ಅಕ್ರಮ ಪಡಿತರ ದಾಸ್ತಾನು ಬಹಿರಂಗ ಹರಾಜು ಪ್ರಕ್ರಿಯೆ ನ.25ರಂದು: ತಹಶೀಲ್ದಾರ್ ಎನ್ ಆರ್ ಮಂಜುನಾಥ ಸ್ವಾಮಿ
ಸಿರುಗುಪ್ಪ 15: ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆವರಣದಲ್ಲಿನ ಕೆಎಫ್ ಎಸ್ ಸಿ ಗೋದಾಮಿನಲ್ಲಿರುವ ಅಕ್ರಮ ಪಡಿತರ ದಾಸ್ತಾನು ಹಾಗೂ ಅಕ್ರಮ ಸಾಗಾಣಿಕೆ ದಾಸ್ತಾನು ಬಳ್ಳಾರಿ ಜಿಲ್ಲಾಧಿಕಾರಿಗಳ ಆದೇಶ ಒಟ್ಟು ಹದಿನೈದು ವಿವಿಧ ಪ್ರಕರಣಗಳ ಜಪ್ತಿ ಮಾಡಲಾದ 1410.15 ಕ್ವಿಂಟಲ್ ಅಕ್ಕಿ ಮತ್ತು 7.25ಕ್ವಿಂಟಲ್ ಗೋಧಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡು ಬಹಿರಂಗ ಹರಾಜು ಪ್ರಕ್ರಿಯೆಗೆ ಸೋಮವಾರ ದಿನಾಂಕ ನಿಗದಿ ಮಾಡಿತ್ತು ಎಂದು ತಹಶೀಲ್ದಾರ್ ಎನ್ ಆರ್ ಮಂಜುನಾಥ ಸ್ವಾಮಿ ಹೇಳಿದರು.
ಷರತ್ತುಗಳಿಗೆ ಅನ್ವಯವಾಗುವಂತೆ ಭದ್ರತಾ ಠೇವಣಿ ಭರಿಸಿ ಹೆಸರು ನೋಂದಾಯಿಸಿಕೊಂಡ 82ಜನರು ಸಿರಗುಪ್ಪ ತಾಲೂಕಿನ ಸಿಂಧನೂರು ಗಂಗಾವತಿ ಹೊಸಪೇಟೆ ಕಂಪ್ಲಿ ಮಸ್ಕಿ ಈಗ ಎಂಬತ್ತೆರಡು ಜನ ಠೇವಣಿ ಭರಿಸಿ ಲೀಲಾವಿನಲ್ಲಿ ಭಾಗಿಯಾಗಿದ್ದರು ಹರಾಜಿನಲ್ಲಿ ದಾಸ್ತಾನಿನ ಮಾದರಿಗಳನ್ನು ಇಡಲಾಗಿತ್ತು ಇಲ್ಲಿ ತೋರಿಸಲಾಗಿರುವ ಸ್ಯಾಂಪಲ್ ಹಾಗೂ ಗೋದಾಮಿನಲ್ಲಿ ದಾಸನಿಗೆ ವ್ಯತ್ಯಾಸ ವಿದ್ದು ಗೋದಾಮಿನ ದಾಸ್ತಾನಿನ ಅಕ್ಕಿಯ ನುಚ್ಚು ಪೂರ್ಣ ಕಳಪೆಮಟ್ಟದ ಅಕ್ಕಿ ಹಾಗೂ ಉತ್ತಮವಾಗಿರುವ ಅಕ್ಕಿ ಸರ್ಕಾರದ ದರವನ್ನು ಬೇರೆಡೆಗಳಿಗಿಂತ ಹೆಚ್ಚಿಗೆ ಇದೆ ಈ 3ಬಗೆಯ ದಾಸ್ತಾನಿಗೆ 3ತರಹದ ದರಗಳನ್ನು ನಿಗದಿಪಡಿಸಿ ಪುನರ್ ಹರಾಜು ಪ್ರಕ್ರಿಯೆಗೆ ನಡೆಸುವಂತೆ ಬಿಡ್ಡುದಾರರು ತಿಳಿಸಿದರು ಇದರಿಂದ ತಹಸೀಲ್ದಾರ್ ಎನ್ ಆರ್ ಮಂಜುನಾಥ ಸ್ವಾಮಿ ಬಿಡ್ ದಾರರು ತಿಳಿಸಿದ ವಿಷಯಗಳು ದಾಸ್ತಾನು ಪರಿಶೀಲಿಸಿ ನಿರ್ಣಯಕ್ಕೆ ಬಂದರು ಇದೇ ತಿಂಗಳ 25ರಂದು ಮರು ಹರಾಜು ಪ್ರಕ್ರಿಯೆಯನ್ನು ನಡೆಸಲಾಗುತ್ತದೆ ಎಂದು ಅವರು ಹೇಳಿದರು ಸಿಡಿಪಿಒ ಎ ಜಲಾಲಪ್ಪ,ಆಹಾರ ಶಿರಸ್ತೇದಾರ ಟಿ ಮಹೇಶ,ಆಹಾರ ನಿರೀಕ್ಷರುಗಳಾದ ಮಹಾರುದ್ರಗೌಡ, ಜಗದೀಶ್,ಗೋದಾಮು ವ್ಯವಸ್ಥಾಪಕ ಪೋಲಿಸ್ ಅಧಿಕಾರಿ ರಾಥೋಡ್, ಅಬ್ದುಲ್ ನಬಿ ಅನೇಕ ಹಾಗೂ ಅನೇಕ ಕಡೆಗಳಿಂದ ಆಗಮಿಸಿದ್ದ ಬಿಡ್ ದಾರರು ಇದ್ದರು.