ಮುಂದಗೋಡ

ಆಗಸ್ಟ್ 31ರೊಳಗೆ ಇ-ಕೆವೈಸಿ ಮಾಡಿಸಿಕೊಳ್ಳಲು ಅವಕಾಶ

ಆಗಸ್ಟ್ 31ರೊಳಗೆ ಇ-ಕೆವೈಸಿ ಮಾಡಿಸಿಕೊಳ್ಳಲು ಅವಕಾಶ

ಲೋಕದರ್ಶನ ವರದಿ

ಮುಂಡಗೋಡ 21: ಪ್ರಧಾನಮಂತ್ರಿ ಕಿಸಾನಸಮ್ಮಾನ ನಿಧಿ ಯೋಜನೆ ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾಗಿರುತ್ತದೆ. 2019-20ರಿಂದ ಯೋಜನೆಯಡಿ ರೈತರಿಗೆ ಚತುಮರ್ಾಸಿಕದಂತೆ 2000ರೂ.ಗಳ ಆರ್ಥಿಕ ನೆರವು ನೀಡುತ್ತಿದೆ. ಈಗಾಗಲೆ ತಾಲೂಕಿನಲ್ಲಿ ರೈತ ಫಲಾನುಭವಿಗಳು ಯೋಜನೆಯ ಆರ್ಥಿಕ ನೆರವು ಪಡೆಯುತ್ತಿದ್ದಾರೆ. 2022-23ನೇ ಸಾಲಿನಲ್ಲಿ ಏಪ್ರಿಲ್-ಜುಲೈ ಚತುರಮಾಸಿಕದಿಂದ ಆಧಾರ ಆಧಾರಿತ ಹಣ ಪಾವತಿ ಮಾಡುವುದರಿಂದ PMKISAN ಪೊರ್ಟಲ್ನಲ್ಲಿ EKYC ಮಾಡಿಸುವುದು ಅತಿ ಅವಶ್ಯಕವಾಗಿರುತ್ತದೆ. ಇಏಙಅ ಮಾಡಿಸದ ಅರ್ಹ ರೈತ ಫಲಾನುಭವಿಗಳಿಗೆ 2000ರೂ.ಗಳ ಆರ್ಥಿಕ ನೆರವು ವರ್ಗಾವಣೆ ಆಗುವುದಿಲ್ಲ. EKYC ಮಾಡಿಸದೆ ಇರುವ ಅರ್ಹ ಫಲಾನುಭವಿ ರೈತರು 31-08-2022ರ ಒಳಗಾಗಿ EKYC ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿರುತ್ತದೆ. EKYC ಮಾಡಿಸದೆ ಇರುವ ಅರ್ಹ ರೈತ ಫಲಾನುಭವಿಗಳು ಗ್ರಾಮ ಒನ್ ಮತ್ತು Common Service Centres (CSC)/ಜನ ಸೇವಾ ಕೇಂದ್ರಗಳಲ್ಲಿ EKYC  ಮಾಡಿಸಿಕೊಳ್ಳುವುದು ಅತಿ ಪ್ರಾಮುಖ್ಯ. ಹೆಚ್ಚಿನ ಮಾಹಿತಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಎಮ್.ಎಸ್.ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ 

ಸುದ್ದಿ ಓದಿ