ ಭಾಗದಲ್ಲಿ ಕೆಲವೇ ಸಂಘಗಳು ಮುಚ್ಚುವ ಸ್ಥಿತಿಯಲ್ಲಿದ್ದಾಗ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಬೆನ್ನೆಲುಬಾಗಿ ನಿಂತು ಅಂತಹ ಸಂಘಗಳನ್ನು ಪೂನರುಜ್ಜಿವನ ಮಾಡಿದ್ದಾರೆ. ಅವರ ಪ್ರಯತ್ನದಿಂದ ಈ ಭಾಗದ ಸಹಕಾರಿ ಸಂಘಗಳು ಲಾಭದಲ್ಲಿದ್ದಾವೆ. ಅವರು ಗಡಿಭಾಗದ ಗ್ರಾಮದ ಸಂಘಗಳಿಗೆ ಹೆಚ್ಚು ಗಮನಹರಿಸಬೇಕೆಂದು ಅವರು ವಿನಂತಿಸಿದರು. ಸಂಘದ ಸದಸ್ಯರು ಪಡೆದಿರುವ ಸಾಲವನ್ನು ನಿಗದಿತ ಅವಧಿಯಲ್ಲಿ ಮರುಪಾವತಿಸಿ ಸಹಕರಿಸಬೇಕೆಂದು ಹೇಳಿದರು.

ಸಂಘದ ನಿರ್ದೇಶಕ  ಜಯಶ್ರೀ ಧರೆಪ್ಪ ದೆವಾನಗೋಳ, ಕಲ್ಲಪ್ಪ ಮುರಗೆಪ್ಪ ಗುರಪಾದಗೋಳ, ಸಂಜಯ ಅಣ್ಣಪ್ಪ ಉಮರೆ, ಸುನಿಲ ಬಸಪ್ಪ ಚೌಗುಲೆ ಮುಖ್ಯಕಾರ್ಯನಿವರ್ಾಹಕರು ಬಾಬು ಹೊನ್ನಾಗೋಳ, ಸದಸ್ಯರಾದ ಧರೆಪ್ಪ ದೆವಾನಗೋಳ, ಬಸಪ್ಪ ಹೊನ್ನಾಗೋಳ, ಸಂಗಪ್ಪ ರೆವಾಗೋಳ, ರಾಯಗೊಂಡ ಅಳ್ಳಿಕಟ್ಟಿ, ಬಸಪ್ಪ ಪಂತೋಜಿ ಸೇರಿದಂತಹ ಸಂಘದ ಎಲ್ಲ ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಸುನಿಲ ಉಮರೆ ಸ್ವಾಗತಿಸಿ ವಂದಿಸಿದರು.

 

ಸುದ್ದಿ ಓದಿ