ದಿ.18ರಂದು ಅಲೆಮಾರಿ ಸಮುದಾಯ “ಬೆಳಗಾವಿ ಸುವರ್ಣಸೌಧ ಚಲೋ” ಹೋರಾಟದಲ್ಲಿ ಪಾಲ್ಗೊಳ್ಳಲು ಕರೆ
ದಿ.18ರಂದು ಅಲೆಮಾರಿ ಸಮುದಾಯ “ಬೆಳಗಾವಿ ಸುವರ್ಣಸೌಧ ಚಲೋ” ಹೋರಾಟದಲ್ಲಿ ಪಾಲ್ಗೊಳ್ಳಲು ಕರೆ
ಹೊಸಪೇಟೆ 14: ಸರ್ವೋಚ್ಛ ನ್ಯಾಯಾಲಯವು ದಿ.01/08/2024 ರಂದು ಒಳ ಮೀಸಲಾತಿ ವರ್ಗೀಕರಣಕ್ಕೆ ಸಂಭಂದಿಸಿದಂತೆ ಮೀಸಲಾತಿ ವಂಚಿತ ಸಮುದಾಯಗಳಿಗೆ ಜನಸಂಖ್ಯೆ ಆದಾರವನ್ನು ಪರಿಗಣಿಸದೆ ಆಧ್ಯತೆಯ ಮೇರೆಗೆ ಒಳ ಮೀಸಲಾತಿ ಕಲ್ಪಿಸಬೇಕೆಂದು ವಿಶೇಷ ಆದೇಶದೊಂದಿಗೆ ಮಹತ್ವದತೀರ್ು ನೀಡಿರುತ್ತದೆ. ಸದರೀತೀರ್ಪನನು ಮೀಸಲಾತಿ ವಂಚಿತಅಲೆಮಾರಿ ಸಮುದಾಯಗಳು ಹೃದಯಪೂರಕವಾಗಿ ಸ್ವಾಗತಿಸುವ ಜೊತೆಗೆ ಘನ ನ್ಯಾಯಲಯಕ್ಕೆ ಅಭಿನಂದಿಸುತ್ತೇವೆ. ಮೀಸಲಾತಿ ಜಾರಿ ಅದಾಗಿನಿಂದಲೂ ಸಹ “ಸಂವಿಧಾನಬದ್ದ”ವಾಗಿ ಪರಿಶಿಷ್ಟ ಜಾತಿಗಳ ಒಟ್ಟು 101 ಜಾತಿಗಳ ಪಟ್ಟಿಯಲ್ಲಿ 49 ಸೂಕ್ಷ್ಮಅತಿಸೂಕ್ಷ್ಮ ಪ.ಜಾ ಅಲೆಮಾರಿ ಜಾತಿಗಳು ಒಳಗೊಂಡಿರುತ್ತವೆ. ಆದರೆ ಸರ್ಕಾರದ ಮೀಸಲಾತಿ ಪಡೆಯುವಲ್ಲಿ ಬಹುತೇಕ ವಿಫಲವಾಗುತ್ತಾ ಬರುತ್ತಿವೆ. ಇದಕ್ಕೆಲ್ಲಾ ಅಲೆಮಾರಿಗಳು ಒಂದೆಡೆ ನೆಲೆ ನಿಲ್ಲದೆ ಧಾರ್ಮಿಕ ಭಿಕ್ಷಾಟನೆ ಮತ್ತು ತಮ್ಮ ತಮ್ಮ ಜನಾಂಗದ ಕುಲಕಸುಬಿನ ಮೂಲಕ ತಮ್ಮಉದರ ಪೋಷಣೆಗಾಗಿ ಊರೂರು ಅಲೆಯುವ ಅಘೋಚರವಾದಿಗಳಾಗಿದ್ದು, ಈ ಕಾರಣಗಳಿಂದ ಅನಕ್ಷರತೆ, ಅಸಂಘಟನೆ ಮತ್ತು ಅರಿವಿನ ಕೊರತೆಯು ಮುಖ್ಯ ಕಾರಣವಾಗಿರುತ್ತದೆ. ನಮ್ಮ ಅಲೆಮಾರಿತನದಿಂದ 2011ರಲ್ಲಿ ಭಾರತ ಸರ್ಕಾರ ನಡೆಸಿದ ಜನಗಣತಿಯಲ್ಲಿ ಪರಿಣಾಮಕಾರಿಯಾಗಿ ಸಮೀಕ್ಷೆಯ ಪರಿಗಣನೆಗೆ ಬಂದಿರುವುದಿಲ್ಲ. ಅಲೆಮಾರಿಗಳಿಗೆ ಸರ್ಕಾರಗಳ ಮೂಲ ಸೌಕರ್ಯಗಳಾದ ಬಿಪಿಎಲ್ ಪಡಿತರ ಚೀಟಿ, ಮತದಾನದ ಚೀಟಿ, ಆಧಾರ ಕಾರ್ಡ, ಜಾತಿ ಪ್ರಮಾಣ ಪತ್ರ, ಆರೋಗ್ಯ, ಶಿಕ್ಷಣ ವಿಲ್ಲದೆ ವಾಸಿಸಲಿಕ್ಕೆ ಸೂರು, ಕೃಷಿ ಭೂಮಿಯಾಗಲಿ ಪಡೆಯಲು ಸಾಧ್ಯವಾಗದೆ ಬಹುತೇಕವಾಗಿ ವಿಳಾಸವಿಲ್ಲದೆ ಅತಂತ್ರ ಅಲೆಮಾರಿಗಳಗಿ ನಿಕೃಷ್ಟವಾಗಿ ಬದುಕುದೂಡುತ್ತಿರುವ ಸಮುದಾಯಗಳು ಯಾವುದಾದರು ಇದ್ದರೆ ಅವು ಅಲೆಮಾರಿ ಸಮುದಾಯಗಳಗಿವೆ.
ಈ ಎಲ್ಲಾ ಸಮಸ್ಯೆಗಳ ಪರಿಹಾರ ಕಂಡುಕೊಳ್ಳಲು ಕಳೆದ 25 ವರ್ಷಗಳ ಹಿಂದೆ ಕೆಲ ಎಚ್ಚೆತ್ತ ಅಲೆಮಾರಿ ನಾಯಕರು, ಚಿಂತಕರು ಮತ್ತು ಪ್ರಗತಿಪರರು ವಿವಿಧ ಚಿಕ್ಕ ಚಿಕ್ಕ ಅಲೆಮಾರಿ ಸಮುದಾಯಗಳನ್ನು ಒಟ್ಟುಗೂಡಿಸಿ ಹೋರಾಟ ಮಡಿದ ಫಲವಾಗಿ ಒಂದಿಷ್ಟು ಸರ್ಕಾರಿ ಯೋಜನೆಗಳಾದ ರಾಜ್ಯದಲ್ಲಿ ಅಲೆಮಾರಿ ವಸತಿ ಯೋಜನೆ, ವಸತಿ ಶಿಕ್ಷಣ, ಗ್ರಂಥಾಲಯ, ಅಭಿವೃದ್ಧಿ ಕೋಶ ಆಯೋಗ ಹೀಗೆ ಹತ್ತಾರು ಯೋಜನೆಗಳು ಬರಲಾಂಭಿಸಿವೆ. ಇತ್ತೀಚಿಗೆ ಸಕಾರಕೋಶವನ್ನು ಮಾರಿ್ಡಸಿ ಪ.ಜಾ/ಪ.ಪಂ ನಿಗಮವಾಗಿ ಪರಿವರ್ತಿಸಿ ಅನುದಾನ ನೀಡಿರುತ್ತದೆ.
