ಚಿಕ್ಕೋಡಿ

ಸಡಗರ ಸಂಭ್ರಮದಿಂದ ನಾಗರ ಪಂಚಮಿ ಆಚರಣೆ

ಸಡಗರ ಸಂಭ್ರಮದಿಂದ ನಾಗರ ಪಂಚಮಿ ಆಚರಣೆ

ಮಾಂಜರಿ : ಮಹಿಳೆಯರ ಹಬ್ಬವೆಂದೇ ಖ್ಯಾತಿಗೊಂಡಿರುವ ನಾಗರ ಪಂಚಮಿ ಹಬ್ಬವನ್ನು ತಾಲೂಕಿನಾದ್ಯಂತ ಸೋಮವಾರ  ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಹೊಸದಾಗಿ ಮದುವೆಯಾಗಿ ಗಂಡನ ಮನೆಗೆ ಹೋದ ಮಹಿಳೆಯರು ನಾಗರ ಪಂಚಮಿ ಹಬ್ಬಕ್ಕೆಂದು ತವರು ಮನೆಗೆ ಆಗಮಿಸುತ್ತಾರೆ. ಹೊಸ ಸೀರೆಯನ್ನು ಉಟ್ಟು ಶೃಂಗಾರಗೊಂಡ ಮಹಿಳೆಯರು ಮನೆ ಮಂದಿಯಲ್ಲಿ ಸೇರಿಕೊಂಡು ನಾಡದೇವರ ದೇವಸ್ಥಾನಗಳಿಗೆ, ಬಯಲಿನಲ್ಲಿನ ನಾಗರ ಮೂರ್ತಿಗಳಿಗೆ, ನಾಗಯ್ಯ  ಕಟ್ಟೆ ಮೇಲಿನ ನಾಗಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಿ ನೈವೇದ್ಯ ಅರ್ಪಿಸಿ ಹಾಲೆರೆಯುತ್ತಾರೆ.

ನಾಗರ ದೇವರಿಗೆ ಹಾಲು ಎರೆಯುವಾಗ ತಮ್ಮ ಮನೆ ದೇವರು, ಇಷ್ಟವಾದ ದೇವರು, ದೇವಿಯರುಗಳ ಹಾಗೂ ತನ್ನ ತಂದೆತಾಯಿ, ಗುರು, ಅಣ್ಣತಮ್ಮ, ಅಕ್ಕತಂಗಿ, ಅತ್ತೆಮಾವ, ಗೆಳೆಯ ಗೆಳತಿಯರ, ಗುರುಹಿರಿಯರ ಹಾಗೂ ಕಿರಿಯರ ಹೆಸರುಗಳನ್ನು ಹೇಳಿಕೊಂಡು ಹಾಲನ್ನು ಹಾಕುತ್ತಾರೆ. ಯಾವುದೇ ತೊಂದರೆ, ಕಷ್ಟಗಳು ಬಾರದಂತೆ ನಮ್ಮ ಕಾಪಾಡು, - ರಕ್ಷಿಸಬೇಕೆಂದು ಬೇಡಿಕೊಂಡು ಹಾಲೆರೆಯುತ್ತಾರೆ.ನಾಗರಪಂಚಮಿ ಹಬ್ಬದಿಂದ ಶ್ರಾವಣ ಮಾಸ ಮುಕ್ತಾಯದವರೆಗೂ ಎಲ್ಲ ಓಣಿಗಳಲ್ಲಿ ಹಾಗೂ ಗ್ರಾಮಗಳಲ್ಲಿ ಸಣ್ಣ ಸಣ್ಣ ಹುಡುಗರು ಗುಂಪಾಗಿ ಸೇರಿಕೊಂಡು ಬಗರಿ ಆಟವನ್ನು ಆಡುತ್ತಾರೆ. ಹುಡುಗಿಯರು ನಾಗಪ್ಪನಿಗೆ ಹಾಲೆರೆದ ಕೊಬ್ಬರಿ ಬಟ್ಟಲಗಳಿಗೆ ದಾರವನ್ನು ಕಟ್ಟಿ ಬೊಲಬಗು ಆಟವನ್ನು ಆಡುತ್ತಾರೆ, ಸಂಭ್ರಮಿಸುತ್ತಾರೆ. ಮಾಂಜರಿ ಗ್ರಾಮದ ಕಲ್ಮೇಶ್ವರ ಮಂದಿರದಲ್ಲಿ ಗ್ರಾಮದ ಕುಂಬಾರ್ ಮನೆತನದವರು  ಸೇರಿಕೊಂಡು ಮಣ್ಣಿನ ನಾಗದೇವತೆಯನ್ನು ನಿರ್ಮಿಸಿ ಸಾಮೂಹಿಕವಾಗಿ ಹಾಲೆರೆದು, ನೈವೇದ್ಯ ತೋರಿಸಿ ಹಬ್ಬವನ್ನು ಆಚರಿಸಿದರು. ಚಿಕ್ಕೋಡಿ  ತಾಲೂಕಿನ ಮಾಂಜರಿ ಯದೂರ್ ಚಂದುರ್ ಇಂಗಳಿ ಅಂಕಲಿ ಸವದತ್ತಿ ನಸಲಪುರ್ ಶುರುಗುಪ್ಪಿ ಗ್ರಾಮದಲ್ಲಿ ಎಲ್ಲ ಜನತೆ ಪಾಲ್ಗೊಂಡು ನಾಗರಪಂಚಮಿ ಹಬ್ಬವನ್ನು ಆಚರಿಸದರು.

 **ಮಹಿಳೆಯರಿಗೆ ನಾಗಪಂಚಮಿ ವಿಶೇಶವಾಗಿದೆ. ತವರೂರಿಗೆ ಬಂದು ಹಡೆದವರನ್ನು ನೆನಪಿಸಿಕೊಳ್ಳುವ ಹಬ್ಬ ಇದೊಂದೆ ಆಗಿರುವರಿಂದ ಮತ್ತು ನಾರಿಗೆ ಗೆಳತಿಯರೊಂದಿಗೆ ಹಬ್ಬ ಆಚರಿಸುವುದೆ ಒಂದು ಸಂಭ್ರಮವಾಗಿದೆ. 

-ಅನಿತಾ ಕೋಳಿ ಇಂಗಳಿ ಗ್ರಹಿಣಿ 


ಸುದ್ದಿ ಓದಿ