ನೂರಕ್ಕೆ ನೂರು ನಮ್ಮ ಪೈಲ್ವಾನ್ ಪಠಾಣ್ ಗೆಲ್ತಾರೆ : ಲಕ್ಷ್ಮಿ ಹೆಬ್ಬಾಳಕರ್
ನೂರಕ್ಕೆ ನೂರು ನಮ್ಮ ಪೈಲ್ವಾನ್ ಪಠಾಣ್ ಗೆಲ್ತಾರೆ : ಲಕ್ಷ್ಮಿ ಹೆಬ್ಬಾಳಕರ್
ಶಿಗ್ಗಾವಿ 07 : ಗ್ಯಾರಂಟಿಗಳನ್ನು ಟೀಕೀಸುತ್ತಿದ್ದ ಬಿಜೆಪಿ ಕಾಂಗ್ರೆಸ್ ಯೋಜನೆಗಳನ್ನು ಕಾಪಿ ಪೇಸ್ಟ್ ಮಾಡ್ತಿದೆ ಈಗ ನಮ್ಮ ದಾರಿಗೆ ಬಂದಿದ್ದಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ಪಟ್ಟಣದಲ್ಲಿ ರೋಡ್ ಶೋ ಮೂಲಕ ಯಾಸಿರ್ ಖಾನ್ ಪಠಾಣ್ ಪರ ಪ್ರಚಾರ ಚನ್ನಮ್ಮ ವೃತ್ತದಿಂದ ಆರಂಭಗೊಂಡ ರೋಡ್ ಶೋ ಮುಖ್ಯ ರಸ್ತೆಯಲ್ಲಿ ಸಾಗಿದ ಮೆರವಣಿಗೆ ಉದ್ದೇಶಿಸಿ ಮಾತನಾಡಿದ ಅವರು ಬಿಜೆಪಿಯವರು ಒಂದು ಸುಳ್ಳನ್ನ ಸಾವಿರ ಸಾರಿ ಹೇಳ್ತಾರೆ ಅದನ್ನೇ ಸತ್ಯ ಮಾಡಲು ಪ್ರಯತ್ನಿಸುತ್ತಾರೆ ನಿಮ್ಮ ಜೀವನದಲ್ಲಿ ಅಭಿವೃದ್ಧಿ ಮಾಡೋದೇ ಕಾಂಗ್ರೆಸ್ ಗುರಿ, ನಿಮ್ಮ ಆಶೀರ್ವಾದದಿಂದ 136 ಸ್ಥಾನ ಗೆದ್ದಿದ್ದೇವೆ ಹಾವೇರಿಯಿಂದ ಐದು ಕಾಂಗ್ರೆಸ್ ಶಾಸಕರು ಗೆದ್ದಿದ್ದಾರೆ ಇವರೊಬ್ಬರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ಕಾಂಗ್ರೇಸ ಅಭ್ಯರ್ಥಿ ಯಾಸೀರಖಾನ ಪಠಾಣ ಮಾತನಾಡಿ ಕಳೆದ ಭಾರಿ ಸೋತಿದ್ದೇನೆ ಈ ಭಾರಿ ಒಂದು ಸಲ ಅವಕಾಶ ಕೊಡಿ ಕ್ಷೇತ್ರದ ಸಂರ್ೂಣ ಅಭಿವೃದ್ದಿ ಮಾಡುತ್ತೇನೆ ನಿಮ್ಮ ಕೈ ಮತ್ತು ಕಾಲಿಗೆ ಶಿರಬಾಗುತ್ತೇನೆ ಎಂದರು.
ಸಚಿವ ಶಿವಾನಂದ್ ಪಾಟೀಲ, ನಯನಾ ಮೋಟಮ್ಮ, ಯೂಥ ಅಧ್ಯಕ್ಷ ಮಹ್ಮದ ನಲಪಾಡ, ಸಾಧು ಕೋಕಿಲ, ಅಜ್ಜಂಪೀರ್ ಖಾದಿ, ಸಂಜೀವಕುಮಾರ ನೀರಲಗಿ, ಪ್ರೇಮಾ ಪಾಟೀಲ, ಗೌಸಖಾನ ಮುನಶಿ, ಅಬ್ದುಲಕರೀಂ ಮೊಗಲಲ್ಲಿ, ಮಹಾಂತೇಶ ಸಾಲಿ, ಗುಡ್ಡಪ್ಪ ಜಲದಿ, ಮುನ್ನಾ ಲಕ್ಷೇಶ್ವರ, ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.