ಆದರೆ ನಿಗಮಕ್ಕೆ ಅಧ್ಯಕ್ಷರಾಗಿ ನೇಮಕಗೊಂಡು ಬಂದ ಅಧ್ಯಕ್ಷರು ಸುಮಾರು ಒಂದುವರೆ ವರ್ಷಗಳಾದರು ಅಲೆಮಾರಿಗಳ ಸಭೆ ಕರಿಯದೆ ನಿರ್ಲಕ್ಷ ಧೋರಣೆ ಅನುಸರಿಸುತ್ತಾ ಬಂದಿರುತ್ತಾರೆ. ಅಧ್ಯಕ್ಷರಾಗಿ ಬಂದ ಪಲ್ಲವಿಯವರು ಅಲೆಮಾರಿಗಳಲ್ಲೆ ಬಹು ಸಂಖ್ಯಾತರಾದ ಕೊರಮ ಸಮುದಾಯಕ್ಕೆ ಸೇರಿದವರಾಗಿದ್ದು ಬಹುತೇಕ ಸ್ವಜಾತಿ ಮತ್ತು ಕೆಲವೇ ಕೆಲ ಸಮುದಾಯಗಳಿಗೆ ಸೀಮಿತವಾಗಿ ಗಮನ ಕೊಡುತ್ತಾ ಬಂದು ಸೂಕ್ಷ್ಮ, ಅತಿಸೂಕ್ಷ್ಮ ಸಮುದಾಯಗಳನ್ನು ನಿರ್ಲಕ್ಷಿಸುತ್ತಾ ಬಂದಿರುವುದು ದುರಂತವಾಗಿದೆ. ಜೊತೆಗೆ ಸರ್ಕಾರ ಈ ಹಿಂದೆ ಘೋಷಿಸಿದ್ದ ನಿಗಮ ಹೆಸರಿನ ಪ್ರಾರಂಭದಲ್ಲೇ“ಸೂಕ್ಷ್ಮಅತಿ ಸೂಕ್ಷ ಪ.ಜಾ/ಪ.ಪಂ ಅಲೆಮಾರಿ ಸಮುದಾಯಗಳ ಅಭಿವೃದ್ಧಿ ನಿಗಮ” ಎಂದು ಘೋುಷಿಸಿತ್ತು. ಆ ಮುಖ್ಯ ಪದಗಳನ್ನೀಗ ತೆಗದು ಹಾಕಿರುವುದು ಘೋರದುರಂತ ಅನ್ಯಾಯವಾಗಿದೆ. ಅಧ್ಯಕ್ಷರು ಈ ಕೂಡಲೇ ಇದರ ಬಗ್ಗೆ ಸ್ಪಷ್ಟನೆ ನೀಡಬೇಕು.
ಕೊರಮ-ಕೊರಚ ಎರಡು ಸಮುದಾಯಗಳ ಜನ ಸಂಖ್ಯೆಯು ಬಹುತೇಕ 49ಪ.ಜಾ ಅಲೆಮಾರಿ ಸಮುದಾಯಳಿಗೆ ಸಮವಾಗಿದೆ. ಇದನ್ನು ಮನ ಗಂಡಿದ್ದ ಆ ಸಮುದಾಯದ ಮುಖಂಡರು ಸರ್ಕಾರಕ್ಕೆ ಈ ಹಿಂದೆ ಮನವಿ ಮಾಡಿಕೋಂಡು “ಕೊರಮ-ಕೊರಚ” ಎರಡು ಸಮುದಾಯಕ್ಕೆ ಪ್ರತ್ಯೇಕ ನಿಗಮಕ್ಕೆ ಮನವಿ ಮಾಡಿಕೊಂಡಿದ್ದರು. ಇವರ ಮನವಿಯಂತೆ ಹಿಂದಿನ ಸರ್ಕಾರದ ಮುಖ್ಯ ಮಂತ್ರಿಗಳಾದ ಜಗದೀಶ್ ಶೆಟ್ಟರ್ರವರು 2013/14 ರ ಆಯವ್ಯಯ ಸಂಧರ್ಭದಲ್ಲಿ ಕೊರಮ-ಕೊರಚ ಸಮುದಾಯಗಳ ಸವಾಂಗೀಣ ಅಭಿವೃದ್ಧಿಗಾಗಿ ಪ್ರತ್ಯೇಕವಾದ ಸಂಸ್ಥೆ/ನಿಗಮ ಸ್ಥಾಪಿಸುವ ಸಲುವಾಗಿ 5 ಕೋಟಿ ಅನುದಾನವನ್ನು ಘೋಷಿಸಿದೆ. ಆದರೆ ಅದನ್ನು ಆ ಸಮುದಾಯಗಳು ಅನುಷ್ಠಾನ ಮಾಡಿಕೊಂಡಿಲ್ಲ ಕಾರಣ ತಿಳಿಯುತ್ತಿಲ್ಲ. ಏಕೆಂದರೆ ಪ್ರಭಾವಿ ಬಹು ಸಂಖ್ಯಾತ ಮೇಲ್ವರ್ಗಗಗಳ ಜನಾಂಗದವರೇಜಾತಿ ನಿಗಮ ಪಡೆದುಕೊಂಡಿರುವುದು ಜಗದ್ಜಾಹಿರಾಗಿದೆ. ಹಾಗಾಗಿ ಕೊರಮ-ಕೊರಚ ಸಮುದಾಯದ ನಾಯಕರುಗಳಲ್ಲಿ ಕೇಳಿಕೊಳ್ಳುವುದೇನೇಂದರೆ. ನಿಮ್ಮಲ್ಲೂ ಬಹಳಷ್ಟು ಕಡು ಬಡವರಿದ್ದಾರೆ ದಯಮಾಡಿ ಘೋಷಣೆ ಅಗಿರುವ ಕೊರಮ-ಕೊರಚ ನಿಗಮವನ್ನು ಅನಷಾನ ಮಾಡಿಕೊಂಡು ಸಾವಿರಾರು ಕೋಟಿ ಅನುದಾನ ಹಾಕಿಸಿಕೊಳ್ಳಿ ಬೇಕಿದ್ದರೆ ಕೊರಮ-ಕೊರಚ ಪ್ರತ್ಯೇಕ ಸಚಿವಾಲಯವನ್ನೇ ಮಾಡಿಕೊಳ್ಳಿ ಉಳಿದೆಲ್ಲಾ ಅಲೆಮಾರಿ ಸಮುದಾಯಗಳು ನಿಮಗೆ ಬೆಂಬಲವಾಗಿ ನಿಲ್ಲತೇವೆ. ಹೀಗೆ ಮಾಡುವುದರ ಮೂಲಕ ಚಿಕ್ಕಚಿಕ್ಕಧ್ವನಿಯಿಲ್ಲದ ನಮಗೆ ನಮ್ಮ ನಿಗಮ ಬಿಟ್ಟುಕೊಡಿರೆಂದು ನಿಮ್ಮಲ್ಲಿ ಕೇಳಿಕೊಳ್ಳುತ್ತೇವೆ. ಮತ್ತು
ಈ ಎಲ್ಲಾ ಕಾರಣದಿಂದ ಸರ್ಕಾರ ನೇಮಿಸಿರುವ ನಿವೃತ್ತಿ ನ್ಯಾಯ ಮೂರ್ತಿಗಳಾದ ಮಾನ್ಯ ನಾಗಮೋಹನ್ದಾಸ್ ರವರು 49 ಸಮುದಾಯಗಳನ್ನು ಪರಿಗಣಿಸಿ ನ್ಯಾಯ ಒದಗಿಸುವಂತೆ ಮನವಿ ಹಾಗೂ ಅಲೆಮಾರಿ ಜನಾಂಗಗಳಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಹಿಡಿದು ಇಂದಿನವರೆಗೂ ಭಾರತ ಮತ್ತು ರಾಜ್ಯ ಸರ್ಕಾರಗಳ ಉನ್ನತ ಸೇವೆಯ ಹುದ್ದೆಗಳಾದ ಋಖ, ಋಖ, ಋಖ, ಋಖ, ಏಂಖ ವರ್ಗದ ಅಧಿಕಾರಿಗಳಾಗಿ ಇದುವರೆಗೂ ಒಬ್ಬನೇ ಒಬ್ಬ ವ್ಯಕ್ತಿಯೂ ನೇಮಕಗೊಂಡಿರುವುದಿಲ್ಲ. ರಾಜಕೀಯವಾಗಿಯೂ ಸಹ ಒಕ, ಒಐಂ, ಒಐಅ ಆಯ್ಕೆಯು ಸಾಧ್ಯವಾಗಿರುವುದಿಲ್ಲ. ಮೀಸಲಾತಿ ವರ್ಗೀಕರಣದಲ್ಲಿ ಜನಸಂಖ್ಯೆಯನ್ನೇ ಮಾನದಂಡವಾಗಿ ಪರಿಗಣಿಸದೆ ಈ ಮೇಲಿನ ಎಲ್ಲಾ ಅಂಶಗಳನ್ನು ಮತ್ತು ಅಲೆಮಾರಿಗಳು ಇದುವರೆಗೂ ಮೀಸಲಾತಿ ಪಡೆಯುವಲ್ಲಿ ಸಾಧ್ಯವಾಗದೆ ಉನ್ನತ ಶಿಕ್ಷಣ ಹಾಗೂ ಸರ್ಕಾರಗಳ ಉನ್ನತ ಹುದ್ದೆಗಳನ್ನು ಪಡೆಯುವಲ್ಲಿ ವಿಫಲಗೊಂಡ ಕಾರಣ ಅಲೆಮಾರಿ ಸಮುದಾಯಗಳು ಎಲ್ಲಾ ಕ್ಷೇತ್ರಗಳಲ್ಲಿಯೂ ವಂಚಿತಗೊಂಡು ಅತ್ಯಂತ ನಿಕೃಷ್ಟವಾಗಿ ಬದುಕುತ್ತಿದ್ದೇವೆ. ಹಾಗಾಗಿ ನಮ್ಮ ಹಿಂದುಳಿದಿರುವಿಕೆಯನ್ನು ಪರಿಗಣಿಸಿ, ಸರ್ವೋಚ್ಛ ನ್ಯಾಯಾಲಯದ ತೀರ್ಿನ ಅನ್ವಯ ವಿಶೇಷ ಪ್ರಥಮ ಆಧ್ಯತೆ ನೀಡುವುದರೊಂದಿಗೆ ಒಳ ಮೀಸಲಾತಿ ಕಲ್ಪಿಸಿಕೊಡುವ ಮೂಲಕ ಅಲೆಮಾರಿಗಳಿಗೂ “ಪವಿತ್ರ ಸಂವಿಧಾನದ ಅಡಿಯಲ್ಲಿ” ಸಮಾನ ಅವಕಾಶ ಕಲ್ಪಿಸಿಕೊಡುವ ಜೊತೆಗೆ “ಸಂವಿಧಾನಶಿಲ್ಪಿ ಅಂಬೇಡ್ಕರ್ರವರ ಆಶಯದಂತೆ ನಿರ್ಲಕ್ಷಿತ ಮೂಲನಿವಾಸಿಗಳಾದ ಅಲೆಮಾರಿಗಳಿಗೆ ಸ್ವಾಭಿಮಾನದ ಬದುಕು ಕಲ್ಪಿಸಿಕೊಡಬೇಕೆಂದು ಈ ಮೂಲಕ 49 ಸೂಕ್ಷ್ಮ ಅತಿ ಸೂಕ್ಷ ಪ.ಜಾ ಅಲೆಮಾರಿ ಸಮುದಾಯಗಳು ಮನವಿ ಮಾಡಿಕೊಳ್ಳುತ್ತೇವೆ.
ಈ ಸಂದರ್ಭದಲ್ಲಿ ರಾಜ್ಯ ಸಂಚಾಲಕರಾದ ಸಣ್ಣಮಾರೆಪ್ಪ, ಶೇಖಪ್ಪ ಕಿನ್ನೂರಿ, ಜೆ.ರಮೇಶ್, ಸಿದ್ದಪ್ಪ, ಚೌಡಪ್ಪ, ರಾಜಕುಮಾರ, ದೊಡ್ಡ ಚಮಲಪ್ಪ, ಎಸ್.ಬಿ.ಮಂಜಪ್ಪ, ಡೊಕ್ಕ ಜಂಬಣ್ಣ, ಸಣ್ಣ ಮಂಜಪ್ಪ ಹಾಗೂ ಇತರೆ ಮುಖಂಡರು ಈ ಸಂದರ್ಭದಲ್ಲಿ ಭಾಗಿಯಾಗಿದ್ದರು.